Australian Open 2022- ಸೆಮೀಸ್ ಗೆ ಎಂಟ್ರಿಯಾದ ಸ್ಪೇನ್ ಗೂಳಿ ರಫೆಲ್ ನಡಾಲ್
ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು, ಡೆನಿಸ್ ಶಪೊವಾಲೊವ್ ವಿರುದ್ದ ಪ್ರಯಾಸದ ಜಯ ಸಾಧಿಸಿದ್ರು.
Australian Open 2022 Rafael Nadal celebrates winning his quarter-final match
ಈ ಮೂಲಕ ರಫಲೆ ನಡಾಲ್ ಅವರು ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೆ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಕೂಡ ಎದುರು ನೋಡುತ್ತಿದ್ದಾರೆ.
ಮೆಲ್ಬರ್ನ್ ಪಾರ್ಕ್ ನ ರಾಡ್ ಲಾವೆರ್ ಆರೆನಾ ಅಂಗಣದಲ್ಲಿ ನಡೆದ ಜಿದ್ದಾ ಜಿದ್ದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ 6-3, 6-4, 4-6, 3-6, 6-3ರಿಂದ ಡೆನಿಸ್ ಶಪೊವಾಲೊವ್ ಅವರನ್ನು ಪರಾಭವಗೊಳಿಸಿದ್ರು.
ಸೆಮಿಫೈನಲ್ ರಫೆಲ್ ನಡಾಲ್ ಅವರು ಮ್ಯಾಟೊ ಬೆರೆಟಿನಿ ಅಥವಾ ಗೇಲ್ ಮೊಂಫಿಲ್ಸ್ ಅವರನ್ನು ಎದುರಿಸಲಿದ್ದಾರೆ.
ಅಂದ ಹಾಗೇ ಎರಡು ತಿಂಗಳ ಹಿಂದೆ ಪಾದ ನೋವಿನಿಂದ ಬಳಲುತ್ತಿದ್ದ ರಫೆಲ್ ನಡಾಲ್ ಅವರು ತನ್ನ ಟೆನಿಸ್ ಬದುಕು ಮುಗಿಯಿತ್ತು ಅಂತನೇ ಅಂದುಕೊಂಡಿದ್ರು. ಇದೀಗ ಫಿನಿಕ್ಸ್ ನಂತೆ ಮೇಲೆದ್ದು ಬಂದಿದ್ದಾರೆ. ಅಲ್ಲದೆ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಲ್ಲಿ 36ನೇ ಬಾರಿ ಸೆಮೀಸ್ ನಲ್ಲಿ ಆಡುತ್ತಿದ್ದಾರೆ.