ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ತಂಡವಲ್ಲ. ಅದು ಕುಟುಂಬ. ಆಟಗಾರರ ನಡುವೆ ಮತ್ತು ಅವರ ಕುಟುಂಬದ ಜೊತೆ ವೈಯಕ್ತಿಕ ಸಂಬಂಧ ಬೆಳೆಸುತ್ತಿದೆ ಐಪಿಎಲ್ ಫ್ರಾಂಚೈಸಿಗಳು. ಇತ್ತೀಚೆಗೆ ಆರ್ಸಿಬಿ ಆಟಗಾರ ಮ್ಯಾಕ್ಸ್ವೆಲ್ ಭಾರತೀಯ ಮೂಲದ ವಿನಿ ರಾಮನ್ ಜೊತೆ ಸಪ್ತಪದಿ ತುಳಿದಿದ್ದರು. ಆದರೆ ಮ್ಯಾಕ್ಸಿ ಮದುವೆ ಪಾರ್ಟಿ ಕೊಟ್ಟಿರಲಿಲ್ಲ. ಆದರೆ ಆರ್ಸಿಬಿ ಆಟಗಾರರು ಮ್ಯಾಕ್ಸಿಯನ್ನು ಪಾರ್ಟಿಗಾಗಿ ಪೀಡಿಸಿದರು. ಕೊನೆಗೂ ಮ್ಯಾಕ್ಸಿ ಆಟಗಾರರು ಮತ್ತು ಅವರ ಕುಟುಂಬ ವಿಶೇಷ ಪಾರ್ಟಿಯೊಂದು ಆಯೋಜಿಸಸಿದರು . ಬಯೋ ಬಬಲ್ನಲ್ಲೇ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ವಿದೇಶಿ ಆಟಗಾರರ ಹೆಂಡತಿಯರು ಭಾಗಿಯಾಗಿದ್ದರು.
ಗ್ಲೆನ್ ಮ್ಯಾಕ್ಸ್ವೆಲ್ ಅವರ ಮದುವೆ ಪಾರ್ಟಿಯಲ್ಲಿ ಕ್ರಿಕೆಟಿಗರು ಜುಬ್ಬಾ, ಪೈಜಾಮಾ ಧರಿಸಿದ್ದರು. ಕ್ರಿಕೆಟಿಗರ ಪತ್ನಿಯರು ಸೀರೆ ತೊಟ್ಟಿದ್ದರು. ಆದರೆ ಈ ಪಾರ್ಟಿಯಲ್ಲಿ ಡು ಪ್ಲೆಸಿಸ್ ಪತ್ನಿ ಇಮಾರಿ ಉಟ್ಟಿದ್ದ ಸೀರೆ ಈಗ ಬಹುಚರ್ಚಿತ ವಿಷಯವಾಗಿದೆ.
ಇಮಾರಿ ಪಾರ್ಟಿಯಲ್ಲಿ ಹಸಿರು ಸೀರೆ ಉಟ್ಟು ಮಿಂಚಿದ್ದರು. ಆದರೆ ಇಮಾರಿ ಉಟ್ಟಿದ್ದ ಸೀರೆ ಅನುಷ್ಕಾ ಶರ್ಮಾ ಅವರಿಂದ ಎರವಲು ಪಡೆದಿದ್ದ ಸೀರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತಿದೆ.
ಅನುಷ್ಕಾ ಶರ್ಮಾ 2018ರಲ್ಲಿ, ಇಮಾರಿ ಧರಿಸಿದ್ದ ಸೀರೆಯನ್ನೇ ಉಟ್ಟಿದ್ದರು. ಇಮಾರಿ ಅವರ ಪೋಸ್ಟ್ಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಇದು ಅನುಷ್ಕಾ ಅವರ ಸೀರೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.ಇಮಾರಿ, ಅನುಷ್ಕಾ ಅವರ ಬಳಿ, ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೀರೆ ಯಾರದ್ದೇ ಆಗಿರಲಿ, ಇಮಾರಿ ಅವರ ದೇಸಿ ಲುಕ್ಗೆ ಹಲವರು ಫಿದಾ ಆಗಿದ್ದಾರೆ. ಅನುಷ್ಕಾ ಶರ್ಮಾರಂತೆ ಈ ಸೀರೆಯಲ್ಲಿ ನೀವು ಮುದ್ದಾಗಿ ಕಾಣುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ.