India -West Indies ODI series – ಏಕದಿನ ತಂಡ ಸೇರಿಕೊಂಡ ಇಶಾನ್ ಕಿಶಾನ್- ಟೀಮ್ ಇಂಡಿಯಾ ಕಠಿಣ ಅಭ್ಯಾಸ

ವೆಸ್ಟ್ ಇಂಡೀಸ್ ವಿರುದ್ದದ ಮೂರು ಏಕದಿನ ಪಂದ್ಯಗಳ ಸರಣಿಗೆ ಟೀಮ್ ಇಂಡಿಯಾ ತಯಾರಿ ನಡೆಸುತ್ತಿದೆ. ಫೆಬ್ರವರಿ 6ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.
ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ಅಭ್ಯಾಸಕ್ಕು ಮುನ್ನ ನಾಯಕ ರೋಹಿತ್ ಶರ್ಮಾ ತಂಡದ ಅಟಗಾರರೊಂದಿಗೆ ಚರ್ಚೆ ನಡೆಸಿದ್ರು. ಇದೇ ವೇಳೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಔಪಚಾರಿಕವಾಗಿ ತಂಡದ ಆಟಗಾರರಿಗೆ ಪರಿಚಯಿಸಿದ್ರು.
ಇನ್ನು ಆರಂಭಿಕ ಆಟಗಾರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ತರಬೇತಿಯಲ್ಲಿ ಭಾಗಿಯಾಗಿರಲಿಲ್ಲ. ಕೋವಿಡ್ ಸೋಂಕಿನಿಂದಾಗಿ ಈ ಮೂವರು ಆಟಗಾರರೊಂದಿಗೆ ನಾಲ್ವರು ಸಿಬ್ಬಂದಿಗಳು ಐಸೋಲೇಷನ್ ನಲ್ಲಿದ್ದಾರೆ.
ಅಂದ ಹಾಗೇ ತರಬೇತಿಗೆ ಮುನ್ನ ಟೀಮ್ ಇಂಡಿಯಾ ಆಟಗಾರರನ್ನು ಮತ್ತೆ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಎಲ್ಲಾ ಆಟಗಾರರ ವರದಿ ನೆಗೆಟಿವ್ ಬಂದಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ದೂರ ಮಾಡಿದೆ.

India -West Indies ODI series – Team India train in right earnest ahead of WI ODIs
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ನೆಟ್ಸ್ ನಲ್ಲಿ ಬ್ಯಾಟಿಂಗ್ ತಾಲೀಮು ನಡೆಸಿದ್ರು. ಇವರಿಗೆ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಅವರು ಬೌಲಿಂಗ್ ಮಾಡುತ್ತಿದ್ದರು. ಹಾಗೇ ಕುಲದೀಪ್ ಯಾದವ್ ಸುದೀರ್ಘ ಅವಧಿಯ ನಂತರ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಏಕದಿನ ಪಂದ್ಯಕ್ಕೆ ಕುಲ್ಚಾ ಬದ್ರರ್ಸ್ ಜೊತೆಯಾಗಿ ಆಡ್ತಾರೋ ಅನ್ನೋದನ್ನು ಕಾದು ನೋಡಬೇಕು. ಟೀಮ್ ಇಂಡಿಯಾದಲ್ಲಿ ಧೋನಿ ಇರುವಾಗ ಕುಲ್ಚಾ ಬ್ರದರ್ಸ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಇನ್ನೊಂದೆಡೆ ವೇಗಿಗಳಾದ ಮಹಮ್ಮದ್ ಸೀರಾಜ್ ಮತ್ತು ಶಾರ್ದೂಲ್ ಥಾಕೂರ್ ಕೂಡ ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ರು.
ಇನ್ನು ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯಕ್ಕೆ ಕೆ.ಎಲ್. ರಾಹುಲ್ ಆಡುತ್ತಿಲ್ಲ. ಹಾಗೇ ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್ವಾಡ್ ಬದಲಿಗೆ ಮಯಾಂಕ್ ಅಗರ್ ವಾಲ್ ಮತ್ತು ಇಶಾನ್ ಕಿಶಾನ್ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ. ಮಯಾಂಕ್ ಅಗರ್ ವಾಲ್ ಸದ್ಯ ಐಸೊಲೇಷನ್ ನಲ್ಲಿದ್ದಾರೆ. ಹಾಗೇ ಇಶಾನ್ ಕಿಶಾನ್ ಅವರು ಟಿ-20 ತಂಡದಲ್ಲಿದ್ದರು.
ಇನ್ನೊಂದೆಡೆ ನೆಟ್ ಬೌಲರ್ ಆಗಿ ತಂಡದಲ್ಲಿದ್ದ ನವದೀಪ್ ಸೈನಿ ಕೂಡ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಆಗಿದ್ದು, ಐಸೋಲೇಷನ್ ನಲ್ಲಿದ್ದಾರೆ.