ಯುರೋಪಿಯನ್ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ನಾರ್ತ್ ಮೆಸಿಡೋನಿಯಾ ತಂಡವನ್ನು 2-0 ಗೋಲುಗಳಿಂದ ಸೋಲಿಸಿದ ನಂತರ ಪೋರ್ಚುಗಲ್ ವಿಶ್ವಕಪ್ ಪ್ರವೇಶಿಸಿತು.
ಪೋರ್ಚುಗಲ್ ಪರ ಬ್ರೂನೋ ಫೆರ್ನಾಂಡಿಸ್ ಎರಡೂ ಗೋಲು ಗಳಿಸಿದರು. ಫುಟ್ಬಾಲ್ ವಿಶ್ವಕಪ್ ನವೆಂಬರ್ 21 ರಿಂದ ಡಿಸೆಂಬರ್ 18 ರವರೆಗೆ ಕತಾರ್ನಲ್ಲಿ ನಡೆಯಲಿದೆ. ಪೋರ್ಚುಗಲ್ನ ಈ ಗೆಲುವಿನೊಂದಿಗೆ ನಾರ್ತ್ ಮೆಸಿಡೋನಿಯಾ ವಿಶ್ವಕಪ್ನಲ್ಲಿ ಆಡುವ ಕನಸು ಭಗ್ನಗೊಂಡಿದೆ. ಇಲ್ಲಿಯವರೆಗೆ ಉತ್ತರ ಮೆಸಿಡೋನಿಯಾ ಒಂದೇ ಒಂದು ವಿಶ್ವಕಪ್ನಲ್ಲಿ ಆಡಿಲ್ಲ.
ಫಿಫಾ ವಿಶ್ವಕಪ್ ಕ್ವಾಲಿಫೈಯರ್ ನಲ್ಲಿ ಇಟಲಿಯನ್ನು ಮಣಿಸಿ ವಿಶ್ವಕಪ್ ನಿಂದ ಹೊರಹೋಗುವ ಹಾದಿಯನ್ನು ತೋರಿದ ನಾರ್ತ್ ಮೆಸಿಡೋನಿಯಾ, ಪೋರ್ಚುಗಲ್ ವಿರುದ್ಧ ಯಾವುದೇ ಅದ್ಭುತ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಪೋರ್ಚುಗಲ್ ಮ್ಯಾಸಿಡೋನಿಯಾಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಅವಕಾಶ ನೀಡಲಿಲ್ಲ. ಇಡೀ ಪಂದ್ಯದಲ್ಲಿ ತಂಡಕ್ಕೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ಎರಡು ಗೋಲುಗಳು ದಾಖಲಾದವು, ಆದರೆ ಎರಡೂ ಗೋಲುಗಳನ್ನು ಪೋರ್ಚುಗಲ್ ಗಳಿಸಿತು.
ಬ್ರೂನೋ ಪೋರ್ಚುಗಲ್ ಪರ ಎರಡೂ ಗೋಲುಗಳನ್ನು ಬಾರಿಸಿದರು. ಮೊದಲಾರ್ಧದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಅವರು ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ದ್ವಿತೀಯಾರ್ಧದಲ್ಲಿ ಡಿಯೊಗೊ ಜೋಟಾ ನೀಡಿದ ಉತ್ತಮ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 2-0 ಅಂತರದ ಜಯ ತಂದುಕೊಟ್ಟರು.
ಕ್ರಿಸ್ಟಿಯಾನೊ ರೊನಾಲ್ಡೊ ಕತಾರ್ನಲ್ಲಿ 5 ನೇ ವಿಶ್ವಕಪ್ ಆಡಲಿದ್ದಾರೆ. ರೊನಾಲ್ಡೊ ತಂಡಕ್ಕೆ ಬಂದ ನಂತರ ಪೋರ್ಚುಗಲ್ ಐದನೇ ಬಾರಿಗೆ ವಿಶ್ವಕಪ್ ತಲುಪಿದೆ. 2006ರಲ್ಲಿ ರೊನಾಲ್ಡೊ ಸಮ್ಮುಖದಲ್ಲಿ ಪೋರ್ಚುಗಲ್ ಅತ್ಯುತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ತಲುಪಿತ್ತು.
ಯುರೋಪ್ನಿಂದ ವಿಶ್ವಕಪ್ಗೆ ಅರ್ಹತೆ ಪಡೆದ ತಂಡಗಳು
ಯುರೋಪಿಯನ್ ರಾಷ್ಟ್ರಗಳ ಪೈಕಿ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್, ಪೋಲೆಂಡ್, ಪೋರ್ಚುಗಲ್, ಸರ್ಬಿಯಾ, ಸ್ಪೇನ್, ಸ್ವಿಟ್ಜರ್ಲೆಂಡ್, ಬೆಲ್ಜಿಯಂ, ಕ್ರೋಷಿಯಾ, ಡೆನ್ಮಾರ್ಕ್ ಕತಾರ್ನಲ್ಲಿ ನಡೆಯಲಿರುವ ವಿಶ್ವಕಪ್ಗೆ ಅರ್ಹತೆ ಪಡೆದಿವೆ.