Thursday, November 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

T20 World Cup 2022: ವಿಶ್ವಕಪ್​​ಗೆ ತಂಡ ಕಟ್ಟುತ್ತಿದೆಯಾ ಭಾರತ..? ಬ್ಯಾಟಿಂಗ್​​​​, ಬೌಲಿಂಗ್​​, ಆಲ್​​ರೌಂಡರ್​ ಪ್ರಶ್ನೆಗೆ ಉತ್ತರ..?

February 18, 2022
in Cricket, ಕ್ರಿಕೆಟ್
Ind VS WI T20 Series: ಕೊಲ್ಕತ್ತಾದಲ್ಲಿ ಅಬ್ಬರಿಸಿದ ರೋಹಿತ್​​, ಸೂರ್ಯಕುಮಾರ್​​​, ಬಿಷ್ಣೋಯಿ ಗೂಗ್ಲಿ ಮುಂದೆ ತಲೆಕೆಳಗಾದ ವಿಂಡೀಸ್​​ ಪ್ಲಾನ್​​

Team India, Sports Karnataka

Share on FacebookShare on TwitterShare on WhatsAppShare on Telegram

ಯುಎಇನಲ್ಲಿ ಮುಗಿದ ಟಿ20 ವಿಶ್ವಕಪ್​​ ನೆನಪು ಇನ್ನೂ ಮಾಸಿಲ್ಲ. ಆದರೆ ಅದಾಗಲೇ ಮತ್ತೊಂದು ಟಿ20 ವಿಶ್ವಕಪ್​​ನ ಮಾತು ಶುರುವಾಗಿದೆ. ಆಸ್ಟ್ರೇಲಿಯಾ ಆತಿಥ್ಯವಹಿಸುವ ಟಿ20 ವಿಶ್ವಕಪ್​​ಗೆ ಟೀಮ್​​ ಇಂಡಿಯಾ ಸಿದ್ಧವಾಗುತ್ತಿದೆ. ಆಯ್ಕೆಗಾರರು ವಿಶ್ವಕಪ್​ ಗೆದ್ದುಕೊಡಬಲ್ಲ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಓಪನರ್​​ಗಳು ಯಾರು..?

ಟೀಮ್​​ ಇಂಡಿಯಾದ ಒಂದು ಆರಂಭಿಕನ ಸ್ಥಾನ ನಾಯಕ ರೊಹಿತ್​​ ಶರ್ಮಾ ಹೆಸರಿನಲ್ಲಿ ಫಿಕ್ಸ್​​ ಆಗಿದೆ. ಆಗಿದೆ ಮತ್ತೊಬ್ಬ ಓಪನರ್​​ ಯಾರು ಅನ್ನವ ಪ್ರಶ್ನೆ ಇದೆ. ಉಪ ನಾಯಕ ಕೆ.ಎಲ್​​. ರಾಹುಲ್​​​ ಫ್ರಂಟ್​​ ರನ್ನರ್​​ ಆದರೂ ಸ್ಥಾನ ಗ್ಯಾರೆಂಟಿಯಲ್ಲ. ಇಶನ್​​ ಕಿಶನ್​​ ಲೆಫ್ಟ್​ ರೈಟ್​​ ಕಾಂಬಿನೇಷನ್​​ ಜೊತೆಗೆ ಬ್ಯಾಕ್​ ಅಪ್​​ ವಿಕೆಟ್​​ ಕೀಪರ್​​ ಸ್ಥಾನದ ಕಡೆ ಗಮನ ಇಟ್ಟಿದ್ದಾರೆ.  ಐಪಿಎಲ್​​ ಹೀರೋ ರುತುರಾಜ್​​ ಗಾಯಕ್ವಾಡ್​​ ಅವಕಾಶ ಸಿಕ್ಕರೆ ಸಾಕು, ಎರಡೂ ಕೈಗಳಿಂದಲೂ ಬಾಚಿಕೊಳ್ಳುವ ಉದ್ದೇಶದಲ್ಲಿದ್ದಾರೆ.

ಟಾಪ್​​ ಆರ್ಡರ್​​ ಕಥೆ ಏನು..?

ಸದ್ಯ ವಿರಾಟ್​​ ಕೊಹ್ಲಿ ಸ್ಥಾನ ಆಭಾದಿತ. ಆದರೆ ಮುಂದಿನ ದಿನಗಳಲ್ಲಿ ಈ ಸ್ಥಾನ ಯಾರ ಪಾಲಾಗುತ್ತದೆ ಅನ್ನುವ ಚರ್ಚೆ ಇದೆ. ವಿರಾಟ್​​ ಸ್ಟ್ರೈಕ್​​ ರೇಟ್​​ ಟಿ20 ಆಟಕ್ಕೆ ಸೂಕ್ತವಲ್ಲ ಅನ್ನುವ ಮಾತಿದೆ. ಈ ಸ್ಥಾನಕ್ಕಾಗಿ ವೆಂಕಟೇಶ್​ ಅಯ್ಯರ್​, ಶ್ರೇಯಸ್​​ ಅಯ್ಯರ್​​ ಮತ್ತು ಸೂರ್ಯಕುಮಾರ್​​ ಯಾದವ್​​ ಮತ್ತು ಆರಂಭಿಕನಾಗಿ ಸ್ಥಾನ ಸಿಗದೇ ಇದ್ದ ಪಕ್ಷದಲ್ಲಿ ಕೆ.ಎಲ್​​. ರಾಹುಲ್​​ ಕೂಡ ಕಣ್ಣಿಟ್ಟಿದ್ದಾರೆ.

ಮಿಡಲ್​​ ಆರ್ಡರ್​​ ಸ್ಥಾನಕ್ಕಾಗಿ ಫೈಟ್​​

ಟಿ20 ಕ್ರಿಕೆಟ್​ನಲ್ಲಿ ಮಿಡಲ್​​ ಆರ್ಡರ್​ ಅಂದರೆ ಫಿನಿಷರ್​ಗಳ ಆಟವೇ. ಆದರೆ ಈ ಸ್ಥಾನ ಟಿ20 ವಿಶ್ವಕಪ್​​ನಲ್ಲಿ ಯಾರ ಪಾಲಾಗುತ್ತದೆ ಅನ್ನುವ ಕುತೂಹಲವಿದೆ. ವಿಕೆಟ್​​ ಕೀಪರ್​​ ರಿಷಬ್​ ಪಂತ್​​ ಸ್ಥಾನ ಬಹುತೇಕ ಖಚಿತ. ಶ್ರೇಯಸ್​​ ಮತ್ತು ಸೂರ್ಯ ಆಟ ಚೆನ್ನಾಗಿದ್ದರೆ ಈ ಸ್ಥಾನದ ಚಿಂತೆ ಇಲ್ಲ. ಆದರೆ ಹಳೆಯ ಹುಲಿಗಳು ಈ ಈ ಸ್ಥಾನದ ಪೈಪೋಟಿಯನ್ನು ಬಿಟ್ಟಿವೆ. ಹೀಗಾಗಿ ಯುವ ಆಟಗಾರರಿಗೆ ಈ ಸ್ಥಾನ ಸಿಗಲಿದೆ.

ಆಲ್​ರೌಂಡರ್​​ಗಳು ಯಾರು..?

ಶಾರ್ದೂಲ್​ ಥಾಕೂರ್​, ದೀಪಕ್​​ ಚಹರ್​, ಹರ್ಷಲ್​ ಪಟೇಲ್​​, ವೆಂಕಟೇಶ್​ ಅಯ್ಯರ್​,  ವಾಷಿಂಗ್ಟನ್​​ ಸುಂದರ್​​ ಹೀಗೆ ಆಲ್​​ರೌಂಡರ್​​ಗಳ ದೊಡ್ಡ ಪಟ್ಟಿ ಇದೆ.  ಇವರ ಜೊತೆ ರವೀಂದ್ರ ಜಡೇಜಾ ಫೈಟ್​​ ಮಾಡುತ್ತಿದ್ದಾರೆ. ಮರೆತು ಹೋಗಿರುವ ಹಾರ್ದಿಕ್​​ ಪಾಂಡ್ಯಾ ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.  ಸುಂದರ್​​ ಆಫ್​​ ಸ್ಪಿನ್ನರ್​​ ಆಗಿದ್ದರೆ,  ಜಡೇಜಾ ಎಡಗೈ ಸ್ಪಿನ್ನರ್​​. ಉಳಿದವರು ಮಧ್ಯಮ ವೇಗದ ಬೌಲರ್​​ಗಳು. ಹೀಗಾಗಿ ಈ ಎರಡು ಸ್ಥಾನ ಜಡೇಜಾ, ಸುಂದರ್​​ ಮತ್ತು ಒಬ್ಬ ಮಧ್ಯಮ ವೇಗಿ ಕಂ ಬ್ಯಾಟ್ಸ್​​ಮನ್​​ಗೆ ಒಲಿಯಬಹುದು ಅನ್ನುವ ಲೆಕ್ಕಾಚಾರವಿದೆ.

ವೇಗಿಗಳು ಮತ್ತು ಸ್ಪಿನ್ನರ್​​ಗಳು

ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಯುವುದರಿಂದ  ಫಾಸ್ಟ್​​ ಬೌಲರ್​​ಗಳು ಬೇಕೇ ಬೇಕು. ಮೊಹಮ್ಮದ್​ ಸಿರಾಜ್​​​ ಬೌಲಿಂಗ್​​ ವಿಭಾಗದ ಲೀಡರ್​​ ಆಗಬಹುದು. ಆವೇಶ್​​ ಖಾನ್​​​ ಸ್ಥಾನ ಐಪಿಎಲ್​​ ಪ್ರದರ್ಶನದ ಮೇಲೆ ನಿರ್ಧಾರವಾಗಬಹದು.  ಬ್ಯಾಟಿಂಗ್​​ ಬಲವನ್ನು ಗಟ್ಟಿ ಮಾಡುವ ಉದ್ದೇಶದಿಂದ ಮಧ್ಯಮ ವೇಗ ಹೊಂದಿರುವ ಬೌಲಿಂಗ್​​ ಆಲ್​​ರೌಂಡರ್​​ಗಳನ್ನು ತಂಡಕ್ಕೆ ಆಯ್ಕೆ ಮಾಡಬಹುದು.  ಇನ್ನು ಒಬ್ಬ ಸ್ಪೆಷಲಿಸ್ಟ್​ ಸ್ಪಿನ್ನರ್​​ ತಂಡಕ್ಕೆ ಆಯ್ಕೆ ಆಗಬಹುದು. ಜಡೇಜಾ ಮತ್ತು ಸುಂದರ್​​ ಬಲ ಸ್ಪಿನ್ನರ್​ ಆಯ್ಕೆಯನ್ನು ಕಡಿತ ಮಾಡಬಹುದು.

ಒಟ್ಟಿನಲ್ಲಿ ಅಕ್ಟೋಬರ್​ನಲ್ಲಿ ನಡೆಯುವ ವಿಶ್ವಕಪ್​​ ಟೂರ್ನಿಯಲ್ಲಿ  ಪ್ರಶಸ್ತಿ ಗೆಲ್ಲಬೇಕು ಅಂದರೆ ಸುಲಭದ ಮಾತಲ್ಲ. ಉತ್ತಮ ಕಾಂಬಿನೇಷನ್​​ ಮತ್ತು ಆಟಗಾರರ ಫಾರ್ಮ್​ ಕನಸಿಗೆ ಅರ್ಧ ಬಲ ನೀಡಬಹುದು.

6ae4b3ae44dd720338cc435412543f62?s=150&d=mm&r=g

admin

See author's posts

Tags: AustraliaICC T20 World cupindiaT20 World Cup
ShareTweetSendShare
Next Post
NZ vs SA 1st Test: ಹೆನ್ರಿ ನಿಕೋಲ್ಸ್ ಶತಕದ ಅಬ್ಬರ: ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿ ಸೌತ್‌ ಆಫ್ರಿಕಾ

NZ vs SA 1st Test: ಹೆನ್ರಿ ನಿಕೋಲ್ಸ್ ಶತಕದ ಅಬ್ಬರ: ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿ ಸೌತ್‌ ಆಫ್ರಿಕಾ

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram