ಬ್ಯಾಟಿಂಗ್ ವೈಫಲ್ಯದ ನಡುವೆಯೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್, 2022ರ ಐಪಿಎಲ್‌ನ ಮೊದಲ ತಂಡವಾಗಿ ಪ್ಲೇ-ಆಫ್‌ಗೆ ಎಂಟ್ರಿಕೊಟ್ಟಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಸಾಂಘಿಕ ಪ್ರದರ್ಶನ ನೀಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೃದ್ಧಿಮಾನ್ ಸಾಹ(5) ಬಹುಬೇಗನೆ ನಿರ್ಗಮಿಸಿದರು. ನಂತರ ಕಣಕ್ಕಿಳಿದ ಮ್ಯಾಥ್ಯು ವೇಡ್(10) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(11) ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ 51 ರನ್‌ಗಳಿಗೆ ಪ್ರಮುಖ 3 ವಿಕೆಟ್ಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಗಿಲ್ ಅರ್ಧಶತಕದ ಆಸರೆ:
ಈ ಹಂತದಲ್ಲಿ 4ನೇ ವಿಕೆಟ್‌ಗೆ ಜೊತೆಯಾದ ಓಪನರ್ ಶುಭ್ಮನ್ ಗಿಲ್ 63 ರನ್(49 ಬಾಲ್, 7 ಬೌಂಡರಿ) ಹಾಗೂ ಅನುಭವಿ ಡೇವಿಡ್ ಮಿಲ್ಲರ್(26) ಉಪಯುಕ್ತ 52 ರನ್‌ಗಳ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಬಂದ ರಾಹುಲ್ ತೇವಾಟಿಯಾ(22*) ಜವಾಬ್ದಾರಿಯ ಆಟವಾಡಿದರು. ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರು ತಾಳ್ಮೆಯ ಆಟವಾಡಿದ ಶುಭ್ಮನ್ ಗಿಲ್, ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಅಂತಿಮವಾಗಿ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 144 ರನ್ ಕಲೆಹಾಕಿತು. ಲಕ್ನೋ ಪರ ಅವೇಶ್ ಖಾನ್ 2, ಮೊಸಿನ್ ಖಾನ್ ಹಾಗೂ ಜೇಸನ್ ಹೋಲ್ಡರ್ ತಲಾ 1 ವಿಕೆಟ್ ಪಡೆದರು.

ಟೈಟನ್ಸ್ ಮಾರಕ ದಾಳಿ:
ಎದುರಾಳಿ ತಂಡ ನೀಡಿದ 145 ರಸಾಧಾರಣ ಟಾರ್ಗೆಟ್ ಎದುರಿಸಿದ ಲಕ್ನೋ, ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(11) ಹಾಗೂ ಕೆ.ಎಲ್.ರಾಹುಲ್(8) ತಂಡಕ್ಕೆ ಆಸರೆಯಾಗಲಿಲ್ಲ. ನಂತರ ಬಂದ ದೀಪಕ್ ಹೂಡ(27) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರೆ. ಮಧ್ಯಮ ಕ್ರಮಾಂಕದಲ್ಲಿ ಬಂದ ಕರಣ್ ಶರ್ಮ(4), ಕೃನಾಲ್ ಪಾಂಡ್ಯ(5), ಆಯುಷ್ ಬಡೋನಿ(8), ಮಾರ್ಕಸ್ ಸ್ಟಾಯ್ನಿಸ್(2), ಹೋಲ್ಡರ್(1), ಮೋಸಿನ್(1) ಹಾಗೂ ಅವೇಶ್ ಖಾನ್(12) ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 13.5 ಓವರ್‌ನಲ್ಲಿ ಕೇವಲ 82 ರನ್‌ಗಳ ಹೀನಾಯ ಸೋಲನುಭವಿಸಿತು.
ʼಸ್ಪಿನ್ ಕಿಂಗ್ʼ ಕಮಾಲ್:
ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದ ಗುಜರಾತ್ ಟೈಟನ್ಸ್‌ಗೆ ಬೌಲರ್‌ಗಳು ಕೈಹಿಡಿದರು. ಅತ್ಯಂತ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ ಗುಜರಾತ್ ಟೈಟನ್ಸ್ ಪರ ರಶೀದ್ ಖಾನ್(4/24) ಅದ್ಭುತ ಪ್ರದರ್ಶನ ನೀಡಿದರೆ. ಸಾಯಿ ಕಿಶೋರ್ ಹಾಗೂ ಯಶ್ ದಯಾಳ್ ತಲಾ 2 ವಿಕೆಟ್ ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು.
ಪ್ಲೇ-ಆಫ್‌ಗೆ ಎಂಟ್ರಿ:
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 62 ರನ್‌ಗಳ ಅದ್ಭುತ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್, 2022ರ ಐಪಿಎಲ್‌ನಲ್ಲಿ ಪ್ಲೇ-ಆಫ್ ಹಂತಕ್ಕೆ ಮೊದಲ ತಂಡವಾಗಿ ಎಂಟ್ರಿ ಪಡೆಯಿತು. 12 ಪಂದ್ಯಗಳಲ್ಲಿ 9 ಗೆಲುವು, 3 ಸೋಲಿನಿಂದ 18 ಅಂಕಪಡೆದಿರುವ ಗುಜರಾತ್, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾಕಕ್ಕೇರಿದೆ.