ಗೆಲ್ಲಲೇಬೇಕಾದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್, 52 ರನ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿದೆ.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 165/9 ರನ್ಗಳಿಸಿತು. ಟಾರ್ಗೆಟ್ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ 17.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಗುವ ಮೂಲಕ 52 ರನ್ಗಳ ಹೀನಾಯ ಸೋಲನುಭವಿಸಿತು.
![IPL 2022: ಮುಂಬೈ ವಿರುದ್ಧ ನೈಟ್ ರೈಡರ್ಸ್ ಗೆಲುವಿನ ಪರಾಕ್ರಮ; ಕೊಲ್ಕತ್ತಾ ಪ್ಲೇ-ಆಫ್ ಕನಸು ಜೀವಂತ 3 VENKATESH RAHANE](http://sportskarnataka.com/wp-content/uploads/2022/05/VENKATESH-RAHANE.jpg)
ವೆಂಕಟೇಶ್-ರಾಣ ಆಸರೆ:
ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ 43 ರನ್(24 ಬಾಲ್, 3 ಬೌಂಡರಿ, 4 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 1ನೇ ಕ್ರಮಾಂಕದಲ್ಲಿ ಬಂದ ನಿತೀಶ್ ರಾಣ 43 ರನ್(26 ಬಾಲ್, 3 ಬೌಂಡರಿ, 4 ಸಿಕ್ಸ್) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಇವರ ಹೊರತಾಗಿ ಅಜಿಂಕ್ಯಾ ರಹಾನೆ(25), ರಿಂಕು ಸಿಂಗ್(23*) ಉಪಯುಕ್ತ ಕಾಣಿಕೆ ನೀಡಿದರು. ಉಳಿದಂತೆ ನಾಯಕ ಶ್ರೇಯಸ್ ಅಯ್ಯರ್(6), ಆಂಡ್ರೆ ರಸೆಲ್(9), ಶೆಲ್ಡನ್ ಜ್ಯಾಕ್ಸನ್(5), ಪ್ಯಾಟ್ ಕಮ್ಮಿನ್ಸ್(0), ಸುನೀಲ್ ನರೈನ್(0) ಹಾಗೂ ಟಿಮ್ ಸೌಥಿ(0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
![IPL 2022: ಮುಂಬೈ ವಿರುದ್ಧ ನೈಟ್ ರೈಡರ್ಸ್ ಗೆಲುವಿನ ಪರಾಕ್ರಮ; ಕೊಲ್ಕತ್ತಾ ಪ್ಲೇ-ಆಫ್ ಕನಸು ಜೀವಂತ 4 JASPRIT BHUMRAH](http://sportskarnataka.com/wp-content/uploads/2022/05/JASPRIT-BHUMRAH.jpg)
ಬುಮ್ರಾ ಆಕ್ರಮಣಕಾರಿ ದಾಳಿ:
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಅಷ್ಟೇನು ಉತ್ತಮ ತೋರದ ಜಸ್ಪ್ರೀತ್ ಬುಮ್ರ(5/10) ತಮ್ಮ ಬೌಲಿಂಗ್ ಖದರ್ ತೋರಿದರು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಬುಮ್ರಾ, ಕೆಕೆಆರ್ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕಾರ್ತಿಕೇಯನ್ 2, ಡೆನಿಯಲ್ ಸ್ಯಾಮ್ಸ್ ಹಾಗೂ ಮುರುಗನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಮುಂಬೈ ಬ್ಯಾಟಿಂಗ್ ವೈಫಲ್ಯ:
ಕೆಕೆಆರ್ ನೀಡಿದ 166 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮ(2), ತಿಲಕ್ ವರ್ಮ(6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ರಮಣ್ದೀಪ್ ಸಿಂಗ್(12), ಟಿಮ್ ಡೇವಿಡ್(13), ಡೆನಿಯಲ್ ಸ್ಯಾಮ್ಸ್(1), ಎಂ.ಅಶ್ವಿನ್(0), ಕಾರ್ತಿಕೇಯಾ(3), ಕೈರನ್ ಪೊಲಾರ್ಡ್(15) ಹಾಗೂ ಜಸ್ಪ್ರೀತ್ ಬುಮ್ರ(0) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ಗೆ ಮರಳಿದರು. ಪರಿಣಾಮ 44 ರನ್ಗಳಿಗೆ 8 ವಿಕೆಟ್ ಕಳೆದುಕೊಂಡ ಮುಂಬೈ 113 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಮುಂಬೈ ಪರ ಮೂವರು ಬ್ಯಾಟ್ಸ್ಮನ್ಗಳು ರನೌಟ್ ಬಲೆಗೆ ಬಿದ್ದರು.
![IPL 2022: ಮುಂಬೈ ವಿರುದ್ಧ ನೈಟ್ ರೈಡರ್ಸ್ ಗೆಲುವಿನ ಪರಾಕ್ರಮ; ಕೊಲ್ಕತ್ತಾ ಪ್ಲೇ-ಆಫ್ ಕನಸು ಜೀವಂತ 5 ISHAN KISHAN](http://sportskarnataka.com/wp-content/uploads/2022/05/ISHAN-KISHAN.jpg)
ಕಿಶಾನ್ ಕಿಶನ್ ಪ್ರತಿರೋಧ:
ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರು ನೆಲಕಚ್ಚಿ ನಿಂತು ಆಡಿದ ಇಶಾನ್ ಕಿಶನ್ 51 ರನ್(43 ಬಾಲ್, 5 ಬೌಂಡರಿ, 1 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. ಕೆಕೆಆರ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕಿಶನ್, ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಉಳಿದ ಆಟಗಾರರಿಂದ ಸೂಕ್ತ ಜೊತೆಯಾಟ ದೊರೆಯಲಿಲ್ಲ.
![IPL 2022: ಮುಂಬೈ ವಿರುದ್ಧ ನೈಟ್ ರೈಡರ್ಸ್ ಗೆಲುವಿನ ಪರಾಕ್ರಮ; ಕೊಲ್ಕತ್ತಾ ಪ್ಲೇ-ಆಫ್ ಕನಸು ಜೀವಂತ 6 PAT CUMMINS](http://sportskarnataka.com/wp-content/uploads/2022/05/PAT-CUMMINS.jpg)
ಕೆಕೆಆರ್ ಸಾಂಘಿಕ ಬೌಲಿಂಗ್:
ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಕೆಕೆಆರ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡಿತು. ಪ್ರಮುಖವಾಗಿ ಪ್ಯಾಟ್ ಕಮ್ಮಿನ್ಸ್(3/22) ಉತ್ತಮ ಬೌಲಿಂಗ್ ಪ್ರದರ್ಶಿಸಿದರೆ. ಆಂಡ್ರೆ ರಸೆಲ್(2/22), ಟಿಮ್ ಸೌಥಿ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
ಪ್ಲೇ-ಆಫ್ ರೇಸ್ನಲ್ಲಿ ಕೆಕೆಆರ್:
ಮುಂಬೈ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 52 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಕೊಲ್ಕತ್ತಾ ನೈಟ್ ರೈಡರ್ಸ್, ಪ್ಲೇ-ಆಫ್ ರೇಸ್ನಲ್ಲಿ ಉಳಿದಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಪಾಯಿಂಟ್ಸ್ ಟೇಬಲ್ನಲ್ಲಿ 10 ಅಂಕದೊಂದಿಗೆ 7ನೇ ಸ್ಥಾನಕ್ಕೇರಿದರೆ. ಪ್ರಸಕ್ತ ಸೀಸನ್ನಲ್ಲಿ ಸೋಲಿನ ಆಘಾತ ಅನುಭವಿಸಿರುವ ಮುಂಬೈ ಇಂಡಿಯನ್ಸ್ 9ನೇ ಸೋಲು ಕಂಡಿತು.