ಫಿಫಾ ಟಾಪ್ 100ರ ರಾಂಕಿಂಗ್ ಮೇಲೆ ಕಣ್ಣಿಟ್ಟಿರುವ ಭಾರತ ಫುಟ್ಬಾಲ್ ತಂಡ ಇಂಟರ್ಕಾಂಟಿನೆಂಟಲ್ ಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಲೆಬಾನನ್ ತಂಡವನ್ನು ಎದುರಿಸಲಿದೆ.
ಎರಡನೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಟೂರ್ನಿಯಲ್ಲಿ ಮಂಗೋಲಿಯಾ ಮತ್ತು ವಾನುವಾಟು ತಂಡಗಳ ವಿರುದ್ಧ ಗೆದ್ದು ಫೈನಲ್ಗೇರಿದೆ. ಲೆಬನಾನ್ ತಂಡಕ್ಕೂ ಈ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಮೊನ್ನೆ ಮೊಂಗೀಲಿಯಾ ವಿರುದ್ಧ ಸೋತಿತ್ತು.
ಈ ಪಂದ್ಯ ಭಾರತ ತಂಡಕ್ಕೆ ತುಂಬ ಮುಖ್ಯವಾದ ಪಂದ್ಯವಾಗಿದೆ. ಲೆಬಾನನ್ ತಂಡ ಫಿಫಾ ರ್ರಾಂಕಿಂಗ್ನಲ್ಲಿ 99ನೇ ಸ್ಥಾನ ಪಡೆದಿದೆ. ಭಾರತ ಪುಟ್ಬಾಲ್ ತಂಡ 101ನೇ ರಾಂಕ್ ಪಡೆದಿದೆ. ಈ ಪಂದ್ಯ ಗೆದ್ದರೆ ಭಾರತ ತಂಡ ಫಿಫಾ ರಾಂಕಿಂಗ್ನಲ್ಲಿ ನೊರರೊಳಗೆ ಬರಲಿದೆ.
2018ರ ಚೊಚ್ಚಲ ಇಂಟರ್ಕಾಂಟಿನೇಂಟಲ್ ಕಪ್ ಭಾರತ ಗೆದ್ದಾಗ ಫಿಫಾ ರಾಂಕಿಂಗ್ನ ಟಾಪ್ ನೂರರೊಳಗೆ ಭಾರತ ಸ್ಥಾನ ಪಡೆದಿತ್ತು.1996ರಲ್ಲಿ ಬೈಚುಂಗ್ ಭುಟಿಯಾ ಮತ್ತು ವಿಜಯನ್ ಇದ್ದಾಗ 94ನೇ ಸ್ಥಾನ ಪಡೆದಿದ್ದು ಶ್ರೇಷ್ಠ ಸಾಧನೆಯಾಗಿತ್ತು.