IPL 2022- DC Vs PBKS – Punjab kings Probable Playing XIs- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡುತ್ತಿದೆ. ಎಲ್ಲ ಲೆಕ್ಕಚಾರಗಳನ್ನು ಬುಡಮೇಲು ಮಾಡಿರುವ ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಪ್ರವೇಶ ಇನ್ನೂ ಜೀವಂತವಾಗಿದೆ.
ಸೋಲು ಗೆಲುವಿನ ಹಾದಿಯಲ್ಲಿ ಸಾಗಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದುಕೊಂಡ್ರೆ ಪ್ಲೇ ಆಫ್ ಗೆ ಎಂಟ್ರಿಕೊಡುವ ಅವಕಾಶಗಳಿವೆ.
ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ ತಲಾ 6 ಗೆಲುವು ಮತ್ತು 6 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. IPL 2022- DC Vs PBKS – Punjab kings Probable Playing XIs
ಮೇ 16ರಂದು ಮುಂಬೈ ನ ಡಿ.ವೈ. ಪಾಟೀಲ್ ಅಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಹೋರಾಟ ನಡೆಸಲಿವೆ. ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಈ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡುವಂಗಿಲ್ಲ. ಆರಂಭಿಕರಾಗಿ ಜಾನಿ ಬೇರ್ ಸ್ಟೋವ್ ಕಣಕ್ಕಿಳಿಯುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಶಿಖರ್ ಧವನ್ ಮತ್ತು ಜಾನಿ ಬೇರ್ ಸ್ಟೋವ್ ಉತ್ತಮ ಆರಂಭ ನೀಡಿದ್ರೆ ತಂಡಕ್ಕೆ ಹೆಚ್ಚು ಚಿಂತೆ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಭಾನುಕಾ ರಾಜಪಕ್ಷೆ, ಲಿಯಾಮ್ ಲಿವಿಂಗ್ ಸ್ಟೋನ್ ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ನಾಯಕ ಮಯಾಂಕ್ ಅಗರ್ ವಾಲ್ ತಂಡದ ಹಿತಕ್ಕಾಗಿ ಆರಂಭಿಕ ಆಟಗಾರನ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಕೂಡ ತಂಡಕ್ಕೆ ವರದಾನವಾಗಿದೆ. ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇವರೊಂದಿಗೆ ಆಲ್ ರೌಂಡರ್ ರಿಶಿ ಧವನ್ ಕೂಡ ಸಾಥ್ ನೀಡಲಿದ್ದಾರೆ. ರಿಶಿ ಧವನ್ ಅವರು ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇನ್ನೊಂದೆಡೆ ಕಾಗಿಸೊ ರಬಾಡ ಲಯ ಕಂಡುಕೊಂಡಿರುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಹಾಗೇ ಹಪ್ರಿತ್ ಬ್ರಾರ್ ಮತ್ತು ರಾಹುಲ್ ಚಾಹರ್ ಇನ್ನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬೇಕಿದೆ. ವೇಗಿ ಆರ್ಶಾದೀಪ್ ಸಿಂಗ್ ಲಯಬದ್ಧವಾಗಿ ಬೌಲಿಂಗ್ ಮಾಡುತ್ತಿರುವುದು ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ.
ಒಟ್ಟಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಟ್ಟಿ ಹಾಕುವ ಲೆಕ್ಕಚಾರದಲ್ಲಿದೆ. ಎರಡೂ ತಂಡಗಳಿಗೂ ಫ್ಲೇ ಆಫ್ ಗೆ ಎಂಟ್ರಿ ಪಡೆಯಬೇಕಾದ್ರೆ ಈ ಪಂದ್ಯವನ್ನು ಗೆಲ್ಲಲೇಬೇಕು.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಜಾನಿ ಬೇರ್ ಸ್ಟೋವ್
ಶಿಖರ್ ಧವನ್
ಭಾನುಕಾ ರಾಜಪಕ್ಷೆ
ಮಯಾಂಕ್ ಅಗರ್ ವಾಲ್ (ನಾಯಕ)
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ಲಿಯಾಮ್ ಲಿವಿಂಗ್ ಸ್ಟೋನ್
ರಿಶಿ ಧವನ್
ಕಾಗಿಸೊ ರಬಾಡ
ರಾಹುಲ್ ಚಾಹರ್
ಹಪ್ರೀತ್ ಬ್ರಾರ್
ಆರ್ಶಾದೀಪ್ ಸಿಂಗ್