IPL 2022- delhi capitals –Anrich Nortje – ಡೆಲ್ಲಿಗೆ ದುಬಾರಿಯಾದ್ರಾ ಘಾತಕ ವೇಗಿ ಆನ್ರಿಕ್ ನೊರ್ಟೆಜೆ ..!
2022ರ ಐಪಿಎಲ್ ಟೂರ್ನಿಯ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರು ವಿಕೆಟ್ ಗಳಿಂದ ಸೋಲು ಅನುಭವಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆದ್ರೂ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ದಾಖಲಿಸಿದ್ದು 149 ರನ್. ಸವಾಲನ್ನು ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ 19.4 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿಗೆ ಪ್ರಮುಖ ಕಾರಣ ಏನು ಎಂಬುದು ಚರ್ಚೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಡೆಲ್ಲಿ ತಂಡದ ಟ್ರಂಪ್ ಕಾರ್ಡ್ ಬೌಲರ್ ಆನ್ರಿಕ್ ನೊರ್ಟೆಜೆ ಅವರು ದುಬಾರಿಯಾಗಿದ್ದು ಡೆಲ್ಲಿ ತಂಡದ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಹೌದು, ಆನ್ರಿಕ್ ನೊರ್ಟೆಜೆ ಕಳೆದ ಎರಡು ವರ್ಷಗಳಿಂದ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಾಗಿಸೊ ರಬಾಡ ಬದಲು ಆನ್ರಿಕ್ ನೊರ್ಟೆಜೆ ಅವರನ್ನು ರಿಟೇನ್ ಕೂಡ ಮಾಡಿಕೊಂಡಿತ್ತು.
ಆದ್ರೆ ಗಾಯದಿಂದಾಗಿ ನೊರ್ಟೆಜೆ ಅವರು ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿತ್ತು. ಕೊನೆ ಕ್ಷಣದಲ್ಲಿ ತಂಡವನ್ನು ಸೇರಿಕೊಂಡಿದ್ದರು. ಕಳೆದ ಆರು ತಿಂಗಳುಗಳಿಂದ ಬೌಲಿಂಗ್ ತಾಲೀಮು ನಡೆಸಿಲ್ಲ. ಹೀಗಾಗಿ ಆನ್ರಿಕ್ ನೊರ್ಟೆಜೆ ಅವರು ಬೌಲಿಂಗ್ ನಲ್ಲಿ ಲಯ ತಪ್ಪಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. IPL 2022- delhi capitals -Anrich Nortje – after his flop show against LSG
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆನ್ರಿಕ್ ನೊರ್ಟೆಜೆ ಸಂಪೂರ್ಣವಾಗಿ ಲಯ ಕಳೆದುಕೊಂಡಿದ್ದರು. ಆನ್ರಿಕ್ ನೊರ್ಟೆಜೆ ಅವರು ತನ್ನ ಮೊದಲ ಓವರ್ ನಲ್ಲಿ 19 ರನ್ ನೀಡಿದ್ರು. ಬಳಿಕ ಎರಡನೇ ಓವರ್ ನಲ್ಲಿ 14 ರನ್ ನೀಡಿದ್ರು. ಹಾಗೇ ಎರಡು ಬೀಮರ್ ಎಸೆತಗಳನ್ನು ಹಾಕಿದ್ದರು. ಹೀಗಾಗಿ ಆನ್ರಿಕ್ ನೊರ್ಟೆಜೆ ಅವರು ಬೌಲಿಂಗ್ ಮುಂದುವರಿಸಲು ಅಂಪೈರ್ ಅವಕಾಶ ನೀಡಲಿಲ್ಲ. 2.2 ಓವರ್ ಗಳಲ್ಲಿ 35 ರನ್ ನೀಡಿದ್ದ ಆನ್ರಿಕ್ ನೊರ್ಟೆಜೆ ದುಬಾರಿಯಾಗಿ ಪರಿಣಮಿಸಿದ್ರು. 145, 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ದಾಳಿ ನಡೆಸಿದ್ರೂ ಪ್ರಯೋಜನವೇನೂ ಆಗಲಿಲ್ಲ. ಕ್ವಿಂಟನ್ ಡಿಕಾಕ್ ಅವರು ಆನ್ರಿಕ್ ನೊರ್ಟೆಜೆ ಅವರ ಎಸೆತಗಳಿಗೆ ಬೌಂಡರಿ ಮತ್ತು ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.
ಈ ನಡುವೆ, ಆನ್ರಿಕ್ ನೊರ್ಟೆಜೆ ಅವರು ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ. ಒಟ್ಟಿನಲ್ಲಿ ಆನ್ರಿಕ್ ನೊರ್ಟೆಜೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿಗೆ ಕಾರಣ ಅಂತನೇ ಹೇಳಲಾಗುತ್ತಿದೆ.