IPL 2022- CSK Vs RCB – Match No 49- ಲೆಕ್ಕಚಾರ ಬುಡಮೇಲು ಮಾಡುತ್ತಾ ಸಿಎಸ್ ಕೆ – CSK Predicted Playing 11

ಮೇ 4. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 49. ಸಮಯ -7.30. ಪುಣೆಯ ಎಮ್.ಸಿ.ಎ ಅಂಗಣ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮುಖಾಮುಖಿ.
ಹೌದು. ಸಿಎಸ್ ಕೆ ಮತ್ತು ಆರ್ ಸಿಬಿ ನಡುವಿನ ಪಂದ್ಯ ಅಂದ್ರೆ ಜಿದ್ದಾಜಿದ್ದಿನ ಕಾದಾಟ ನಡೆಯುವುದು ಖಚಿತ. ಯಾಕಂದ್ರೆ ಐಪಿಎಲ್ ನಲ್ಲಿ ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳ ಕಾದಾಟ ಸಾಕಷ್ಟು ಮಹತ್ವವನ್ನು ಕೂಡ ಪಡೆದುಕೊಂಡಿದೆ.
ರವೀಂದ್ರ ಜಡೇಜಾ ನಾಯಕತ್ವ ತ್ಯಜಿಸಿದ್ದ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತೆ ಸಿಎಸ್ ಕೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಸಿಎಸ್ ಕೆ ತಂಡಕ್ಕೆ ಧೋನಿ ನಾಯಕತ್ವ ಮತ್ತೆ ಆತ್ಮವಿಶ್ವಾಸವನ್ನು ನೀಡಿದೆ. IPL 2022- CSK Vs RCB – Match No 49- CSK Predicted Playing 11
ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ 13 ರನ್ ಗಳಿಂದ ಜಯ ದಾಖಲಿಸಿರುವ ಸಿಎಸ್ ಕೆ ತಂಡ ಮತ್ತೆ ಗೆಲುವಿನ ಲಯದಲ್ಲಿ ಮುಂದುವರಿಯುವ ಲೆಕ್ಕಚಾರದಲ್ಲಿದೆ.
ಪ್ಲೇ ಆಫ್ ಎಂಟ್ರಿಯಾಗೋದು ಕಷ್ಟದ ಹಾದಿಯಾದ್ರೂ ಸಿಎಸ್ ಕೆ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತದೆ. ಯಾಕಂದ್ರೆ ಸಿಎಸ್ ಕೆ ಇನ್ನು ಆಡಬೇಕಿರುವ ಐದು ಪಂದ್ಯಗಳನ್ನು ಗೆಲ್ಲಬೇಕಿದೆ. ರನ್ ರೇಟ್ ಅನ್ನು ಉತ್ತಮ ಪಡಿಸಿಕೊಂಡ್ರೆ ಅದೃಷ್ಟದಿಂದ ಪ್ಲೇ ಆಫ್ ಗೂ ಎಂಟ್ರಿ ಪಡೆಯಬಹುದು.

ಈ ಲೆಕ್ಕಚಾರದಲ್ಲೇ ಆಡಲಿರುವ ಸಿಎಸ್ ಕೆ ತಂಡ ಗೆಲುವಿನ ಇರಾದೆಯಲ್ಲಿದೆ. ಆದ್ರೆ ಆರ್ ಸಿಬಿ ಯಾವ ರೀತಿ ಪ್ರತಿರೋಧ ಒಡ್ಡುತ್ತದೆ ಎಂಬುದು ಅಷ್ಟೇ ಮುಖ್ಯ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 9 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರು ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇನ್ನು ತಂಡದ ಬ್ಯಾಟಿಂಗ್ ಬಲಾಬಲದ ಬಗ್ಗೆ ಹೇಳುವುದಾದ್ರೆ, ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಅತ್ಯುತ್ತಮ ಫಾರ್ಮ್ ನಲ್ಲಿರುವುದು ಪ್ಲಸ್ ಪಾಯಿಂಟ್. ಹಾಗೇ ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಮಧ್ಯಮ ಕ್ರಮಾಂಕದಲ್ಲಿ ಆಧಾರವಾದ್ರೆ ತಂಡಕ್ಕೆ ಏನೂ ಕೂಡ ಚಿಂತೆ ಇಲ್ಲ.
ಇನ್ನು ಆಲ್ ರೌಂಡರ್ ಡ್ವೇನ್ ಬ್ರೇವೋ 11ರ ಬಳಗದಲ್ಲಿ ಕಾಣಿಸಿಕೊಂಡ್ರೆ, ಡಿವೈನ್ ಪ್ರಿಟೊರಿಯಸ್ ಹೊರಗುಳಿಯಬೇಕಾಗುತ್ತದೆ. ಹಾಗೇ ಸಿಮರ್ ಜಿತ್ ಸಿಂಗ್ ಜಾಗದಲ್ಲಿ ರಾಜ್ಯವರ್ಧನ ಹಂಗೆರ್ಗಕರ್ ಸ್ಥಾನ ಪಡೆದುಕೊಂಡ್ರೂ ಅಚ್ಚರಿ ಏನಿಲ್ಲ. ಇನ್ನುಳಿದಂತೆ ಮುಕೇಶ್ ಚೌಧುರಿ ಮತ್ತು ಮಹೀಶ್ ತೀಕ್ಷಣ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.

ಒಟ್ಟಿನಲ್ಲಿ ಸಿಎಸ್ ಕೆ ತಂಡಕ್ಕೆ ಈ ಆವೃತ್ತಿಯ ಟೂರ್ನಿಯಲ್ಲಿ ಕಳೆದುಕೊಳ್ಳುವುದು ಏನಿಲ್ಲ. ಯಾಕಂದ್ರೆ ಪ್ಲೇ ಆಫ್ ಎಂಟ್ರಿಯ ಹಾದಿ ತುಂಬಾ ದೂರದಲ್ಲಿದೆ. ಆದ್ರೂ ಸತತ ಐದು ಪಂದ್ಯಗಳನ್ನು ಗೆದ್ದು ಟೂರ್ನಿಯ ಲೆಕ್ಕಚಾರವನ್ನು ಬುಡಮೇಲು ಮಾಡುವ ಸಾಮಥ್ರ್ಯವಂತೂ ತಂಡಕ್ಕೆ ಈಗ ಬಂದಿದೆ.
ಸಿಎಸ್ ಕೆ ಪ್ಲೇಯಿಂಗ್ ಇಲೆವೆನ್
ರುತುರಾಜ್ ಗಾಯಕ್ವಾಡ್
ಡೆವೋನ್ ಕಾನ್ವೆ
ರಾಬಿನ್ ಉತ್ತಪ್ಪ
ಅಂಬಟಿ ರಾಯುಡು
ರವೀಂದ್ರ ಜಡೇಜಾ
ಮಹೇಂದ್ರ ಸಿಂಗ್ ಧೋನಿ (ನಾಯಕ – ವಿಕೆಟ್ ಕೀಪರ್)
ಮಿಟ್ಚೆಲ್ ಸ್ಯಾಂಟ್ನರ್
ಡ್ವೇನ್ ಪ್ರಿಟೊರಿಯಸ್ /ಡ್ವೇನ್ ಬ್ರೇವೋ
ಸಿಮರ್ ಜಿತ್ ಸಿಂಗ್ / ರಾಜ್ಯವರ್ಧನ ಹಂಗೆರ್ಗಕರ್
ಮುಖೇಶ್ ಚೌಧುರಿ
ಮಹೀಶ್ ತೀಕ್ಷಣ