ವಿಶ್ವ ಕ್ರಿಕೆಟ್ನ ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಕೆಲವೆ ಗಂಟೆಗಳು ಬಾಕಿ ಇವೆ.
ಪಂದ್ಯಕ್ಕೂ ಮುನ್ನ ಸೋಲು ಗಲುವಿನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಇದೀಗ ಕೆಲವೊಂದು ಅಂಶಗಳು ಉಭಯ ತಂಡಗಳಿಗೆ ನಿರ್ಣಯಕವಾಗಲಿದೆ. ಯಾವೆಲ್ಲ ವಿಚಾರಗಳೆಂದು ನೋಡುವುದಾದರೆ,
ವೇಗಿ ಶಾಹೀನ್ ಅವರ ಮೊದಲ ಓವರ್
ಇಂದಿನ ಕದನದಲ್ಲಿ ಎಲ್ಲರ ಗಮನ ಸೆಳೆದಿರೋದು ಪಾಕ್ ಎಡಗೈ ವೇಗಿ ಶಾಹೀನ್ ಅಫ್ರೀದಿ. ಗಾಯದ ಸಮಸ್ಯೆಯಿಂದ ಹೊರಬಂದ ನಂತರ ಮತ್ತೆ ಹಳೆ ಫಾರ್ಮ್ ಮುಂದುವರೆಸುತ್ತಾರಾ? ಭಾರತ ವಿರುದ್ಧ ಹೇಗೆ ಬೌಲಿಂಗ್ ಮಾಡಬಹುದು ಎನ್ನುವ ಕುತೂಹಲ ಇದೆ.
ಅಫ್ಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇನ್ ಸ್ವಿಂಗರ್ ಯಾರ್ಕರ್ ಹಾಕಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದರು. ನಂತರದ ಎಸೆತದಲ್ಲಿ ಇಬ್ರಾಹಿಂ ಜರ್ದಾನ್ ಅವರನ್ನು ಬೌಲ್ಡ್ ಮಾಡಿದರು.
ಇಂದಿನ ಪಂದ್ಯದಲ್ಲಿ ಪಾಕ್ ವೇಗಿಗಳಾದ ಶಾಹೀನ್ ಅಫ್ರೀದಿ ಹಾಗು ಹ್ಯಾರಿಸ್ ರೌಫ್ ಗಮನ ಸೆಳೆಯಲಿದ್ದಾರೆ. ಏಷ್ಯಾಕಪ್ನ ಡೆತ್ ಓವರ್ಗಳಲ್ಲಿ ಭುವನೇಶ್ವರ್ ಕಳಪೆ ಬೌಲಿಂಗ್ ಮಾಡಿದ್ದರು. ಭಾರತೀಯ ಬೌಲರ್ಗಳು ಒಳ್ಳೆಯ ಹಾರ್ಡ್ ಲೆಂತ್ ಹಾಕುವಲ್ಲಿ ಎಡವಿದ್ದರು.
ದುಬೈ ಹಾಗೂ ಆಸ್ಟ್ರೇಲಿಯಾ ವಾತಾವರಣಗಳು ಬೇರೆ ಇದೆ. ಪಾಕ್ ವೇಗಿಗಳಾದ ಶಾಹೀನ್ ಅಫ್ರೀದಿ, ಹ್ಯಾರಿಸ್ ರೌಫ್, ನಾಸೀಮ್ ಶಾ,ಮೊಹ್ಮದ್ ಹೊಸನೈನ್, ಮೊಹ್ಮದ್ ವಾಸೀಮ್ ಮತ್ತು ಶಹನಾಜ್ ದಹಾನಿ ಪೇಸ್ ಹಾಗೂ ಬೌನ್ಸ್ ಮೂಲಕ ಬ್ಯಾಟರ್ಗಳನ್ನುಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಈ ವಾತಾವರಣದಲ್ಲಿ ಒಳ್ಳೆಯ ಬೌಲಿಂಗ್ ಮಾಡುತ್ತಾರೆ.ಎಂಸಿಜೆ ನನ್ನ ತವರು ಎಂದಿರುವ ವೇಗಿ ಹ್ಯಾರಿಸ್ ರೌಫ್ ಕಠಿಣ ಬೌಲಿಂಗ್ ಹಾಕುವ ಎಚ್ಚರಿಕೆ ರವಾನಿಸಿದ್ದಾರೆ.
ಪಂದ್ಯವನ್ನ ಟರ್ನ್ ಮಾಡ್ತಾರೆ ಫಿಂಗರ್ ಸ್ಪಿನ್ನರ್ಸ್
ಆಸ್ಟ್ರೇಲಿಯಾ ಮೈದಾನಗಳಲ್ಲಿ ಫಿಂಗರ್ ಸ್ಪಿನ್ನರ್ಗಳು ಪ್ರಮುಖ ಪಾತ್ರವಹಿಸುತ್ತಾರೆ. ಭಾರತ ತಂಡದಲ್ಲಿ ಬಲಗೈ ಬ್ಯಾಟರ್ಗಳು ಇರುವುದರಿಂದ
ನಾಯಕ ಬಾಬರ್ ಅಜಂ ಸ್ಪಿನ್ನರ್ ಮೊಹ್ಮದ್ ನವಾಜ್ ಅವರನ್ನು ಹೆಚ್ಚು ಬಳಸಿಕೊಳ್ಳಬಹುದಾಗಿದೆ. ಫಿಂಗರ್ ಸ್ಪಿನ್ನರ್ಗಳನ್ನು ಬಳಸಿಕೊಳ್ಳುವದರಿಂದ ಎದುರಾಳಿ ತಂಡದ ವಿಕೆಟ್ ಪಡೆಯುವ ಜೊತೆಗೆ ರನ್ ರೇಟ್ಗೂ ಕಡಿವಾಣ ಹಾಕಬಹುದಾಗಿದೆ.
2021ರಿಂದ ಟಿ20ಯಲ್ಲಿ ಭಾರತೀಯ ಬ್ಯಾಟರ್ಗಳ ವಿರುದ್ಧ ಸ್ಪಿನ್ನರ್ಗು 8.06 ಎಕನಾಮಿ ರೇಟ್ ಹೊಂದಿದ್ದಾರೆ.
ಡೆತ್ ಓವರ್ ಭಾರತಕ್ಕೆ ನುಂಗಲಾಗದ ಬಿಸಿ ತುಪ್ಪ
ಟೀಮ್ ಇಂಡಿಯಾ ಪಾಳಿಗೆ ಡೆತ್ ಓವರ್ ದೊಡ್ಡ ತಲೆ ನೋವು. ಇತ್ತೀಚೆಗೆ ಏಷ್ಯಾಕಪ್ನಲ್ಲಿ ಭಾರತವನ್ನು ಸೋಲಿಸಿದ್ದು ಡೆತ್ ಓವರ್. ಭುವನೇಶ್ವರ್ ಒಂದೇ ಓವರ್ನಲ್ಲಿ 19 ಹಾಗೂ 14 ರನ್ ಬಿಟ್ಟುಕೊಟ್ಟಿದ್ದರು.ಭುವಿ 9.54 ಎಕನಾಮಿ ರೇಟ್ ಹೊಂದಿದ್ದಾರೆ.
ಡೆತ್ ಓವರ್ ಸ್ಪೆಶಲಿಸ್ಟ್ ಹರ್ಷಲ್ ಪಟೇಲ್ ಗಾಯದ ಸಮಸ್ಯೆ ನಂತರ 10.73 ಎಕನಾಮಿ ರೇಟ್ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ.
ಯುವ ಎಡಗೈ ವೇಗಿ ಆರ್ಷದೀಪ್ ಒತ್ತಡ ನಿಭಾಯಿಸುವ ತಾಕತ್ತು ಹೊಂದಿದ್ದು 8.85 ಎಕನಾಮಿ ರೇಟ್ ಹೊಂದಿದ್ದಾರೆ.
ಪಾಕ್ ತಂಡದ ಡೆತ್ ಬೌಲಿಂಗ್ ಚೆನ್ನಾಗಿದೆ. ವೇಗಿ ಹ್ಯಾರಿಸ್ ರೌಫ್ 150 ಕಿ,ಮೀ. ವೇಗದಲ್ಲಿ 7.78 ಎಕನಾಮಿ ರೇಟ್ ಹೊಂದಿದ್ದಾರೆ. ಶಾಹೀನ್ ಅಫ್ರೀದಿ 9.45 ಎಕನಾಮಿ ರೇಟ್ ಪಡೆದಿದ್ದಾರೆ.