IND v Eng : ಕನ್ನಡಿಗ ಕೆ.ಎಲ್.ರಾಹುಲ್ ವಿಶ್ವಕಪ್ ಸೆಮಿಫೈನಲ್ನಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ.
ಅಡಿಲೇಡ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫಿಲ್ಡಿಂಗ್ ಆಯ್ದುಕೊಂಡಿತು.
ಭಾರತ ಪರ ಓಪಪನರ್ಗಳಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ಕೆ.ಎಲ್. ರಾಹುಲ್ ಕೇವಲ 5 ರನ್ ಗಳಿಸಿ ವೇಗಿ ಕ್ರಿಸ್ ವೋಕ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿ ಹೊರ ನಡೆದರು.ಇದರೊಂದಿಗೆ ಸೆಮಿಫೈನಲ್ನಲ್ಲಿ ಮತ್ತೊಮ್ಮೆ ಎಡವಿದರು.
ಈ ಹಿಂದೆ ಕೆ.ಎಲ್.ರಾಹುಲ್ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ 1 ರನ್ ಗಳಿಸಿ ನ್ಯೂಜಿಲೆಂಡ್ ವಿರುದ್ಧ ವೈಫಲ್ಯ ಅನುಭವಿಸಿದ್ದರು.
ರೋಹಿತ್ ಶರ್ಮಾ 27 ರನ್ ಗಳಿಸಿ ಜೋರ್ಡನ್ ಎಸೆತದಲ್ಲಿ ಕರನ್ ಕ್ಯಾಚ್ ನೀಡಿದರು. ಸೂರ್ಯ ಕುಮಾರ್ ಯಾದವ್ , ಸ್ಪಿನ್ನರ್ ರಶೀದ್ ಎಸೆತದಲ್ಲಿ ಸಾಲ್ಟ್ಗೆ ಕ್ಯಾಚ್ ನೀಡಿ ಹೊರ ನಡೆದರು.