ಡೇವಿಡ್ ವಾರ್ನರ್(92*) ಹಾಗೂ ರೋವ್ಮನ್ ಪೋವಲ್(6*) ಅಜೇಯ ಶತಕದ ಜೊತೆಯಾಟ ಹಾಗೂ ಬೌಲರ್ಗಳ ಸಾಂಘಿಕ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ 21 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್ಗಳಲ್ಲಿ 3 ವಿಕೆಟ್ಗೆ 207 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಸವಾಲು ಬೆನ್ನತ್ತಿದ ಸನ್ರೈಸರ್ಸ್ ಹೈದ್ರಾಬಾದ್, 20 ಓವರ್ಗಳಲ್ಲಿ 186/8 ರನ್ಗಳಿಸಲಷ್ಟೇ ಶಕ್ತವಾಯಿತು. ಸನ್ರೈಸರ್ಸ್ ಪರ ನಿಕೋಲಸ್ ಪೂರನ್(64) ಹಾಗೂ ಮಾರ್ಕ್ರಂ(42) ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಗೆಲುವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೇರಿದರೆ. ಮತ್ತೊಂದು ಸೋಲಿನ ಆಘಾತ ಅನುಭವಿಸಿದ ಸನ್ರೈಸರ್ಸ್, 6ನೇ ಸ್ಥಾನಕ್ಕೆ ಕುಸಿಯಿತು.
![IPL 2022: ವಾರ್ನರ್-ಪೋವೆಲ್ ಆರ್ಭಟ: ಬೌಲರ್ಗಳ ಸಾಂಘಿಕ ಆಟ: ಸನ್ರೈಸರ್ಸ್ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ 3 KANE](http://sportskarnataka.com/wp-content/uploads/2022/05/KANE.jpg)
SRH ಆರಂಭಿಕ ಆಘಾತ:
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 208 ರನ್ಗಳ ಕಠಿಣ ಸವಾಲು ಬೆನ್ನತ್ತಿದ ಸನ್ರೈಸರ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮ(7) ಹಾಗೂ ನಾಯಕ ಕೇನ್ ವಿಲಿಯಂಸನ್(4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ(22) ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದರು. ಪರಿಣಾಮ ಹೈದ್ರಾಬಾದ್ 37ಕ್ಕೆ ಆರಂಭಿಕ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
![IPL 2022: ವಾರ್ನರ್-ಪೋವೆಲ್ ಆರ್ಭಟ: ಬೌಲರ್ಗಳ ಸಾಂಘಿಕ ಆಟ: ಸನ್ರೈಸರ್ಸ್ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ 4 MARKRAM POORAN](http://sportskarnataka.com/wp-content/uploads/2022/05/MARKRAM-POORAN.jpg)
ಪೂರನ್-ಮಾರ್ಕ್ರಂ ಚೇತರಿಕೆ:
ಈ ಹಂತದಲ್ಲಿ ಜೊತೆಯಾದ ಐಡೆನ್ ಮಾರ್ಕ್ರಂ 42 ರನ್(25 ಬಾಲ್, 4 ಬೌಂಡರಿ, 3 ಸಿಕ್ಸ್) ಹಾಗೂ ನಿಕೋಲಸ್ ಪೂರನ್ 62 ರನ್(34 ಬಾಲ್, 2 ಬೌಂಡರಿ, 6 ಸಿಕ್ಸ್) ಉತ್ತಮ ಆಟವಾಡಿದರು. ಎಚ್ಚರಿಕೆಯ ಆಟವಾಡಿದ ಈ ಜೋಡಿ 4ನೇ ವಿಕೆಟ್ಗೆ 60(35) ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಏಕಾಂಗಿಯಾಗಿ ಹೋರಾಡಿದ ನಿಕೋಲಸ್ ಪೂರನ್, ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಉಳಿದಂತೆ ಶಶಾಂಕ್ ಸಿಂಗ್(10), ಸೀನ್ ಅಬಾಟ್(7), ಶ್ರೇಯಸ್ ಗೋಪಾಲ್ 9*, ಕಾರ್ತಿಕ್ ತ್ಯಾಗಿ(7), ಭುವನೇಶ್ವರ್ 5* ತಂಡಕ್ಕೆ ಆಸರೆಯಾಗಲಿಲ್ಲ.
![IPL 2022: ವಾರ್ನರ್-ಪೋವೆಲ್ ಆರ್ಭಟ: ಬೌಲರ್ಗಳ ಸಾಂಘಿಕ ಆಟ: ಸನ್ರೈಸರ್ಸ್ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ 5 NICHOLAS POORAN 1](http://sportskarnataka.com/wp-content/uploads/2022/05/NICHOLAS-POORAN-1.jpg)
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲರ್ಗಳು ಸಾಂಘಿಕ ಪ್ರದರ್ಶನ ನೀಡಿದರು. ಪ್ರಮುಖವಾಗಿ ಖಲೀಲ್ ಅಹ್ಮದ್(3/30) ಉತ್ತಮ ಬೌಲಿಂಗ್ ದಾಳಿ ನಡೆಸಿದರೆ. ಶಾರ್ದೂಲ್ ಥಾಕೂರ್(2/44), ಮಿಚೆಲ್ ಮಾರ್ಷ್(1/36), ಅನ್ರಿಕ್ ನೋಕಿಯಾ(1/35) ಹಾಗೂ ಕುಲ್ದೀಪ್ ಯಾದವ್(1/40) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
![IPL 2022: ವಾರ್ನರ್-ಪೋವೆಲ್ ಆರ್ಭಟ: ಬೌಲರ್ಗಳ ಸಾಂಘಿಕ ಆಟ: ಸನ್ರೈಸರ್ಸ್ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ 6 KHALEEL AHMED](http://sportskarnataka.com/wp-content/uploads/2022/05/KHALEEL-AHMED.jpg)
ವಾರ್ನರ್ – ಪೋವೆಲ್ ಅಬ್ಬರ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್, ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಮಂದೀಪ್ ಸಿಂಗ್(0) ಡಕೌಟ್ ಆಗಿ ಹೊರನಡೆದರೆ. ನಂತರ ಬಂದ ಮಿಚೆಲ್ ಮಾರ್ಷ್(10) ಹಾಗೂ ನಾಯಕ ರಿಷಬ್ ಪಂತ್(26) ನಿರೀಕ್ಷಿತ ಆಟವಾಡಲಿಲ್ಲ. ಆದರೆ ನಂತರ ಜೊತೆಯಾದ ಡೇವಿಡ್ ವಾರ್ನರ್ 92* ರನ್(58 ಬಾಲ್, 12 ಬೌಂಡರಿ, 3 ಸಿಕ್ಸ್) ಹಾಗೂ ರೋವ್ಮನ್ ಪೋವೆಲ್ 67* ರನ್(35 ಬಾಲ್, 3 ಬೌಂಡರಿ, 6 ಸಿಕ್ಸ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಹೈದ್ರಾಬಾದ್ ಬೌಲಿಂಗ್ ದಾಳಿಯನ್ನ ಮನಬಂದಂತೆ ದಂಡಿಸಿದ ಈ ಜೋಡಿ 4ನೇ ವಿಕೆಟ್ಗೆ ಅಜೇಯ 122(66) ರನ್ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ 207ಕ್ಕೆ ಏರಿಸಿದರು. ಸನ್ರೈಸರ್ಸ್ ಪರ ಭುವನೇಶ್ವರ್ ಕುಮಾರ್(1/25), ಸೀನ್ ಅಬಾಟ್(1/47), ಶ್ರೇಯಸ್ ಗೋಪಾಲ್(1/34) ಉತ್ತಮ ಬೌಲಿಂಗ್ ದಾಳಿ ನಡೆಸಿದರು.
warner and powell, ipl 2022, sports karnataka