ipl 2022 ಲಕ್ನೋ ಸೂಪರ್ ಜೈಂಟ್ಸ್ ತಂಡದ ಟಾಪ್ ಸಿಕ್ರೇಟ್ ಏನು ? ರಾಹುಲ್ ಹೇಳಿದ್ದು ಹೀಗೆ..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಹೊಸದಾಗಿ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಸೇರಿಕೊಂಡಿವೆ. ಸಂಜೀವ್ ಗೋಯೆಂಕಾ ಮಾಲೀಕತ್ವದ ಲಕ್ನೋ ತಂಡದ ಹೆಸರು ಕೂಡ ಬಹಿರಂಗಗೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಎಂದು ತಂಡದ ಹೆಸರನ್ನು ಘೋಷಣೆ ಮಾಡಲಾಗಿದೆ.
ಅಂದ ಹಾಗೇ ಎಲ್ಲರಿಗೂ ಗೊತ್ತಿರುವ ಹಾಗೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಮ್ಮ ಕನ್ನಡಿಗ ಕೆ.ಎಲ್. ರಾಹುಲ್ ಅವರು ಮುನ್ನಡೆಸಲಿದ್ದಾರೆ. 17 ಕೋಟಿ ರೂಪಾಯಿಯ ದಾಖಲೆಯ ಮೊತ್ತದೊಂದಿಗೆ ಕೆ.ಎಲ್. ರಾಹುಲ್ ಲಕ್ನೋ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
IPL 2022: KL Rahul reveals why Lucknow Super Giants signed Stoinis and Ravi Bishnoi
ಅಲ್ಲದೆ ತಂಡಕ್ಕೆ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ರವಿ ಬಿಷ್ಣೋಯ್ ಅವರನ್ನು ಕೂಡ ಸೇರಿಸಿಕೊಂಡಿದ್ದಾರೆ.
ಇದೀಗ ತನ್ನ ತಂಡಕ್ಕೆ ಮಾರ್ಕಸ್ ಸ್ಟೋನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿರುವ ಹಿಂದಿನ ಗುಟ್ಟನ್ನು ಕೆ.ಎಲ್. ರಾಹುಲ್ ಬಹಿರಂಗಪಡಿಸಿದ್ದಾರೆ.
ಸ್ಟೋನಿಸ್ ಮತ್ತು ರವಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಯೋಚನೆ ತುಂಬಾ ಸಿಂಪಲ್ ಆಗಿದೆ. ತಂಡಕ್ಕೆ ಮೂರು ಪಿಲ್ಲರ್ ಗಳು ಬೇಕಾಗಿದ್ದವು. ಆರಂಭಿಕನಾಗಿ ನಾನು ಕಣಕ್ಕಿಳಿಯುತ್ತೇನೆ. ಹಾಗೇ ತಂಡಕ್ಕೆ ಉಪಯುಕ್ತ ಆಲ್ ರೌಂಡರ್ ನ ಅವಶ್ಯಕತೆ ಇತ್ತು. ಸ್ಟೋನಿಸ್ ಅವರು ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅದೇ ರೀತಿ ಆರನೇ ಬೌಲರ್ ಆಗಿಯೂ ತಂಡಕ್ಕೆ ನೆರವಾಗುತ್ತಾರೆ. ಸ್ಟೋನಿಸ್ ಆಟವನ್ನು ಬಿಗ್ ಬ್ಯಾಷ್ ಟೂರ್ನಿಯಲ್ಲಿ ನೋಡಿದ್ದೇವೆ. ಸ್ಟೋನಿಸ್ ತಂಡಕ್ಕೆ ಉಪಯುಕ್ತ ಆಟಗಾರ. ಯಾವುದೇ ಹಂತದಲ್ಲೂ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮಥ್ರ್ಯ ಅವರಲ್ಲಿದೆ ಎಂದು ಕೆ.ಎಲ್. ರಾಹುಲ್ ಹೇಳಿದ್ದಾರೆ.
ಇನ್ನು ರವಿ ಬಿಷ್ಣೋಯ್ ಅವರ ಬಗ್ಗೆ ಮಾತನಾಡಿದ ರಾಹುಲ್, ಇನ್ನು ಐಪಿಎಲ್ ಇತಿಹಾಸದಲ್ಲಿ ರಿಸ್ಟ್ ಸ್ಪಿನ್ನರ್ಸ್ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ರವಿಬಿಷ್ಣೋಯ್ ಅವರನ್ನು ಆಯ್ಕೆ ಮಾಡಲಾಗಿದೆ. ರವಿ ಬಿಷ್ಣೋಯ್ ಮತ್ತು ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದರು. ಹಾಗೇ ಮಾರ್ಕಸ್ ಸ್ಟೋನಿಸ್ ಕೂಡ ರಾಹುಲ್ ಜೊತೆ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದರು. ಆದ್ರೆ ಕಳೆದ ಎರಡು ಆವೃತ್ತಿಗಳಲ್ಲಿ ಮಾರ್ಕಸ್ ಸ್ಟೋನಿಸ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿದಿಸಿದ್ದರು.