ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸೋಲಲು ಹಲವಾರು ಕಾರಣಗಳಿವೆ.
ಇದರಲ್ಲಿ ಪ್ರಮುಖ ಕಾರಣವೆಂದರೆ ಪವರ್ ಪ್ಲೇನಲ್ಲಿ ಭಾರತೀಯ ಬ್ಯಾಟರ್ಗಳು ಆಡಿದ ರೀತಿ. ಪವರ್ ಪ್ಲೇನಲ್ಲಿ ಅಗ್ರ ಬ್ಯಾಟರ್ಗಳು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ರನ್ ಹೆಚ್ಚಿಸಬೇಕಿತ್ತು. ಆದರೆ ಇಡೀ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ಭಾರತದ ಬ್ಯಾಟಿಂಗ್ ಕಳಪೆಯಾಗಿತ್ತು.
ಇದರ ಪರಿಣಾಮವೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ಗೆ ಸುಲಭವಾಗಿ ಶರಣಾಗುವಂತಾಯಿತು.
ಓಪನರ್ಸ್ಗಳಾದ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್ ಕಳಪೆಯಾಗಿತ್ತು.ಕೆ.ಎಲ್.ರಾಹುಲ್ ಎರಡು ಅರ್ಧ ಶತಕ ಸಿಡಿಸಿದ್ದು ಬಿಟ್ಟರೆ ವೈಫಲ್ ಅನುಭವಿಸಿದ್ದೆ ಹೆಚ್ಚು.
ಅಗ್ರ ಬ್ಯಾಟರ್ಗಳು ಪವರ್ ಪ್ಲೇನಲ್ಲಿ ಆಡಿದ ಇಲ್ಲಿದೆ.
ಪವರ್ ಪ್ಲೇನಲ್ಲಿ ನಾಯಕ ರೋಹಿತ್ ಶರ್ಮಾ 76 ಎಸೆತಗಳಿಂದ 72 ರನ್ ಹೊಡೆದು 4 ಬಾರಿ ಔಟ್ ಆಗಿದ್ದಾರೆ. 94.7 ಸ್ಟ್ರೇಕ್ ರೇಟ್ ಹೊಂದಿದ್ದಾರೆ.ಶೇ.55.20 ಡಾಟ್ ಬಾಲ್ ಆಡಿದ್ದಾರೆ.

ಕನ್ನಡಿಗ ಕೆ.ಎಲ್.ರಾಹುಲ್ 76 ಎಸೆತಗಳನ್ನು ಎದುರಿಸಿ 68 ರನ್ ಸಿಡಿಸಿ 4 ಬಾರಿ ಔಟ್ ಆಗಿದ್ದಾರೆ. 89.5 ಸ್ಟ್ರೇಕ್ ರೇಟ್ ಹೊಂದಿದ್ದು 60.50 ಶೇ. ಡಾಟ್ ಬಾಲ್ ಆಡಿದ್ದಾರೆ.
ವಿರಾಟ್ ಕೊಹ್ಲಿ 51 ಎಸೆತದಲ್ಲಿ 50 ರನ್ ಸಿಡಿಸಿ ಒಮ್ಮೆಯೂ ಔಟ್ ಆಗಿಲ್ಲ. ಸ್ಟ್ರೇಕ್ ರೇಟ್ 98 ಹೊಂದಿದ್ದಾರೆ.45.00 ಶೇ. ಡಾಟ್ ಬಾಲ್ ಆಡಿದ್ದಾರೆ.
ಸೂರ್ಯ ಕುಮಾರ್ ಯಾದವ್ 12 ಎಸೆತಗಳಲ್ಲಿ 16 ರನ್ ಹೊಡೆದು 1 ಬಾರಿ ಔಟ್ ಆಗಿದ್ದಾರೆ. 133.3 ಸ್ಟ್ರೇಕ್ ರೇಟ್ ಹೊಂದಿದ್ದು ಶೇ.50.00 ಡಾಟ್ ಬಾಲ್ ಆಡಿದ್ದಾರೆ.