IPL 2022- CSK vs LSG – ಚೆನ್ನೈ ಸೂಪರ್ ಕಿಂಗ್ಸ್ – ಲಕ್ನೋ ಸೂಪರ್ ಜೈಂಟ್ಸ್ – ಪ್ಲೇಯಿಂಗ್ ಇಲೆವೆನ್
15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮಾರ್ಚ್ 31. ಮ್ಯಾಚ್ ನಂಬರ್ 7. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಮುಖಾಮುಖಿ. ಮುಂಬೈನ ಬ್ರಬೊರ್ನ್ ಅಂಗಣದಲ್ಲಿ ಮೊದಲ ಪಂದ್ಯದಲ್ಲಿ ಸೋತವರ ನಡುವಿನ ಕಾಳಗ ನಡೆಯಲಿದೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಸೋಲಿನ ರುಚಿ ಕಂಡಿವೆ. ಇದೀಗ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ರುಚಿಗಾಗಿ ಹೋರಾಟ ನಡೆಸಲಿವೆ.
ನಾಲ್ಕು ಬಾರಿ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯಕ್ಕೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಿದೆ. ಆಲ್ ರೌಂಡರ್ ಮೋಯಿನ್ ಆಲಿ ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರುತುರಾಜ್ ಗಾಯಕ್ವಾಡ್ ಮತ್ತು ಡೇವೊನ್ ಕಾನ್ವೆ ಇನಿಂಗ್ಸ್ ಆರಂಭಿಸಿದ್ರೆ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಧೋನಿ ಮತ್ತು ನಾಯಕ ರವೀಂದ್ರ ಜಡೇಜಾ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ಶಿವಮ್ ದುಬೆ, ಮೋಯಿನ್ ಆಲಿ, ಡ್ವೇನ್ ಬ್ರೇವೋ, ಆಡಮ್ ಮಿಲ್ನೆ ಮತ್ತು ತುಷಾರ್ ದೇಪಾಂಡೆ ಸಿಎಸ್ ಕೆ ತಂಡದ ಪ್ರಮುಖ ಬೌಲಿಂಗ್ ಅಸ್ತ್ರಗಳು. IPL 2022- CSK vs LSG Dream 11 Prediction

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿರುವ ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಭದ್ರ ಅಡಿಪಾಯ ಹಾಕಿಕೊಟ್ರೆ, ಮಧ್ಯಮ ಕ್ರಮಾಂಕದಲ್ಲಿ ಇನ್ನಷ್ಟು ಸ್ಪೋಟಕ ಆಟವನ್ನು ಎದುರು ನೋಡಬಹುದು. ಮನೀಷ್ ಪಾಂಡೆ ಮತ್ತು ಎವಿನ್ ಲೆವಿಸ್ ಫಾರ್ಮ್ ಕಂಡುಕೊಳ್ಳಬೇಕಿದೆ. ಇನ್ನುಳಿದಂತೆ ದೀಪಕ್ ಹೂಡಾ, ಆಯುಷ್ ಬಡೋನಿ ಮತ್ತು ಕೃನಾಲ್ ಪಾಂಡ್ಯ ಸ್ಥಿರ ಆಟವನ್ನು ಆಡಬೇಕಿದೆ.
ಬೌಲಿಂಗ್ ನಲ್ಲಿ ಆವೇಶ್ ಖಾನ್, ಮೊಹಸಿನ್ ಖಾನ್, ರವಿ ಬಿಷ್ಣೋಯ್ ಮತ್ತು ದುಶ್ಮಂತ್ ಚಾಮೀರ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್ : ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ (ವಾಕ್), ಎವಿನ್ ಲೂಯಿಸ್, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬದೋನಿ, ಅವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ : ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆ), ಶಿವಂ ದುಬೆ, ಮೊಯಿನ್ ಅಲಿ, ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ