IPL 2022- KKR – ಕೆಕೆಆರ್ ತಂಡದಿಂದ ಹೊರಬಿದ್ದ ಅಜಿಂಕ್ಯಾ ರಹಾನೆ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರ ಅಜಿಂಕ್ಯಾ ರಹಾನೆ ಅವರು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ.
ಮಂಡಿ ನೋವಿನಿಂದ ಬಳಲುತ್ತಿರುವ ಅಜಿಂಕ್ಯಾ ರಹಾನೆ ಅವರು ಮನೆಗೆ ತೆರಳಿದ್ದಾರೆ. ಈ ವಿಚಾರವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಎಸ್ ಆರ್ ಎಚ್ ವಿರುದ್ಧದ ಪಂದ್ಯದ ವೇಳೆ ಅಜಿಂಕ್ಯಾ ರಹಾನೆ ಮಂಡಿ ನೋವಿಗೆ ತುತ್ತಾಗಿದ್ದರು. 24 ಎಸೆತಗಳಲ್ಲಿ ಮೂರು ಸಿಕ್ಸರ್ ಗಳ ಸಹಾಯದಿಂದ ರಹಾನೆ 28 ರನ್ ಕೂಡ ದಾಖಲಿಸಿದ್ದರು.
ಈ ಋತುವಿನಲ್ಲಿ ಅಜಿಂಕ್ಯಾ ರಹಾನೆ ಅವರು ಕೆಕೆಆರ್ ಪರ ಏಳು ಪಂದ್ಯಗಳನ್ನು ಆಡಿದ್ದರು. 19ರ ಸರಾಸರಿಯಲ್ಲಿ 133 ರನ್ ದಾಖಲಿಸಿದ್ದರು. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡ ಒಂದು ಕೋಟಿ ರೂಪಾಯಿ ನೀಡಿ ರಹಾನೆ ಅವರನ್ನು ಖರೀದಿ ಮಾಡಿತ್ತು. ಟೂರ್ನಿಯ ಆರಂಭದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ರಹಾನೆ ನಂತರ ಹೆಚ್ಚಿನ ಅವಕಾಶ ಸಿಗಲಿಲ್ಲ. IPL 2022- KKR – Ajinkya Rahane Ruled Out
ಇದೀಗ ಕೊನೆಯ ಪಂದ್ಯವನ್ನು ರಹಾನೆ ಮಿಸ್ ಮಾಡಿಕೊಂಡಿದ್ದಾರೆ. ಗಾಯದಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದಾರೆ. ರಹಾನೆ ಬೇಗನೇ ಗುಣಮುಖರಾಗಲಿ ಎಂದು ಕೆಕೆಆರ್ ತಂಡ ಟ್ವಿಟರ್ ನಲ್ಲಿ ಬರೆದುಕೊಂಡಿದೆ.
ಅಲ್ಲದೆ ಅಜಿಂಕ್ಯಾ ರಹಾನೆ ಅವರನ್ನು ಬಿಳ್ಕೋಡುವ ವಿಡಿಯೋ ವನ್ನು ಕೂಡ ಕೆಕೆಆರ್ ತಂಡ ಶೇರ್ ಮಾಡಿಕೊಂಡಿದೆ.
ಈ ಬಾರಿಯ ಐಪಿಎಲ್ ನಲ್ಲಿ ಕೆಕೆಆರ್ ತಂಡ ಆಡಿರುವ 13 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡಿದೆ. ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ.
https://twitter.com/i/status/1526449901194080256
ಅಜಿಂಕ್ಯಾ ರಹಾನೆ ಅವರು ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದಿಂದಲೂ ದೂರ ಉಳಿದಿದ್ದರು. ಕಳಪೆ ಫಾರ್ಮ್ ನಿಂದಾಗಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಆದ್ರೆ ರಣಜಿ ಟಊರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೀಗ ಮಂಡಿ ನೋವಿನಿಂದ ಗುಣಮುಖರಾಗಿ ಆದಷ್ಟು ಬೇಗ ಟೀಮ್ ಇಂಡಿಯಾದ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿ.