India -Newzealand women’s ODI series ಭಾರತ – ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ಏಕದಿನ ಸರಣಿ – ವೇಳಾಪಟ್ಟಿಯಲ್ಲಿ ಬದಲಾವಣೆ..!
ಫೆ,12ರಿಂದ ಆರಂಭ

ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ಸರಣಿಯ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹಾಗೇ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಮಾರ್ಚ್ – ಏಪ್ರಿಲ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಮೊದಲು ಭಾರತ ಮಹಿಳಾ ತಂಡಕ್ಕೆ ಈ ದ್ವಿಪಕ್ಷೀಯ ಸರಣಿ ಹೆಚ್ಚು ಮಹತ್ವದ್ದಾಗಿದೆ.
ಈ ಹಿಂದೆ ನಿಗದಿಯಾಗಿದ್ದಂತೆ ನ್ಯೂಜಿಲೆಂಡ್ ವಿರುದ್ದ ಭಾರತ ಐದು ಏಕದಿನ ಮತ್ತು ಏಕೈಕ ಟಿ-20 ಪಂದ್ಯವನ್ನು ಆಡಲಿದೆ.
India -Newzealand women’s ODI series – begin on February 12 as fixtures revised
ಏಕೈಕ ಟಿ-20 ಪಂದ್ಯ ಫೆಬ್ರವರಿ 9ರಂದು ನಡೆಯಲಿದೆ. ಹಾಗೇ ಏಕದಿನ ಸರಣಿ ಫೆಬ್ರವರಿ 11ರ ಬದಲು ಫೆಬ್ರವರಿ 12ರಿಂದ ಆರಂಭವಾಗಲಿದೆ. ಎರಡನೇ ಏಕದಿನ ಪಂದ್ಯ ಫೆಬ್ರವರಿ 14ರ ಬದಲು 14ರಂದು ಮತ್ತು ಮೂರನೇ ಏಕದಿನ ಪಂದ್ಯ ಫೆಬ್ರವರಿ 15ರ ಬದಲು 16ರಂದು ನಡೆಯಲಿದೆ ಅಂತಿಮ ಎರಡು ಏಕದಿನ ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ., ಈ ಹಿಂದೆ ನಿಗದಿಯಾದಂತೆ ಫೆಬ್ರವರಿ 22 ಮತ್ತು 24ರಂದು ನಡೆಯಲಿದೆ.
ಸದ್ಯ ಭಾರತ ಮಹಿಳಾ ತಂಡ ಕ್ರೈಸ್ಟ್ ಚರ್ಚ್ ನಲ್ಲಿ ಕ್ವಾರಂಟೈನ್ ಮತ್ತು ಐಸೋಲೇಷನ್ ನಲ್ಲಿದೆ.