IPL 2022 – Delhi Capitals- ರಿಷಬ್ ಪಂತ್ ಸಾರಥ್ಯದ ಡೆಲ್ಲಿ ತಂಡ ಹೇಗಿದೆ ? ಇಲ್ಲಿದೆ ಕ್ಯಾಪಿಟಲ್ಸ್ ತಂಡದ ಫುಲ್ ಡಿಟೇಲ್ಸ್..!

ಡೆಲ್ಲಿ ಕ್ಯಾಪಿಟಲ್ಸ್…. ಯುವ ಆಟಗಾರರ ದಂಡನ್ನೇ ಹೊಂದಿರುವ ತಂಡ. ಅದ್ರಲ್ಲೂ ಕಳೆದ ಮೂರು ಐಪಿಎಲ್ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್, ಕಳೆದ 14 ಟೂರ್ನಿಗಳಲ್ಲಿ ಆರು ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಅದರಲ್ಲಿ ಒಂದು ಬಾರಿ ರನ್ನರ್ ಅಪ್ ಗೆ ಸಮಾಧಾನಪಟ್ಟುಕೊಂಡಿದೆ. ಪ್ರಶಸ್ತಿ ಗೆಲ್ಲುವುದು ಇನ್ನೂ ಮರೀಚಿಕೆಯಾಗಿಬಿಟ್ಟಿದೆ.
ಅಂದ ಹಾಗೇ ಡೆಲ್ಲಿ ತಂಡಕ್ಕೆ ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರ ಅಭಯವಿದೆ. ರಿಷಬ್ ನಾಯಕತ್ವದ ಡೆಲ್ಲಿ ತಂಡದಲ್ಲಿ ಯುವ ಆಟಗಾರರ ಜೊತೆಗೆ ಅನುಭವಿ ಆಟಗಾರರು ಇದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ತಂಡ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ. ಶಿಖರ್ ಧವನ್, ಮಾರ್ಕಸ್ ಸ್ಟೋನಿಸ್, ಕಾಗಿಸೊ ರಬಾಡ, ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದೆ. ಬದಲಾಗಿ ಡೇವಿಡ್ ವಾರ್ನರ್, ಶಾರ್ದೂಲ್ ಥಾಕೂರ್, ರೊವ್ಮನ್ ಪಾವೆಲ್, ಯುವ ಆಟಗಾರ ಯಶ್ ಧುಲ್ ಅವರನ್ನು ಖರೀದಿ ಮಾಡಿದೆ. IPL 2022 – Delhi Capitals full team squad

ರಿಟೇನ್ ಮಾಡಿಕೊಂಡ ಆಟಗಾರರು
ರಿಷಬ್ ಪಂತ್ (16 ಕೋಟಿ ರೂ.
ಪೃಥ್ವಿ ಶಾ – 7.5 ಕೋಟಿ ರೂ.
ಅಕ್ಷರ್ ಪಟೇಲ್ – 9 ಕೋಟಿ
ಅನ್ರಿಚ್ ನೊರ್ಟಜೆ – 6.5 ಕೋಟಿ ರೂ
ನಾಲ್ಕು ಮಂದಿ ರಿಟೇನ್ ಆಟಗಾರರಿಗೆ ಮಾಡಿರುವ ಖರ್ಚು 39 ಕೋಟಿ ರೂ.
20 ಮಂದಿ ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರ ಖರ್ಚು – 50.90 ಕೋಟಿ ರೂ.
ಕೈಯಲ್ಲಿ ಉಳಿಸಿಕೊಂಡ ದುಡ್ಡು – 10 ಲಕ್ಷ ರೂ.
ಹಾಗೇ ನಾಯಕ ರಿಷಬ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್. ಆನ್ರಿಚ್ ನೊರ್ಟೆಜೆ ಅವರನ್ನು ರಿಟೈನ್ ಮಾಡಿಕೊಂಡಿದೆ. ರಿಟೇನ್ ಆಟಗಾರರಿಗೆ 39 ಕೊಟಿ ರೂಪಾಯಿ ವೆಚ್ಚ ಮಾಡಿದೆ. ಹಾಗೇ ಮೆಗಾ ಹರಾಜಿನಲ್ಲಿ 50.90 ಕೋಟಿ ಖರ್ಚು ಮಾಡಿ 20 ಆಟಗಾರರನ್ನು ಖರೀದಿ ಮಾಡಿದೆ. ಕೈಯಲ್ಲಿ 10 ಲಕ್ಷ ರೂಪಾಯಿ ಉಳಿಸಿಕೊಂಡಿದೆ. ತಂಡದಲ್ಲಿ ಒಟ್ಟು 24 ಆಟಗಾರರು ಇದ್ದಾರೆ. ಇದ್ರಲ್ಲಿ 17 ಭಾರತದ ಆಟಗಾರರು ಮತ್ತು ಏಳು ಮಂದಿ ವಿದೇಶಿ ಆಟಗಾರರು ಇದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ರಿಷಬ್ ಪಂತ್ (ನಾಯಕ) 16 ಕೋಟಿ ರೂ.
ಅಕ್ಷರ್ ಪಟೇಲ್ – 9 ಕೋಟಿ ರೂ.
ಪೃಥ್ವಿ ಶಾ – 7.5 ಕೋಟಿ ರೂ.
ಅನ್ರಿಚ್ ನೊರ್ಟಜೆ – 6.5 ಕೋಟಿ ರೂ
ಖರೀದಿ ಮಾಡಿದ ಆಟಗಾರರು
ಡೇವಿಡ್ ವಾರ್ನರ್ – 6.25 ಕೋಟಿ ರೂ.
ಅಶ್ವಿನ್ ಹೆಬ್ಬಾರ್ – 20 ಲಕ್ಷ ರೂ.
ಸಫ್ರಾಝ್ ಖಾನ್ – 20 ಲಕ್ಷ ರೂ.
ಕೆ.ಎಸ್. ಭರತ್ – 2 ಕೋಟಿ ರೂ.
ಮನ್ ದೀಪ್ ಸಿಂಗ್ – 1.10 ಕೋಟಿ ರೂ.
ರೊವ್ಮನ್ ಪಾವೆಲ್ – 2.80 ಕೋಟಿ ರೂ.
ಮುಸ್ತಾಫಿಝುರ್ ರಹಮಾನ್ – 2 ಕೋಟಿ ರೂ.
ಕುಲದೀಪ್ ಯಾದವ್ – 2 ಕೋಟಿ ರೂ.
ಖಲೀಲ್ ಅಹಮ್ಮದ್ – 5.25 ಕೋಟಿ ರೂ.
ಚೇತನ್ ಸಕಾರಿಯಾ – 4.2 ಕೋಟಿ ರೂ.
ಮಿಟ್ಚೆಲ್ ಮಾರ್ಶ್ – 6.50 ಕೋಟಿ ರೂ.
ಶಾರ್ದೂಲ್ ಥಾಕೂರ್ – 10.75 ಕೋಟಿ ರೂ.
ಕಮಲೇಶ್ ನಾಗರ್ ಕೋಟಿ – 1.1 ಕೋಟಿ ರೂ.
ಲಲಿತ್ ಯಾದವ್ – 65 ಲಕ್ಷ ರೂ.
ರಿಪಲ್ ಪಟೇಲ್ – 20 ಲಕ್ಷ ರೂ.
ಯಶ್ ಧುಲ್ – 50 ಲಕ್ಷ ರೂ.
ಪ್ರವೀಣ್ ದುಬೆ – 50 ಲಕ್ಷ ರೂ.
ಟೀಮ್ ಸೈಫರ್ಟ್ – 50 ಲಕ್ಷ ರೂ.
ಲುಂಗಿ ಎನ್ ಗಿಡಿ – 50 ಲಕ್ಷ ರೂ.
ವಿಕ್ಕಿ ಒಸ್ಟ್‍ವಾಲ್ – 20 ಲಕ್ಷ ರೂ.