IPL 2022- DC – Ricky Ponting – ಹತಾಶೆಯಿಂದ ರಿಮೋಟ್ ಮುರಿದು ಹಾಕಿದ್ದ ರಿಕಿ ಪಾಂಟಿಂಗ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ರಿಕಿ ಪಾಂಟಿಂಗ್ ಅವರು ಹೊಟೇಲ್ ನಲ್ಲೇ ಐದು ದಿನಗಳ ಕಾಲ ಐಸೋಲೇಷನ್ ನಲ್ಲಿದ್ದರು. ಹೀಗಾಗಿ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ರಿಕಿ ಪಾಂಟಿಂಗ್ ಡೆಲ್ಲಿ ತಂಡದ ಡಗೌಟ್ ನಲ್ಲಿರಲಿಲ್ಲ.
ಆದ್ರೆ ಹೊಟೇಲ್ ನಲ್ಲೇ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಐಸೋಲೇಷನ್ ನಲ್ಲಿದ್ದ ರಿಕಿ ಪಾಂಟಿಂಗ್ ಅವರು ಹತಾಶೆಯಿಂದ ನಾಲ್ಕೈದು ರಿಮೋಟ್ ಗಳನ್ನು ಮುರಿದು ಹಾಕಿದ್ದರು. ಅಲ್ಲದೆ ಸಿಟ್ಟಿನಿಂದ ಗೊಡೆಯ ಮೇಲೆ ನೀರಿನ ಬಾಟಲ್ ಗಳನ್ನು ಎಸೆದಿದ್ದರು. ತಂಡದ ತರಬೇತುದಾರನಾಗಿ ನೀವು ಏಕಾಂಗಿಯಾಗಿರಬೇಕಾದ ಪರಿಸ್ಥಿತಿಯಲ್ಲಿ ಸಾಕಷ್ಟು ಹತಾಶೆಯ ಭಾವನೆಗಳು ಬರುತ್ತವೆ. ಅದನ್ನು ನಿಯಂತ್ರಿಸುವುದು ತುಸು ಕಷ್ಟವಾಗುತ್ತದೆ. ತಂಡದ ಭಾಗವಾಗಬೇಕಿದ್ದ ನೀವು ಮೈದಾನದಲ್ಲಿ ಇಲ್ಲದಿರುವಾಗ ಆಗುವಂತಹ ಹತಾಶೆ ಅಷ್ಟಿಷ್ಟಲ್ಲ ಎಂದು ತನ್ನ ಐಸೋಲೇಷನ್ ನಲ್ಲಿದ್ದಾಗ ದಿನಗಳನ್ನು ರಿಕಿ ಪಾಂಟಿಂಗ್ ಹೇಳಿಕೊಂಡಿದ್ದಾರೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ.ನಾಲ್ಕು ಪಂದ್ಯಗಳನ್ನು ಸೋತಿದೆ. ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಹೀಗಾಗಿ ರಿಕಿ ಪಾಂಟಿಂಗ್ ಮಾರ್ಗದರ್ಶನದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಎರಡನೇ ಹಂತದ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಲೇಬೇಕಿದೆ. ಸೋಲು, ಗೆಲುವುಗಳನ್ನು ಕಂಡಿರುವಂತಹ ಡೆಲ್ಲಿ ಇದೀಗ ಕೆಕೆಆರ್ ವಿರುದ್ಧ ತನ್ನ ಎಂಟನೇ ಪಂದ್ಯವನ್ನು ಆಡಲಿದೆ. IPL 2022- DC – Ricky Ponting -Why Ricky Ponting broke remote controls
ನನಗೆ ಗೊತ್ತು ಫಲಿತಾಂಶಗಳನ್ನು ಉಲ್ಪಾ ಮಾಡುವಂತಹ ಸಾಮಥ್ರ್ಯ ನಮ್ಮಲ್ಲಿದೆ ಎಂಬುದು. ಹೀಗಾಗಿ ನಾವು ನಮ್ಮ ಮೇಲೆ ನಂಬಿಕೆಯನ್ನಿಟ್ಟುಕೊಳ್ಳಬೇಕು. ಲವ ಲವಿಕೆಯಿಂದ ಆಡಿದ್ರೆ ಫಲಿತಾಂಶದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ರಿಕಿ ಪಾಂಟಿಂಗ್ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ತಾನ ವಿರುದ್ಧದ ಪಂದ್ಯದ ವೇಳೆ ಎಡವಟ್ಟು ಮಾಡಿಕೊಂಡಿತ್ತು. ಅಂಪೈರ್ ನೋಬಾಲ್ ನೀಡಿಲ್ಲ ಎಂದು ಅಂಪೈರ್ ವಿರುದ್ಧವೇ ಡೆಲ್ಲಿ ತಂಡ ತಿರುಗಿಬಿದ್ದಿತ್ತು. ತಂಡದ ಸಹಾಯಕ ಕೋಚ್ ಪ್ರವೀಣ್ ಅಮ್ರೆ ಅವರು ಮೈದಾನದೊಳಗೆ ನುಗ್ಗಿ ಅಂಪೈರ್ ತೀರ್ಪನ್ನು ಪ್ರಶ್ನೆ ಮಾಡಿದ್ದರು. ಇತ್ತ ನಾಯಕ ರಿಷಬ್ ಪಂತ್ ಬ್ಯಾಟ್ಸ್ ಮೆನ್ ಗಳನ್ನು ವಾಪಾಸ್ ಪೆವಿಲಿಯನ್ ಗೆ ಬರುವಂತೆ ಹೇಳಿದ್ದರು. ಹೀಗಾಗಿ ರಿಷಬ್ ಪಂತ್ ಮತ್ತು ಪ್ರವೀಣ್ ಅಮ್ರೆ ವಿರುದ್ಧ ಮ್ಯಾಚ್ ರೆಫ್ರಿಗಳು ಶಿಸ್ತು ಕ್ರಮ ತೆಗೆದುಕೊಂಡಿದ್ದರು. ಪಂದ್ಯ ಶುಲ್ಕದ ನೂರರಷ್ಟು ದಂಡವನ್ನು ರಿಷಬ್ ಪಂತ್ಗೆ ನೀಡಿದ್ರೆ, ಪ್ರವೀಣ್ ಅಮ್ರೆ ಅವರಿಗೆ ಒಂದು ಪಂದ್ಯಕ್ಕೆ ನಿಷೇಧವನ್ನು ಹೇರಲಾಯ್ತು.