Virat kohli – ಟಿ-20 ಕ್ರಿಕೆಟ್ ನಲ್ಲಿ 30ನೇ ಅರ್ಧಶತಕ – ರೋಹಿತ್ ಸಾಲಿಗೆ ಸೇರಿಕೊಂಡ ವಿರಾಟ್ ಕೊಹ್ಲಿ..!

ವಿರಾಟ್ ಕೊಹ್ಲಿಯ ಬಗ್ಗೆ ಯಾರು ಏನು ಬೇಕಾದ್ರೂ ಟೀಕೆ ಮಾಡಲಿ. ಆದ್ರೆ ದಾಖಲೆಗಳು ಮಾತ್ರ ಒಂದೊಂದಾಗಿ ಅವರ ಹೆಸರಿಗೆ ಸೇರಿಕೊಳ್ಳುತ್ತಿವೆ.
ಅಂದ ಹಾಗೇ ಆಧುನಿಕ ಕ್ರಿಕೆಟ್ ನಲ್ಲಿ ವಿರಾಟ್ ಆಡಲಿ, ಶೂನ್ಯಕ್ಕೆ ಔಟಾಗಲಿ, ಆಡದೇ ಇರಲಿ..ಆಡಿರುವ ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ಸಾಧನೆಗಳು ಇರುತ್ತವೆ.
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅರ್ಧಶತಕ ದಾಖಲಿಸಿ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.
ಇದ್ರ ಜೊತೆಗೆ ಮತ್ತೊಂದು ದಾಖಲೆ ಸಾಲಿಗೂ ಸೇರಿಕೊಂಡಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ ಅರ್ಧಶತಕ ದಾಖಲಿಸಿದ ಲಿಸ್ಟ್ ನಲ್ಲಿ ಸೇರಿಕೊಂಡಿದ್ದಾರೆ. ಅಂದ ಹಾಗೇ ಈ ಸಾಧನೆಯನ್ನು ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ಟಿ-20 ಪಂದ್ಯದಲ್ಲಿ ಗರಿಷ್ಠ 30 ಅರ್ಧಶತಕಗಳನ್ನು ದಾಖಲಿಸಿ ಅಗ್ರ ಸ್ಥಾನದಲ್ಲಿದ್ರು. ಇದೀಗ ವಿರಾಟ್ ಕೂಡ ರೋಹಿತ್ ಶರ್ಮಾ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. Virat Kohli scores 30th T20I half-century, goes level with Rohit Sharma
ಇನ್ನು ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಅವರು 26 ಅರ್ಧಶತಗಳನ್ನು ದಾಖಲಿಸಿದ್ರೆ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಮಾರ್ಟಿನ್ ಗಪ್ಟಿಲ್ ಅವರು ತಲಾ 22 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯ ಈ ಅರ್ಧಶತಕಕ್ಕೆ ಅವರ ಅಭಿಮಾನಿಗಳು ಸುಮ್ಮನಾಗುವುದಿಲ್ಲ. ಕ್ರಿಕೆಟ್ ಪಂಡಿತರು ಸುಮ್ಮನೆ ಕೂರುವುದಿಲ್ಲ. ಬದಲಾಗಿ ವಿರಾಟ್ ಶತಕ ದಾಖಲಿಸಬೇಕು ಎಂಬ ಹಂಬಲದಲ್ಲಿದ್ದಾರೆ. ಕ್ರಿಕೆಟ್ ವಿಶ್ಲೇಷಕರು ಮತ್ತು ವಿರಾಟ್ ಟೀಕಾಕಾರರು ವಿರಾಟ್ ಶತಕ ದಾಖಲಿಸದೇ ಎರಡುವರೆ ವರ್ಷ ಕಳೆಯಿತ್ತು ಅಂತ ಹೇಳುತ್ತಿದ್ದಾರೆ. ನೆನಪಿಡಿ, ವಿರಾಟ್ ತೀರಾ ಕೆಟ್ಟ ಫಾರ್ಮ್ ನಲ್ಲಿಲ್ಲ. ಹಾಗೇ ಸ್ಥಿರ ಪ್ರದರ್ಶನ ಕೊರತೆ ಇದೆ. ಹಾಗಂತ ಅವರ ಬ್ಯಾಟಿಂಗ್ ವೈಖರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಕ್ರಮಣಕಾರಿ ಪ್ರವೃತ್ತಿಯಿಂದ ಬ್ಯಾಟ್ ಬೀಸುವ ವಿರಾಟ್ ಗೆ ಈಗ ಶ್ರೀಲಂಕಾ ವಿರುದ್ದದ ಟಿ-20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿರಾಟ್ ಅವರ ಚುಟುಕು ಕ್ರಿಕೆಟ್ ನ ಅಬ್ಬರವನ್ನು ನಾವು ನೋಡುವುದು ಮುಂಬರುವ ಐಪಿಎಲ್ ನಲ್ಲಿ ಮಾತ್ರ. ಫೆಬ್ರವರಿ 20 ರಂದು ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ವಿರಾಟ್ ಗೆ ವಿಶ್ರಾಂತಿ ನೀಡಿದ್ರೂ ಅಚ್ಚರಿ ಏನಿಲ್ಲ.