IPL 2022- DC Vs PBKS – Delhli capitals Probable Playing XI – ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

ಕಳೆದ ಎರಡು ಮೂರು ವರ್ಷಗಳಿಂದ ಐಪಿಎಲ್ ಟೂರ್ನಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಮೋಘ ಪ್ರದರ್ಶನ ನೀಡಿತ್ತು. ಆದ್ರೆ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆದ್ರೂ ಫ್ಲೇ ಆಫ್ ಗೆ ಎಂಟ್ರಿಯಾಗುವ ಆಸೆಯನ್ನು ಮಾತ್ರ ಕೈಬಿಟ್ಟಿಲ್ಲ.
ಆಡಿರುವ 12 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಇದೀಗ 13 ನೇ ಪಂದ್ಯವನ್ನಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಗೆಲುವು ಅನಿವಾರ್ಯವಾಗಿದೆ. ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇ ಆಫ್ ಎಂಟ್ರಿಯಾಗುವ ಸಾಧ್ಯತೆಗಳು ಕೂಡ ಇವೆ. ಅಲ್ಲದೆ ಉತ್ತಮ ರನ್ ರೇಟ್ ನ ಅಗತ್ಯ ಕೂಡ ಇದೆ. IPL 2022- DC Vs PBKS – Delhli capitals Probable Playing XI
ಮೇ 16ರಂದು ನಡೆಯಲಿರುವ ಟೂರ್ನಿಯ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ಡಿ.ವೈ. ಪಾಟೀಲ್ ಅಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೂ ಗೆಲುವು ಅನಿವಾರ್ಯ. ಹೀಗಾಗಿ ಉಭಯ ತಂಡಗಳ ಹೋರಾಟ ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ಪ್ಲೇ ಆಫ್ ಗೆ ಎಂಟ್ರಿಯಾಗುವ ಅದೃಷ್ಟ ಯಾವ ತಂಡಕ್ಕಿದೆ ಎಂಬುದು ಕೂಡ ಈ ಪಂದ್ಯದಲ್ಲಿ ಗೊತ್ತಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಖ್ಯವಾಗಿ ಆರಂಭಿಕ ಸಮಸ್ಯೆ ಕಾಡುತ್ತಿದೆ. ಡೇವಿಡ್ ವಾರ್ನರ್ ಅತ್ಯುತ್ತಮ ಲಯದಲ್ಲಿದ್ದಾರೆ. ತಂಡದ ರನ್ ಮೆಷಿನ್ ಆಗಿ ಗೆಲುವಿನ ರೂವಾರಿ ಕೂಡ ಆಗುತ್ತಿದ್ದಾರೆ. ಆದ್ರೆ ಪೃಥ್ವಿ ಶಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿದೆ. ಟೈಫೈಡ್ ನಿಂದ ಚೇತರಿಸಿಕೊಂಡಿರುವ ಪೃಥ್ವಿ ಶಾ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ.
ಕಳೆದ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದ ಪೃಥ್ವಿ ಶಾ, ಈ ಬಾರಿ ಉತ್ತಮ ಫಾರ್ಮ್ ನಲ್ಲಿದ್ದರು. ಪೃಥ್ವಿ ಶಾ ಬದಲು ಎಸ್. ಭರತ್ ಮತ್ತು ಮನ್ ದೀಪ್ ಸಿಂಗ್ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ಪೃಥ್ವಿ ಶಾ ಅಲಭ್ಯರಾದ್ರೆ, ಯಶ್ ಧೂಲ್ ಅವಕಾಶ ಪಡೆದುಕೊಳ್ಳಬಹುದು.

ಇನ್ನುಳಿದಂತೆ ಮಿಟ್ಚೆಲ್ ಮಾರ್ಶ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ರಿಷಬ್ ಪಂತ್ ಇನ್ನಷ್ಟು ಜವಾಬ್ದಾರಿಯುತವಾಗಿ ಆಡಬೇಕಿದೆ. ಲಲಿತ್ ಯಾದವ್ ಕೂಡ ತಂಡಕ್ಕೆ ಆಧಾರವಾಗಬೇಕಿದೆ. ಹಾಗೇ ರೊವ್ಮನ್ ಪೊವೆಲ್ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ಇನ್ನು ಬೌಲಿಂಗ್ ನಲ್ಲಿ ಆನ್ರಿಚ್ ನೊಕಿಯಾ, ಶಾರ್ದೂಲ್ ಥಾಕೂರ್ ಮತ್ತು ಚೇತನ್ ಸಕಾರಿಯಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಅಸ್ತ್ರಗಳು. ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಮ್ಯಾಜಿಕ್ ಡೆಲ್ಲಿ ತಂಡಕ್ಕೆ ಅಗತ್ಯವಿದೆ.
ಒಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪಂಜಾಬ್ ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆದ್ರೆ ಪ್ಲೇ ಆಫ್ ಎಂಟ್ರಿಯ ಆಸೆಯ ಜೀವಂತ. ಇಲ್ಲದೆ ಇದ್ರೆ ಫ್ಲೇ ಆಫ್ ಕನಸು ಕನಸಾಗಿಯೇ ಉಳಿಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೇವಿಡ್ ವಾರ್ನರ್
ಯಶ್ ಧೂಲ್/ ಪೃಥ್ವಿ ಶಾ
ರಿಷಬ್ ಪಂತ್ (ನಾಯಕ / ವಿಕೆಟ್ ಕೀಪರ್)
ಮಿಟ್ಚೆಲ್ ಮಾರ್ಶ್
ಲಲಿತ್ ಯಾದವ್
ರೊವ್ಮನ್ ಪೊವೆಲ್
ಅಕ್ಷರ್ ಪಟೇಲ್
ಶಾರ್ದೂಲ್ ಥಾಕೂರ್
ಕುಲದೀಪ್ ಯಾದವ್
ಚೇತನ್ ಸಕಾರಿಯಾ
ಆನ್ರಿಚ್ ನೊಕಿಯಾ