IPL 2022- ವಿರಾಟ್ ಜೊತೆ ಗ್ಲೇನ್ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಮಾಡಲ್ವಂತೆ.. ಯಾಕೆ ?
ಅಬ್ಬಾ ನನಗೆ ವಿರಾಟ್ ಜೊತೆಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ರನ್ ಗಳಿಸುವಾಗ ವಿರಾಟ್ ಜೊತೆ ಓಡಲು ಸಾಧ್ಯವಿಲ್ಲ. ಒಂದು ರನ್ ಓಡುವಾಗ ಎರಡು ರನ್ ಓಡಿಸುತ್ತಾರೆ.. ಎರಡು ರನ್ ಓಡುವಾಗ ಮೂರನೇ ರನ್‍ಗಾಗಿ ಓಡಿಸುತ್ತಾರೆ. ನಾನಂತು ನೀನು ಬ್ಯಾಟಿಂಗ್ ಮಾಡುವಾಗ ಜೊತೆಯಾಗಿರುವುದಿಲ್ಲ ಎಂದು ಆರ್ ಸಿಬಿ ತಂಡದ ಸ್ಟಾರ್ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ.
ಸಿಎಸ್ ಕೆ ವಿರುದ್ಧ ಗೆಲುವಿನ ಬಳಿಕ ಗ್ಲೇನ್ ಮ್ಯಾಕ್ಸ್ ವೆಲ್ ಅವರು ವಿರಾಟ್ ಜೊತೆಗೆ ಈ ರೀತಿ ಮಾತನಾಡಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 49ನೇ ಪಂದ್ಯದಲ್ಲಿ ಸಿಎಸ್ ಕೆ ಮತ್ತು ಆರ್ ಸಿಬಿ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಗೆದ್ದು ಸೇಡು ಕೂಡ ತೀರಿಸಿಕೊಂಡಿತ್ತು. ipl 2022- Can’t Bat With You…”: Cheeky Glenn Maxwell Tells Virat Kohli
ಇನ್ನು ಈ ಪಂದ್ಯದ ವೇಳೆ ಗ್ಲೇನ್ ಮ್ಯಾಕ್ಸ್ ವೆಲ್ ಅವರು ರನೌಟ್ ಆಗಿದ್ದರು. ಗ್ಲೇನ್ ಮ್ಯಾಕ್ಸ್ ವೆಲ್ ಕೇವಲ ಮೂರು ರನ್ ಗಳಿಸಿ ಪೆವಿಲಿಯನ್ ಗೆ ಹಿಂತಿರುಗಿದ್ದರು. ರನ್ ಗಳಿಸುವ ಗಡಿಬಿಡಿಯಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ರನೌಟ್ ಆಗಬೇಕಾಯ್ತು. ಆದ್ರೆ ಇನ್ನೊಂದು ತುದಿಯಲ್ಲಿ ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದರು.
ಆದ್ರೆ ಬೌಲಿಂಗ್ ನಲ್ಲಿ ಜಾದು ಮಾಡಿದ್ದ ಗ್ಲೇನ್ ಮ್ಯಾಕ್ಸ್ ವೆಲ್ ಆರ್ ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಬಿನ್ ಉತ್ತಪ್ಪ ಮತ್ತು ಅಂಬಟಿ ರಾಯುಡು ಅವರ ವಿಕೆಟ್ ಅನ್ನು ಮ್ಯಾಕ್ಸ್ ವೆಲ್ ಪಡೆದ್ರು.
ಪಂದ್ಯದ ಮುಗಿದ ನಂತರ ಗ್ಲೇನ್ ಮ್ಯಾಕ್ಸ್ ವೆಲ್ ತಮಾಷೆಯಾಗಿ ವಿರಾಟ್ ಕೊಹ್ಲಿಯವರಿಗೆ ಈ ರೀತಿಯಾಗಿ ಹೇಳಿದ್ದರು. ನೀನು ಬ್ಯಾಟಿಂಗ್ ಮಾಡುವಾಗ ನಾನು ಜೊತೆಯಾಗಿರುವುದಿಲ್ಲ. ನಿನ್ನ ಜೊತೆ ಓಡಲು ನನಗೆ ಆಗಲ್ಲ ಎಂದು ನಗುತ್ತಲೇ ಹೇಳಿದ್ದರು.
ಇಲ್ಲಿ ಗಮನಿಸಲೇಬೇಕು. ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಯಾವ ಮಟ್ಟದಲ್ಲಿದೆ ಎಂಬುದು ಒಂದು ಕಡೆಯಾದ್ರೆ, ವಿಕೆಟ್ ನಡುವೆ ಓಡುವುದರಲ್ಲೂ ವಿರಾಟ್ ತುಂಬಾನೇ ಫಾಸ್ಟ್ ಇದ್ದಾರೆ ಎಂಬುದು ಅರ್ಥವಾಗುತ್ತದೆ.
RCB v CSK, Dressing Room Celebrations
The smiles and laughter returned & the players celebrated the win with the customary victory song. We also asked Maxi, Harshal, Siraj and the coaches about last night’s win against CSK.#PlayBold #WeAreChallengers #IPL2022 #RCB #ನಮ್ಮRCB pic.twitter.com/uW5hl7b4ko
— Royal Challengers Bengaluru (@RCBTweets) May 5, 2022
ಹೀಗಾಗಿ ವಿರಾಟ್ ಕೊಹ್ಲಿ ಫಿಟ್ ನೆಸ್ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು. ಕೇವಲ ಬೌಂಡರಿ, ಸಿಕ್ಸರ್ ಸಿಡಿಸುವುದು ಮಾತ್ರವಲ್ಲ. ವೇಗವಾಗಿ ಒಂದು, ಎರಡು ಮತ್ತು ಮೂರು ರನ್ ದಾಖಲಿಸಬೇಕು. ಹೀಗಾಗಿ ವಿಕೆಟ್ ನಡುವಿನ ಓಟ ಕೂಡ ಮುಖ್ಯವಾಗಿರುತ್ತದೆ. ಸುಮ್ಮನೆ ವಿರಾಟ್ ಕೊಹ್ಲಿ ಸಾವಿರಗಟ್ಟಲೇ ರನ್ ಹೊಡೆದಿಲ್ಲ. ತನ್ನ ಬ್ಯಾಟಿಂಗ್ ಸಾಮಥ್ರ್ಯ, ಕೌಶಲ್ಯ ಮತ್ತು ಫಿಟ್ ನೆಸ್ ನಿಂದಲೇ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಹೊರಹೊಮ್ಮಿರುವುದು.