IPL 2022- KKR Vs LSG – ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್ – Lucknow Super Giants Probable Playing XIs
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 66ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ಸ್ ರೈಡರ್ಸ್ ತಂಡಗಳು ಹೋರಾಟ ನಡೆಸಲಿವೆ.
ಮುಂಬೈನ ಡಿ.ವೈ. ಪಾಟೀಲ್ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಹತ್ವದ ಪಂದ್ಯವಾಗಿದೆ. ಅದೇ ರೀತಿ ಕೆಕೆಆರ್ ತಂಡಕ್ಕೂ ಗೆಲ್ಲಲೇಬೇಕಾದ ಪಂದ್ಯವಾಗಿದೆ.
ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ 13 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ. ಐದು ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಎಂಟ್ರಿ ಗ್ಯಾರಂಟಿಯಾಗಿದೆ. ಆದ್ರೂ ಅಧಿಕೃತವಾಗಿ ಖಚಿತಪಡಿಸಿಕೊಳ್ಳಲು ರಾಹುಲ್ ಬಳಗ ಈ ಪಂದ್ಯದಲ್ಲಿ ಗೆಲುವನ್ನು ಎದುರು ನೋಡುತ್ತಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಹಿಂದಿನ ಎರಡು ಪಂದ್ಯಗಳನ್ನು ಸತತವಾಗಿ ಸೋತಿದೆ. ಹೀಗಾಗಿ ಹ್ಯಾಟ್ರಿಕ್ ಸೋಲಿನ ಅವಮಾನವನ್ನು ತಪ್ಪಿಸಿಕೊಳ್ಳಲು ಲಕ್ನೋ ತಂಡ ಶತ ಪ್ರಯತ್ನ ನಡೆಸಲಿದೆ.
ಮೇಲ್ನೋಟಕ್ಕೆ ತಂಡ ಬಲಿಷ್ಠವಾಗಿ ಕಂಡುಬಂದ್ರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಎಡವುತ್ತಿದ್ದಾರೆ. ಹಾಗೇ ಸಂಘಟಿತ ಆಟವನ್ನಾಡುವುದನ್ನು ಮರೆತಿದೆ. ಇದನ್ನು ಸರಿಪಡಿಸಿಕೊಂಡ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು ಸಾಧಿಸುವುದು ಕಷ್ಟವೇನೂ ಆಗಲ್ಲ. IPL 2022- KKR Vs LSG – Lucknow Super Giants Probable Playing XIs
ಇನ್ನುಳಿದಂತೆ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಹೊಸ ಪ್ರಯೋಗಕ್ಕೆ ಕೈ ಹಾಕುವ ಸಾಧ್ಯತೆಗಳಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ಹೆಚ್ಚು ನಂಬಿಕೊಂಡಿರುವುದು ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರನ್ನು. ಇವರಿಬ್ಬರು ಉತ್ತಮ ಆರಂಭ ನೀಡಿದ್ರೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್ ಅವರು ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಬಹುದು. ಇನ್ನೊಂದೆಡೆ ಆಯುಷ್ ಬಡೋನಿ ಅವರಿಗೆ ಅತೀಯಾದ ಆತ್ಮವಿಶ್ವಾಸವೇ ಮುಳುವಾಗುತ್ತಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವತ್ತ ಚಿತ್ತವನ್ನಿಡಬೇಕಿದೆ. ಮಾರ್ಕಸ್ ಸ್ಟೋನಿಸ್ ಮತ್ತು ಕೃನಾಲ್ ಪಾಂಡ್ಯ ಸಮಯೋಚಿತ ಆಟದತ್ತ ಗಮನಹರಿಸಬೇಕು.
ಬೌಲಿಂಗ್ ನಲ್ಲಿ ಆವೇಶ್ ಖಾನ್ ಮತ್ತು ಮೋಶಿನ್ ಖಾನ್ ಇನ್ನಷ್ಟು ಪರಿಣಾಕಾರಿಯಾದ್ರೆ ಕೆಕೆಆರ್ ಬ್ಯಾಟರ್ ಗಳಿಗೆ ಅಪಾಯ ತಪ್ಪಿದ್ದಲ್ಲ. ಅದೇ ರೀತಿ ರವಿ ಬಿಷ್ಣೋಯ್ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬೇಕಿದೆ.
ಒಟ್ಟಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆದ್ದು ಅಧಿಕೃತವಾಗಿ ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್
ಕೆ.ಎಲ್ ರಾಹುಲ್ (ನಾಯಕ)
ಕ್ವಿಂಟನ್ ಡಿ ಕಾಕ್
ದೀಪಕ್ ಹೂಡಾ
ಕೃನಾಲ್ ಪಾಂಡ್ಯ
ಆಯುಷ್ ಬಡೋನಿ
ಮಾರ್ಕಸ್ ಸ್ಟೋನಿಸ್
ಜೇಸನ್ ಹೋಲ್ಡರ್
ಮೋಶಿನ್ ಖಾನ್
ರವಿ ಬಿಷ್ಣೋಯ್
ದುಶ್ಮಂತ್ ಚಾಮೀರಾ
ಆವೇಶ್ ಖಾನ್