IPL -RCB – DK – ಬಂದ.. ಬಂದಾ… ನೋಡು ಡಿ.ಕೆ. ಸಾಹೇಬ..!

ದಿನೇಶ್ ಕಾರ್ತಿಕ್… ಆರ್ ಸಿಬಿಯ ಮ್ಯಾಚ್ ವಿನ್ನರ್.. ಆರ್ ಸಿಬಿಯ ಮ್ಯಾಚ್ ಫಿನಿಶರ್. ಇದೇ ಕಾರಣಕ್ಕೆ ಆರ್ ಸಿಬಿ ಫ್ರಾಂಚೈಸಿಯು 5.50 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದು. ಹಾಗಂತ ಆರ್ ಸಿಬಿಯ ನಿರೀಕ್ಷೆಯನ್ನು ದಿನೇಶ್ ಕಾರ್ತಿಕ್ ಹುಸಿಗೊಳಿಸಲಿಲ್ಲ. ಒತ್ತಡದ ನಡುವೆಯೂ ಕೂಲ್ ಆಗಿಯೇ ಬ್ಯಾಟ್ ಬೀಸಿದ್ದ ದಿನೇಶ್ ಕಾರ್ತಿಕ್ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಆರ್ ಸಿಬಿ ಅಭಿಮಾನಿಗಳು.. ಖುಷಿಯಿಂದಲೇ ಬಂದ ಬಂದಾ ನೋಡು ಡಿ.ಕೆ. ಸಾಹೇಬ ಅಂತ ಹೇಳುತ್ತಿದ್ದಾರೆ.
ಹೌದು, ದಿನೇಶ್ ಕಾರ್ತಿಕ್.. ಅಲಿಯಾಸ್ ಡಿ.ಕೆ. ಅದು ಟೀಮ್ ಇಂಡಿಯಾದ ಜೆರ್ಸಿ ಆಗಿರಲಿ, ಆರ್ ಸಿಬಿ ಜೆರ್ಸಿಯಾಗಿರಲಿ.. ದಿನೇಶ್ ಕಾರ್ತಿಕ್ ಜೆರ್ಸಿ ಮೇಲೆ ಡಿ.ಕೆ. ಅಂತನೇ ಇರೋದು.. ಇದು ದಿನೇಶ್ ಕಾರ್ತಿಕ್ ಅವರ ಪೆಟ್ ನೆಮ್ ಕೂಡ ಹೌದು.

ಅಂದ ಹಾಗೇ ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟ್ಸ್ ಮೆನ್ ಮತ್ತು ವಿಕೆಟ್ ಕೀಪರ್. 2004ರಲ್ಲೇ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟ ದಿನೇಶ್ ಕಾರ್ತಿಕ್ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಆದ್ರೆ 2005ರಲ್ಲಿ ಟೀಮ್ ಇಂಡಿಯಾವನ್ನು ಮಹೇಂದ್ರ ಸಿಂಗ್ ಧೋನಿ ಸೇರಿಕೊಂಡ ನಂತರ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಹೋಗಿ ಬರುವ ಆತಿಥಿಯಾದ್ರು. ಧೋನಿ ಪ್ರಭಾವಳಿಯ ಮುಂದೆ ಡಿಕೆ ಮಂಕಾಗಿ ಹೋದ್ರು. ಆದ್ರೂ ಸಿಕ್ಕ ಅವಕಾಶವನ್ನು ಬಳಸಿಕೊಂಡ್ರೂ ತಂಡದ ಖಾಯಂ ಆಟಗಾರನಾಗಲು ಸಾಧ್ಯವಾಗಲಿಲ್ಲ.
ಆದ್ರೂ ದಿನೇಶ್ ಕಾರ್ತಿಕ್ 26 ಟೆಸ್ಟ್ ಪಂದ್ಯಗಳನ್ನು ಅಡಿದ್ದಾರೆ. ಒಂದು ಶತಕ ಹಾಗೂ ಏಳು ಅರ್ಧಶತಕಗಳ ಸಹಾಯದಿಂದ 1025 ರನ್ ಗಳಿಸಿದ್ದಾರೆ.
ಹಾಗೇ 94 ಏಕದಿನ ಪಂದ್ಯಗಳನ್ನು ಆಡಿರುವ ಡಿಕೆ 9 ಅರ್ಧಶತಕಗಳ ನೆರವಿನಿಂದ 1752 ರನ್ ಕಲೆ ಹಾಕಿದ್ದಾರೆ. ಇನ್ನು 32 ಟಿ-20 ಪಂದ್ಯಗಳಲ್ಲಿ 399 ರನ್ ಗಳಿಸಿದ್ದಾರೆ.
ಈ ನಡುವೆ ಐಪಿಎಲ್ ನಲ್ಲಿ 215 ಪಂದ್ಯಗಳಲ್ಲಿ 19 ಅರ್ಧಶತಕಗಳ ನೆರವಿನಿಂದ 4092 ರನ್ ದಾಖಲಿಸಿದ್ದಾರೆ.
ಏಷ್ಯಾಕಪ್ ಟೂರ್ನಿಯ ಫೈನಲ್ ನಲ್ಲಿ ಸಿಕ್ಸರ್ ಬಾರಿ ಟೀಮ್ ಇಂಡಿಯಾಗೆ ಐತಿಹಾಸಿಕ ಗೆಲುವು ತಂದುಕೊಟ್ಟ ಹೆಗ್ಗಳಿಕೆ ದಿನೇಶ್ ಕಾರ್ತಿಕ್ ಅವರದ್ದು. ಇನ್ನು ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಆರ್ ಸಿಬಿ, ಗುಜರಾತ್ ಲಯನ್ಸ್, ಕೆಕೆಆರ್ ಮತ್ತು ಇದೀಗ ಎರಡನೇ ಬಾರಿ ಆರ್ ಸಿಬಿ ತಂಡದ ಪರ ಆಡುತ್ತಿದ್ದಾರೆ. ಈ ಹಿಂದೆ ನಾಯಕನಾಗಿಯೂ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು.

ದಿನೇಶ್ ಕಾರ್ತಿಕ್, ಐಪಿಎಲ್ ನಲ್ಲಿ ಮ್ಯಾಚ್ ಫಿನಿಶರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2018ರಲ್ಲಿ ಆರ್ ಸಿಬಿ, ರಾಜಸ್ತಾನ ರಾಯಲ್ಸ್, ಸಿಎಸ್ ಕೆ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೆ ತಂಡವನ್ನು ಗೆಲುವಿನ ನಗೆ ಬೀರುವಂತೆ ಮಾಡಿದ್ದರು.
ಒತ್ತಡ ಎಷ್ಟೇ ಇರಲಿ, ತಾಳ್ಮೆಯಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಕಲೆಯನ್ನು ಡಿಕೆ ಚೆನ್ನಾಗಿ ಮೈಗೂಡಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದಿದ್ರೂ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿರುವ ದಿನೇಶ್ ಕಾರ್ತಿಕ್ ಹಲವು ರೋಚಕ ಪಂದ್ಯಗಳ ಗೆಲುವಿನ ರೂವಾರಿಯಾಗಿದ್ದಾರೆ. IPL 2022: Faf du Plessis Compares Dinesh Karthik With MS Dhoni
2022ರ ಐಪಿಎಲ್ ನ ಆರನೇ ಪಂದ್ಯದಲ್ಲಿ ಆರ್ ಸಿಬಿ ಒಂದು ಹಂತದಲ್ಲಿ ಕೆಕೆಆರ್ ವಿರುದ್ಧ ಸೋಲಿನ ಭೀತಿಯಲ್ಲಿತ್ತು. ಆದ್ರೆ ದಿನೇಶ್ ಕಾರ್ತಿಕ್ ಅವರು, ಹರ್ಷೆಲ್ ಪಟೇಲ್ ಜೊತೆ ಸೇರಿಕೊಂಡು ಆರ್ ಸಿಬಿಗೆ ರೋಚಕ ಗೆಲುವನ್ನು ತಂದುಕೊಟ್ಟರು.
ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ವೈಖರಿಯನ್ನು ನೋಡಿದ್ದ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೂಲ್ ಆಗಿಯೇ ಬ್ಯಾಟ್ ಬೀಸುವ ವೈಖರಿಯನ್ನು ಫಾಪ್ ಡುಪ್ಲೆಸಸ್ ಅವರು ಧೋನಿಯ ಜೊತೆಗೂ ಹೋಲಿಕೆ ಮಾಡಿದ್ದಾರೆ.
ಒಟ್ಟಿನಲ್ಲಿ ದಿನೇಶ್ ಕಾರ್ತಿಕ್ ಆರ್ ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗುತ್ತಿದ್ದಾರೆ. ಜೊತೆಗೆ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಆರ್ ಸಿಬಿಗೆ ತಂಡಕ್ಕೆ ಡಿಕೆ ನಹೀ.. ಡಿಕೆ ಸಾಹೇಬ ಆಗ್ತಾರಾ ಅನ್ನೋದನ್ನು ಕಾದು ನೋಡಬೇಕು.