ಮಹಿಳಾ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಕ್ಕೆ ಶಾಕ್ ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲು ಅಂಕಪಟ್ಟಿಯಲ್ಲಿ ಭಾರತವನ್ನು 5ನೇ ಸ್ಥಾನಕ್ಕೆ ತಳ್ಳಿದೆ. 8 ತಂಡಗಳ ವಿಶ್ವಕಪ್ ಹೋರಾಟದಲ್ಲಿ ಆಸ್ಟ್ರೇಲಿಯಾ ಆಡಿರುವ 2 ಪಂದ್ಯಗಳನ್ಣೂ ಗೆದ್ದು ಮೊದಲ ಸ್ಥಾನ ಪಡೆದುಕೊಂಡಿದೆ.
ನ್ಯೂಜಿಲೆಂಡ್ ಮತ್ತು ವೆಸ್ಟ್ಇಂಡೀಸ್ ತಲಾ 4 ಅಂಕ ಪಡೆದುಕೊಂಡಿವೆ. ನ್ಯೂಜಿಲೆಂಡ್ 3 ಪಂದ್ಯಗಳನ್ನು ಆಡಿದ್ದರೆ, ವಿಂಡೀಸ್ ಕೇವಲ 2 ಪಂದ್ಯಗಳನ್ನು ಆಡಿದೆ. ಆದರೆ ಕಿವೀಸ್ ರನ್ ರೇಟ್ನಲ್ಲಿ ಮುಂದಿದೆ.
ದಕ್ಷಿಣ ಆಫ್ರಿಕಾ ಮತ್ತು ಭಾರತ 4 & 5ನೇ ಸ್ಥಾನ ಪಡೆದಿವೆ. ಎರಡೂ ತಂಡಗಳ ಬಳಿ ತಲಾ 2 ಅಂಕಗಳಿವೆ. ಆದರೆ ದಕ್ಷಿಣ ಆಫ್ರಿಕಾ 1 ಪಂದ್ಯ ಮಾತ್ರ ಆಡಿದೆ. ಭಾರತ 2 ಪಂದ್ಯಗಳನ್ನು ಆಡಿದೆ.
ಇಂಗ್ಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಕೊನೆಯ 3 ಸ್ಥಾನಗಳಲ್ಲಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಆಡಿರುವ ಎರಡೂ ಪಂದ್ಯಗಳನ್ನೂ ಸೋತಿದೆ.