ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನ್ ತಂಡ 19.4 ಓವರ್ಗಳಲ್ಲಿ 112 ರನ್ ಕಲೆ ಹಾಕಿತು. ಇಂಗ್ಲೆಂಡ್ ತಂಡ 18.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113ರನ್ ಗಳಿಸಿತು.
ತಂಡದ ಗೆಲುವಿಗೆ ಕಾರಣರಾಗಿದ್ದು ವೇಗಿ ಸ್ಯಾಮ್ ಕರನ್. 5 ವಿಕೆಟ್ ಪಡೆದು ಆಂಗ್ಲಾ ವಿಶೇಷ ದಾಖಲೆ ಬರೆದಿದ್ದಾರೆ.
ಕರನ್ 3.4 ಓವರ್ಗಳಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಪಡೆದರು. ಟಿ20ಯಲ್ಲಿ 5 ವಿಕೆಟ್ ಪಡೆದ ಮೊದಲ ಇಂಗ್ಲೆಂಡ್ ಬೌಲರ್ ಎಂಬ ಹಿರಿಮೆಗೆ ಕರನ್ ಪಾತ್ರರಾದರು.
ಈ ಹಿಂದೆ ಟಿ20 ವಿಶ್ವಕಪ್ನಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ವೆಸ್ಟ್ ಇಂಡೀಸ್ ವಿರುದ್ಧ 2.2 ಓವರ್ಗಳಿಂದ 2 ಮೇಡನ್ ಮಾಡಿ ವಿಕೆಟ್ ಪಡೆದರು.
ಆಫ್ಘಾನ್ ಬ್ಯಾಟರ್ಗಳಾದ ಇಬ್ರಾಹಿಂ ಜರ್ದಾನ್ 32, ಉಸ್ಮಾನ್ ಘನಿ 30, ಅಜಮತ್ ಹುಲ್ಲಾ ಒಮರ್ಜಾಹಿ 8, ರಶೀದ್ ಖಾನ್ 0, ಫಾಜಲ್ಹಕ್ ಫಾರೂಕ್ 0 ರನ್ ಅವರುಗಳ ವಿಕೆಟ್ ಪಡೆದು ಮಿಂಚಿದರು.