IPL 2022- Dhanashree Verma .. ರಾಜಸ್ತಾನ ರಾಯಲ್ಸ್ ತಂಡದ ಹೊಸ ಚಿಯರ್ ಲೀಡರ್..!

ಧನ ಶ್ರೀ..ವೃತ್ತಿಯಲ್ಲಿ ದಂತ ವೈದ್ಯೆ, ನೃತ್ಯ ಸಂಯೋಜಕಿ.. ಯೂ ಟ್ಯೂಬರ್ ಸ್ಟಾರ್.. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹರ್ ಅವರ ಸಂಗಾತಿ ಕೂಡ.
ಹೌದು, ಧನ ಶ್ರೀ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಅದ್ರಲ್ಲೂ ಟೀಮ್ ಇಂಡಿಯಾ ಆಟಗಾರ ಯುಜುವೇಂದ್ರ ಚಾಹಲ್ ಅವರನ್ನು ಮದುವೆಯಾದ ನಂತ್ರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಯಾಕಂದ್ರೆ ಯುಜುವೇಂದ್ರ ಚಾಹಲ್ ಕೂಡ ಸಾಮಾಜಿಕ ಜಾಲ ತಾಣದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ.
ಅಂದ ಹಾಗೇ ಕಳೆದ ವರ್ಷ ಧನ ಶ್ರೀ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರು. 2021ರ ಐಪಿಎಲ್ ನಲ್ಲಿ ಆರ್ ಸಿಬಿ ಧ್ವಜ ಹಿಡಿದುಕೊಂಡು ಆರ್ ಸಿಬಿ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಕಾರಣ ಪತಿ ಯುಜುವೇಂದ್ರ ಚಾಹಲ್ ಅವರು ಆರ್ ಸಿಬಿ ತಂಡದ ಸ್ಟಾರ್ ಆಟಗಾರನಾಗಿದ್ದರು.

ಆದ್ರೆ 2022ರಲ್ಲಿ ಅನಿವಾರ್ಯವಾಗಿ ಧನ ಶ್ರೀ ಅವರು ರಾಜಸ್ತಾನ ರಾಯಲ್ಸ್ ತಂಡವನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ಆರ್ ಸಿಬಿ. ಯಾಕಂದ್ರೆ ಆರ್ ಸಿಬಿ ಚಾಹರ್ ಅವರನ್ನು ರಿಟೇನ್ ಮಾಡಿಕೊಂಡಿರಲಿಲ್ಲ. ಮೆಗಾ ಹರಾಜಿನಲ್ಲೂ ಖರೀದಿ ಮಾಡಲಿಲ್ಲ. ಕೊನೆಗೆ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಳ್ಳಬೇಕಾಯ್ತು. IPL 2022- Dhanashree Verma ..Rajasthan Royals’ New Cheerleader!
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಐದನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಅವರು 22ಕ್ಕೆ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೈದಾನದಲ್ಲಿ ಯುಜುವೇಂದ್ರ ಚಾಹಲ್ ಅವರು ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡುತ್ತಿದ್ರೆ, ಆರ್ ಆರ್ ಬಾಕ್ಸ್ ನಲ್ಲಿ ಧನ ಶ್ರೀ ಅವರು ತನ್ನ ಪತಿಗೆ ಸ್ಪೂರ್ತಿ ನೀಡುತ್ತಿದ್ದರು.
ಒಟ್ಟಿನಲ್ಲಿ ಎಸ್ ಆರ್ ಎಚ್ ಮತ್ತು ರಾಜಸ್ತಾನ ರಾಯಲ್ಸ್ ತಂಡದ ಪಂದ್ಯದ ವೇಳೆ ಆರ್ ಆರ್ ಬಾಕ್ಸ್ ನಲ್ಲಿದ್ದ ಧನ ಶ್ರೀ ಕೂಡ ಮಿಂಚಿದ್ರು.