ಕ್ಯಾನ್ಬೆರಾ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕೈಕ ಮಹಿಳಾ ಆಶಸ್ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು.
ಪಂದ್ಯದಲ್ಲಿ ಇಂಗ್ಲೆಂಡ್ 257 ರನ್ ಗಳ ಗುರಿ ಬೆನ್ನಟ್ಟಿ, ಕೊನೆಯ ದಿನ ಪಂದ್ಯ ಗೆಲ್ಲಲು 12 ಎಸೆತಗಳಲ್ಲಿ 13 ರನ್ ಗಳಿಸಬೇಕಿತ್ತು. ವಿಶೇಷವೆಂದರೆ ಈ ಗುರಿಯನ್ನು ಬೆನ್ನಟ್ಟಿದ್ದಾಗ ಕೈಯಲ್ಲಿ ಒಂದೇ ವಿಕೆಟ್ ಮಾತ್ರ ಉಳಿದಿತ್ತು. ಇಂಗ್ಲೆಂಡ್ ಕೊನೆಯ ಎರಡು ಓವರ್ಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ಗಳನ್ನು ಉಳಿಸಿ ಪಂದ್ಯವನ್ನು ಅತ್ಯಂತ ರೋಚಕ ರೀತಿಯಲ್ಲಿ ಡ್ರಾ ಮಾಡಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ ನಲ್ಲಿ9 ವಿಕೆಟ್ ಗೆ 337ರನ್ ಗೆ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 297 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ನಲ್ಲಿ ಕಾಂಗರೂ ತಂಡ 40 ರನ್ಗಳ ಮುನ್ನಡೆ ಸಾಧಿಸಲು ಶಕ್ತವಾಯಿತು. ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಗೆ 216ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್ ಗೆ 257 ರನ್ಗಳ ಗುರಿಯನ್ನು ನೀಡಿತು. ಪಂದ್ಯದ ಮೂರನೇ ದಿನದಂದು, ಮಳೆಯು ಸಾಕಷ್ಟು ಅಡ್ಡಿಪಡಿಸಿತು, ಆದರೆ ಇದಾದ ನಂತರವೂ ಪಂದ್ಯವು ರೋಚಕ ತಿರುವನ್ನು ತಲುಪಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಸ್ಕೋರ್ 44 ಓವರ್ ಗಳಲ್ಲಿ 6 ವಿಕೆಟ್ ಗೆ 236 ಆಗಿತ್ತು. ತಂಡಕ್ಕೆ 24 ಎಸೆತಗಳಲ್ಲಿ 21 ರನ್ ಗಳ ಅಗತ್ಯವಿತ್ತು. ಎರಡೂ ತಂಡಗಳನ್ನು ಗೆಲ್ಲುವ ನೆಚ್ಚಿನ ತಂಡಗಳೆಂದು ಪರಿಗಣಿಸಲಾಗಿತ್ತು. ನಂತರ ಆಸ್ಟ್ರೇಲಿಯ 46ನೇ ಓವರ್ ಮತ್ತು 47ನೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಗೆ ಶಾಕ್ ನೀಡಿತು. ಇನ್ನು ಕಾಂಗರೂ ತಂಡ 13 ಎಸೆತಗಳಲ್ಲಿ 1 ವಿಕೆಟ್ ಹಾಗೂ ಇಂಗ್ಲೆಂಡ್ 12 ರನ್ ಗಳಿಸಬೇಕಿತ್ತು.
ಇಂಗ್ಲೆಂಡ್ ನ ಸೋಫಿ ಎಕ್ಲೆಸ್ಟೋನ್ ಒಂದು ಎಸೆತ ಹಾಗೂ ಕೇಟ್ ಕ್ರಾಸ್ ಪಂದ್ಯವನ್ನು ಡ್ರಾ ಮಾಡಲು 12 ಎಸೆತಗಳನ್ನು ಎಸೆತ ಎದುರಿಸಿದರು.