IPL 2022- K.L. Rahul – ಗರ್ಲ್ ಫ್ರೆಂಡ್ ಎದುರೇ ಶೂನ್ಯ ಸುತ್ತಿದ ಕೆ. ಎಲ್. ರಾಹುಲ್ . ಅನಗತ್ಯ ದಾಖಲೆ ಪಟ್ಟಿಗೆ ಸೇರಿಕೊಂಡ ಲಕ್ನೋ ಕ್ಯಾಪ್ಟನ್..!
![IPL 2022- K.L. Rahul - ಗರ್ಲ್ ಫ್ರೆಂಡ್ ಎದುರೇ ಶೂನ್ಯ ಸುತ್ತಿದ ಕೆ. ಎಲ್. ರಾಹುಲ್ . ಅನಗತ್ಯ ದಾಖಲೆ ಪಟ್ಟಿಗೆ ಸೇರಿಕೊಂಡ ಲಕ್ನೋ ಕ್ಯಾಪ್ಟನ್..! 3 kl rahul Trent Boul ipl rr lsg sports karnataka](http://sportskarnataka.com/wp-content/uploads/2022/04/kl-rahul.jpg)
ಕೆ.ಎಲ್. ರಾಹುಲ್. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ. ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ್ರೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಆಡಿರುವ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದ್ರೆ ತಂಡದ ನಾಯಕ ಕೆ.ಎಲ್. ರಾಹುಲ್ ಅವರ ಬ್ಯಾಟ್ ನಿಂದ ನಿರೀಕ್ಷಿತ ಮಟ್ಟದ ರನ್ ಗಳು ಹರಿದು ಬರುತ್ತಿಲ್ಲ.
ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಡಕೌಟಾದ್ರು. ಟ್ರೆಂಟ್ ಬೌಲ್ಟ್ ಎಸೆತವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದ್ರು. ಹಾಗಂತ ಕೆ.ಎಲ್. ರಾಹುಲ್ ಇದೇನೂ ಮೊದಲ ಸಲ ಡಕೌಟ್ ಆಗಿರುವುದು. ಈ ಹಿಂದೆ ಗುಜರಾತ್ ಟೈಟಾನ್ಸ್ ವಿರುದ್ದವೂ ಮಹಮ್ಮದ್ ಶಮಿ ಎಸೆತದಲ್ಲಿ ಡಕೌಟಾಗಿದ್ದರು.
ಈ ಮೂಲಕ ಕೆ.ಎಲ್. ರಾಹುಲ್ ಅವರು ಐಪಿಎಲ್ ನ ಅನಗತ್ಯ ದಾಖಲೆ ಪಟ್ಟಿಗೆ ಸೇರಿಕೊಂಡಿದ್ದಾರೆ. IPL 2022- K.L. Rahul first-ball duck – joins Jayasuriya, Unmukt in unwanted list
![IPL 2022- K.L. Rahul - ಗರ್ಲ್ ಫ್ರೆಂಡ್ ಎದುರೇ ಶೂನ್ಯ ಸುತ್ತಿದ ಕೆ. ಎಲ್. ರಾಹುಲ್ . ಅನಗತ್ಯ ದಾಖಲೆ ಪಟ್ಟಿಗೆ ಸೇರಿಕೊಂಡ ಲಕ್ನೋ ಕ್ಯಾಪ್ಟನ್..! 4 kl rahul Trent Boul ipl rr lsg athiya shetty sports karnataka](http://sportskarnataka.com/wp-content/uploads/2022/04/rahul-and-athiya-1.jpg)
ಒಂದೇ ಆವೃತ್ತಿಯ ಟೂರ್ನಿಯಲ್ಲಿ ಎರಡು ಬಾರಿ ಡಕೌಟ್ ಆಗಿರುವ ಮೂರನೇ ಆಟಗಾರನಾಗಿದ್ದಾರೆ ಕೆ.ಎಲ್. ರಾಹುಲ್.
ಈ ಹಿಂದೆ 2009ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸನತ್ ಜಯಸೂರ್ಯ ಮತ್ತು 2013ರಲ್ಲಿ ಡೆಲ್ಲಿ ಪರ ಆಡಿದ್ದ ಉನ್ಮಕ್ತ್ ಚಂದ್ ಅವರು ಡಕೌಟ್ ಆಗಿದ್ದರು.
ಅಂದ ಹಾಗೇ, ಕೆ.ಎಲ್. ರಾಹುಲ್ ಈ ರೀತಿಯ ಅನಗತ್ಯ ದಾಖಲೆಗಳನ್ನು ಹೊಂದಿರುವುದು ಕೇವಲ ಐಪಿಎಲ್ ಗೆ ಮಾತ್ರ ಸೀಮಿತವಾಗಿಲ್ಲ. ಟೀಮ್ ಇಂಡಿಯಾದ ನಾಯಕನಾಗಿಯೂ ಅನಗತ್ಯ ದಾಖಲೆಯ ಪಟ್ಟಿಗೆ ಸೇರಿಕೊಂಡಿದ್ದರು. ವಿಪರ್ಯಾಸ ಅಂದ್ರೆ ತನ್ನ ಪ್ರೇಯಸಿ ಆತಿಯಾ ಶೆಟ್ಟಿ ಎದುರೇ ಕೆ.ಎಲ್. ರಾಹುಲ್ ಅವರು ಶೂನ್ಯ ಸುತ್ತಿರುವುದು.. ಅಷ್ಟೇ ಅಲ್ಲ, ಈ ಪಂದ್ಯವನ್ನು ಆತಿಯಾ ಶೆಟ್ಟಿ ಮತ್ತು ತಂದೆ ಸುನೀಲ್ ಶೆಟ್ಟಿ ಪಂದ್ಯ ವೀಕ್ಷಣೆ ಮಾಡಿದ್ದರು.
ಕೆ.ಎಲ್. ರಾಹುಲ್ ಅವರು ಶೂನ್ಯ ಸುತ್ತಿರುವುದರಿಂದ ತಂಡದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ ರಾಯಲ್ಸ್ ವಿರುದ್ಧ ಕೆ.ಎಲ್. ರಾಹುಲ್ ಸ್ವಲ್ಪ ಸಮಯ ಕ್ರೀಸ್ ನಲ್ಲಿ ಇರುತ್ತಿದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫಲಿತಾಂಶಕ್ಕೆ ವರದಾನವಾಗುತ್ತಿತ್ತು.
ಇನ್ನೊಂದೆಡೆ, ಕೆ.ಎಲ್. ರಾಹುಲ್ ಶೂನ್ಯ ಸುತ್ತಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರು ಟೀಕೆ ಕೂಡ ಮಾಡುತ್ತಿದ್ದಾರೆ.
ಆದ್ರೆ ಕೆ.ಎಲ್. ರಾಹುಲ್ ಯಾವುದೇ ಟೀಕೆಗೂ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕಂದ್ರೆ ಕೆ.ಎಲ್. ರಾಹುಲ್ ಗೆ ಯಾವ ರೀತಿ ಫಾರ್ಮ್ ಕಂಡುಕೊಳ್ಳುವುದು ಅನ್ನೋದು ಚೆನ್ನಾಗಿ ಗೊತ್ತಿದೆ. ಅಷ್ಟಕ್ಕೂ ಎಲ್ಲ ಆರಂಭ ಕೂಡ ಶೂನ್ಯದಿಂದಲೇ ಆರಂಭ ಅನ್ನೋದನ್ನು ಮರೆಯುವಂತಿಲ್ಲ.