IPL 2022- ಮೌನ ಮುರಿದ ಕೆಕೆಆರ್ ಹೆಡ್ ಕೋಚ್- ಶುಭ್ಮನ್ ಬಗ್ಗೆ ಮೆಕಲಮ್ ಹೇಳಿದ್ದೇನು..?
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಭರದ ಸಿದ್ದತೆ ನಡೆಸುತ್ತಿವೆ. ಮಾರ್ಚ್ 27ರಿಂದ ಐಪಿಎಲ್ ಟೂರ್ನಿ ಆರಂಭವಾಗುವ ಸಾಧ್ಯತೆಗಳಿವೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
ಈಗಾಗಲೇ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹರಾಜಿನಲ್ಲಿ ಯಾವ ಆಟಗಾರರು ಎಷ್ಟು ಕೋಟಿಗೆ ಯಾವ ತಂಡದ ಪಾಲಾಗುತ್ತಾರೆ ಅನ್ನೋ ಕುತೂಹಲವಂತೂ ಇದ್ದೆ ಇದೆ.
ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಅವರು ಮೌನ ಮುರಿದಿದ್ದಾರೆ. ಬ್ರೆಂಡನ್ ಮೆಕಲಮ್ ಅವರ ಮಾತಿನ ದಾಟಿಯನ್ನು ಕೇಳಿದಾಗ ಸ್ವಲ್ಪ ಮಟ್ಟಿನ ಅಸಮಾಧಾನವಿದೆ. ಕೆಕೆಆರ್ ಮ್ಯಾನೇಜ್ ಮೆಂಟ್ ಹೆಡ್ ಕೋಚ್ ನ ಮಾತಿಗೆ ಬೆಲೆ ನೀಡಿಲ್ಲ ಅನ್ನೋ ಅನುಮಾನ ಕೂಡ ಮೂಡುತ್ತಿದೆ.
ಹೌದು, ಕೆಕೆಆರ್ ತಂಡದ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಅವರಿಗೆ, ಕೆಕೆಆರ್ ಟೀಮ್ ಮ್ಯಾನೇಜ್ ಮೆಂಟ್ ಶುಭ್ಮನ್ ಗಿಲ್ ಅವರನ್ನು ರಿಟೇನ್ ಮಾಡದೇ ಇರುವ ಬಗ್ಗೆ ಅಸಮಾಧಾನವಾಗಿದೆ.
ತಂಡದ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಬಾರಿ ಬಹಳಷ್ಟು ಆಟಗಾರರನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಶುಭ್ಮನ್ ಗಿಲ್ ಅವರು ರಿಟೇನ್ ಮಾಡದೇ ಇರುವುದು ತುಂಬಾ ಬೇಸರವಾಗಿದೆ. ಅದರೆ ಇದು ಜೀವನದ ಒಂದು ಭಾಗ. ನಾವು ಮುಂದಿನ ಐಪಿಎಲ್ ಹರಾಜಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೆಕಲಮ್ ಹೇಳಿದ್ದಾರೆ .
ಬ್ರೆಂಡನ್ ಮೆಕಲಮ್ ಅವರ ಈ ಹೇಳಿಕೆಯನ್ನು ಕೇಳಿದಾಗ ಶುಭ್ಮನ್ ಗಿಲ್ ಅವರನ್ನು ಕೆಕೆಆರ್ ತಂಡ ರಿಟೇನ್ ಮಾಡಿಕೊಳ್ಳಬೇಕಿತ್ತು ಎಂಬುದು ಅವರ ಪ್ಲಾನ್ ಆಗಿತ್ತು ಎಂಬುದು ಅಷ್ಟೇ ಸತ್ಯ.
2018ರಲ್ಲಿ ಶುಭ್ಮನ್ ಗಿಲ್ ಅವರು ಕೆಕೆಆರ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಕೆಕೆಆರ್ ತಂಡದ ಪರ ಗಿಲ್ ಅವರು 58 ಪಂದ್ಯಗಳನ್ನು ಆಡಿದ್ದು, 51.49ರ ಸರಾಸರಿಯಲ್ಲಿ 1417 ರನ್ ಗಳಿಸಿದ್ದರು.
IPL 2022: KKR Head Coach Brendon McCullum Expresses Disappointment
ಇದೀಗ 15ನೇ ಐಪಿಎಲ್ ಟೂರ್ನಿಯಲ್ಲಿ ಶುಭ್ಮನ್ ಗಿಲ್ ಅವರು ಅಹಮಾದಾಬಾದ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಇನ್ನು ಕೆಕೆಆರ್ ತಂಡವು, ಆಂಡ್ರೆ ರಸೆಲ್ 12 ಕೋಟಿ ರೂ, ವರುಣ್ ಚಕ್ರವರ್ತಿ 8 ಕೋಟಿ ರೂ. ವೆಂಕಟೇಶ್ ಅಯ್ಯರ್ 8 ಕೋಟಿ ರೂ. ಹಾಗೂ ಸುನೀಲ್ ನರೇನ್ 6 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿದೆ.
ಹಾಗೇ ನಾಯಕ ಇಯಾನ್ ಮೊರ್ಗಾನ್, ದಿನೇಶ್ ಕಾರ್ತಿಕ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಕೈಬಿಟ್ಟಿದೆ.
ಇದೇ ವೇಳೆ, ಬ್ರೆಂಡನ್ ಮೆಕಲಮ್ ಅವರು ಪ್ಯಾಟ್ ಕಮಿನ್ಸ್ ಬಗ್ಗೆಯೂ ಮಾತನಾಡಿದ್ದಾರೆ. ಪ್ಯಾಟ್ ಕಮಿನ್ಸ್ ಅವರನ್ನು 15.5 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿತ್ತು. ಕೆಲವರು ಅವರಿಗೆ ನೀಡಿರುವ ದುಡ್ಡಿಗೆ ಸರಿಯಾದ ಪ್ರದರ್ಶನವನ್ನು ನೀಡಿಲ್ಲ ಎಂದು ಟೀಕೆ ಮಾಡುತ್ತಾರೆ. ಆದ್ರೆ ಈ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾಕಂದ್ರೆ ಪ್ಯಾಟ್ ಕಮಿನ್ಸ್ ಅವರು ಶಿಸ್ತುಬದ್ದವಾಗಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಎಂದು ಮೆಕಲಮ್ ಹೇಳಿದ್ದಾರೆ. ಹಾಗೇ ಆಂಡ್ರೆ ರಸೆಲ್, ಸುನೀಲ್ ನರೇನ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ರಿಟೇನ್ ಮಾಡಿಕೊಂಡಿರುವ ಬಗ್ಗೆಯೂ ಬ್ರೆಂಡನ್ ಮೆಕಲಮ್ ಸಮರ್ಥನೆ ನೀಡಿದ್ದಾರೆ.