ನಾಯಕ ಕೆ.ಎಲ್. ರಾಹುಲ್(68) ಸ್ಪೋಟಕ ಆಟ ಹಾಗೂ ದೀಪಕ್ ಹೂಡ(51) ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತನ್ನ ಎದುರಾಳಿ ಸನ್ರೈಸರ್ಸ್ ಹೈದ್ರಾಬಾದ್ಗೆ 170 ರನ್ಗಳ ಸವಾಲು ನೀಡಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 169 ರನ್ಗಳಿಸಿತು. ಲಕ್ನೋ ಪರ ನಾಯಕ ಕೆ.ಎಲ್.ರಾಹುಲ್(68) ಹಾಗೂ ದೀಪಕ್ ಹೂಡ(51) ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ನೆರವಾದರು.
ರಾಹುಲ್-ಹೂಡ ಅಬ್ಬರ
ಆರಂಭಿಕ ಆಘಾತದ ನಡುವೆಯೂ ಕೆ.ಎಲ್.ರಾಹುಲ್ ಹಾಗೂ ದೀಪಕ್ ಹೂಡ ಉತ್ತಮ ಆಟವಾಡಿದರು. ಹೈದ್ರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಸ್ಪೋಟಕ ಬ್ಯಾಟಿಂಗ್ನಿಂದ ಅಬ್ಬರಿಸಿದರು. ಅಲ್ಲದೇ 4ನೇ ವಿಕೆಟ್ಗೆ 87 ರನ್ ಕಲೆಹಾಕಿದರು. ಜವಾಬ್ದಾರಿಯ ಆಟವಾಡಿದ ನಾಯಕ ರಾಹುಲ್ 68 ರನ್ (50 ಬಾಲ್, 6 ಬೌಂಡರಿ, 1 ಸಿಕ್ಸ್) ತಂಡಕ್ಕೆ ಬೆನ್ನೆಲುಬಾದರು. ಒತ್ತಡದ ನಡುವೆ ಬ್ಯಾಟಿಂಗ್ನಲ್ಲಿ ನಾಯಕನಿಗೆ ಸಾಥ್ ನೀಡಿದ ದೀಪಕ್ ಹೂಡ 51 ರನ್ (33 ಬಾಲ್, 3 ಬೌಂಡರಿ, 3 ಸಿಕ್ಸರ್) ಐಪಿಎಲ್ನಲ್ಲಿ 5ನೇ ಅರ್ಧಶತಕ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಆಯುಷ್ ಬಡೋನಿ – ರನ್ ಸಿಡಿಸಿದರು.
ಲಕ್ನೋ ಆರಂಭಿಕ ಆಘಾತ:
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಆರಂಭಿಕ ಆಘಾತ ಕಂಡಿತು. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(1) ಬಹುಬೇಗನೆ ನಿರ್ಗಮಿಸಿದರು. ಇವರ ಬೆನ್ನಲ್ಲೇ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು 1ನೇ ಕ್ರಮಾಂಕದಲ್ಲಿ ಬಂದ ಎವಿನ್ ಲೂಯಿಸ್(1) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಇವರಿಬ್ಬರ ಪತನದ ನಂತರ ಕಣಕ್ಕಿಳಿದ ಮನೀಷ್ ಪಾಂಡೆ(11) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಸನ್ರೈಸರ್ಸ್ ಹೈದ್ರಾಬಾದ್ ಪರ ವಾಷಿಂಗ್ಟನ್ ಸುಂದರ್ (2/28), ರೊಮಾರಿಯೊ ಶೆಫರ್ಡ್ (2/25) ಹಾಗೂ ನಟರಾಜನ್ (2/26) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.