IND v ENG : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಭಾರತ ಕೆ.ಎಲ್. ರಾಹುಲ್ (5ರನ್) ರೋಹಿತ್ ಶರ್ಮಾ 27 ರನ್ ಗಳಿಸಿ ಔಟ್ ಆಗಿದ್ದಾರೆ. ಭಾರತ 10 ಓವರ್ಗಳಲ್ಲಿ 62 ರನ್ ಗಳಿಸಿದೆ.
ಅಡಿಲೇಡ್ನ ಒವೆಲ್ ಮೈದಾನದಲ್ಲಿ ಆರಂಭವಾಗಿರುವ ಸೆಮಿಫೈನಲ್ ಕದನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೇಲವ ಒಂದು ಬದಲಾವಣೆ ಮಾತ್ರ ಮಾಡಲಾಗಿದೆ. ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್ಗೆ ಅವಕಾಶ ನೀಡಲಾಗಿದೆ.
ಇಬ್ಬರಲ್ಲಿ ಯಾರಿಗೆ ಅವಕಾಶ ನೀಡಲಾಗುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಕುತೂಹಲ ಇತ್ತು.
ಮೊನ್ನೆ ಜಿಂಬಾಬ್ವೆ ವಿರುದ್ಧ ಆಡಿದ್ದ ಪಂದ್ಯದಲ್ಲಿ ರಿಷಬ್ ಪಂತ್ ಕೇವಲ 3 ರನ್ ಹೊಡೆದಿದ್ದರು.
ಇನ್ನು ಇಂಗ್ಲೆಂಡ್ ತಂಡ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆಗೆ ಗುರಿಯಾಗಿತ್ತು. ದಾವಿದ್ ಮಲನ್ ಹಾಗೂ ವೇಗಿ ಮಾರ್ಕ್ ವುಡ್ ಗಾಯದಿಂದ ಬಳಲಿದ್ದರಿಂದ ಆಡುವುದು ಅನುಮಾನದಲ್ಲಿತ್ತು. ಆದರೆ ಕೊನೆಯವರೆಗೂ ಆಡುತ್ತಾರೆ ಎನ್ನುವ ಭರವಸೆ ಇತ್ತು. ಆದರೆ ಇಬ್ಬರು ತಂಡದಲ್ಲಿ ಸ್ಥಾನಪಡೆದಿಲ್ಲ.