IPL 2022 – ಡೆಲ್ಲಿ ಕ್ಯಾಪಿಟಲ್ಸ್ ಗೆ ಬ್ಯಾಡ್ ನ್ಯೂಸ್..! ಆನ್ರಿಚ್ ನೊರ್ಟೆಜೆ ಐಪಿಎಲ್ ನಿಂದ ಔಟ್..?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತವಾಗಿದೆ. ತಂಡದ ಪ್ರಮುಖ ಬೌಲರ್ ಆನ್ರಿಚ್ ನೊರ್ಟೆಜೆ ಅವರು ಮುಂಬರುವ ಐಪಿಎಲ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಧ್ಯಮಗಳ ಪ್ರಕಾರ ಆನ್ರಿಚ್ ನೊರ್ಟೆಜೆ ಅವರು ಗಾಯದಿಂದ ಪೂರ್ತಿಯಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಅಲ್ಲದೆ ಬಾಂಗ್ಲಾ ಪ್ರವಾಸಕ್ಕೂ ಅವರು ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಹೀಗಾಗಿ ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ.
ಮೂಲಗಳ ಪ್ರಕಾರ ಆನ್ರಿಚ್ ನೊರ್ಟೆಜೆ ಅವರು ಮೂರು ಆರ್ಥೊಪೆಡಿಕ್ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈಗಾಗಲೇ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೂಡ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಅಭ್ಯಾಸ ಕೂಡ ನಡೆಸುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮವೊಂದು ವರದಿ ಮಾಡಿದೆ.
ಆನ್ರಿಚ್ ನೊರ್ಟೆಜೆ ಅವರು ಕಳೆದ ಎರಡು ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ ಉತ್ತಮ ಪ್ರದರ್ಶನ ಕೂಡ ನೀಡಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆನ್ರಿಚ್ ನೊರ್ಟೆಜೆ ಅವರನ್ನು ರಿಟೇನ್ ಮಾಡಿಕೊಂಡಿತ್ತು. IPL 2022 – Bad news for Delhi Capitals CONFIRMED, Anrich Nortje set to miss IPL

ಇನ್ನೊಂದೆಡೆ ಆನ್ರಿಚ್ ನೊರ್ಟೆಜೆ ಕೂಡ ತನ್ನ ಗಾಯದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂಪೂರ್ಣ ಮಾಹಿತಿ ನೀಡಿಲ್ಲ. ಐಪಿಎಲ್ ಟೂರ್ನಿಯ ವೇಳೆ ಗಾಯದಿಂದ ಪೂರ್ತಿಯಾಗಿ ವಾಸಿಯಾಗುತ್ತೇನೆ ಅನ್ನೋ ವಿಶ್ವಾಸವಿತ್ತು ಅಂತ ಅನ್ಸುತ್ತೆ. ಒಂದು ವೇಳೆ ನೊರ್ಟೆಜೆ ತನ್ನ ಗಾಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೊರ್ಟೆಜೆ ಬದಲು ಕಾಗಿಸೊ ರಬಾಡಾ ಅವರನ್ನು ರಿಟೇನ್ ಮಾಡಿಕೊಳ್ಳುತ್ತಿತ್ತು.
ಆದ್ರೂ ಡೆಲ್ಲಿ ತಂಡದಲ್ಲಿ ವೇಗದ ಬೌಲರ್ ಗಳಿದ್ದಾರೆ. ಮಿಟ್ಚೆಲ್ ಮಾರ್ಶ್, ಶಾರ್ದೂಲ್ ಥಾಕೂರ್, ಮಸ್ತಾಫಿರ್ ರಹಮನ್, ಕಮಲೇಶ್ ನಾಗರ್ ಕೋಟಿ, ಖಲೀಲ್ ಅಹಮ್ಮದ್, ಚೇತನ್ ಸಕಾರಿಯಾ, ಲುಂಗಿ ಎನ್ ಗಿಡಿ ಅವರು ಡೆಲ್ಲಿ ತಂಡದ ವೇಗದ ಅಸ್ತ್ರಗಳು. ಹೀಗಾಗಿ ಮೊರ್ಟೆಜ್ ಅವರು ತಡವಾಗಿ ತಂಡವನ್ನು ಸೇರಿಕೊಂಡ್ರೂ ತೊಂದರೆ ಏನು ಆಗಲ್ಲ. ಆದ್ರೂ ತಂಡದ ಟ್ರಂಪ್ ಕಾರ್ಡ್ ಬೌಲರ್ ನ ಅನುಪಸ್ಥಿತಿ ಡೆಲ್ಲಿ ತಂಡಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು.