Rohit Sharma – ಫಿಟ್ ಆಗಿರೋದೇ ರೋಹಿತ್ ಶರ್ಮಾ ಮುಂದಿರುವ ದೊಡ್ಡ ಸವಾಲು..!
ರೋಹಿತ್ ಶರ್ಮಾ… ವಿಶ್ವ ಕ್ರಿಕೆಟ್ ನ ಹಿಟ್ ಮ್ಯಾನ್. ಸಿಡಿಲಬ್ಬರದ ಬ್ಯಾಟ್ಸ್ ಮೆನ್.. ತಾಳ್ಮೆಯ ಆಟಗಾರ ಬ್ಯಾಟಿಂಗ್ ಕೌಶಲ್ಯದಲ್ಲೂ ಪರ್ಫೆಕ್ಟ್.. ಕೂಲ್ ಆಗಿ ತಂಡವನ್ನು ಮುನ್ನಡೆಸುವ ಚಾಣಕ್ಯ.. ಹೀಗೆ ರೋಹಿತ್ ಶರ್ಮಾ ಆಟಗಾರನಾಗಿ, ನಾಯಕನಾಗಿ ಯಾವುದರಲ್ಲೂ ಯಾರಿಗೂ ಕಮ್ಮಿ ಏನು ಇಲ್ಲ.
ಆದ್ರೆ ಸಮಸ್ಯೆ ಇರೋದು ಒಂದೇ ಒಂದು ವಿಚಾರದಲ್ಲಿ. ಅದು ಫಿಟ್ ನೆಸ್. ಸದಾ ಕಾಡುತ್ತಿರುವ ಗಾಯದ ಸಮಸ್ಯೆ ರೋಹಿತ್ ಅವರನ್ನು ದೀರ್ಘ ಕಾಲದವರೆಗೆ ಆಡಲು ಬಿಡುತ್ತಿಲ್ಲ. ಹೀಗಾಗಿ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದೊಳಗೆ ಬಂದು ಹೋಗುವ ಆತಿಥಿಯಾಗುತ್ತಿದ್ದಾರೆ.
ಆದ್ರೆ ಈಗ ರೋಹಿತ್ ಶರ್ಮಾ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಟೀಮ್ ಇಂಡಿಯಾದ ಏಕದಿನ ಮತ್ತು ಟಿ-20 ತಂಡಕ್ಕೆ ನಾಯಕನಾಗಿದ್ದಾರೆ. ಟೆಸ್ಟ್ ತಂಡಕ್ಕೂ ನಾಯಕನಾಗುವುದು ಬಹುತೇಕ ಖಚಿತ. ಆದ್ರೆ ಫಿಟ್ ಆಗಿರುತ್ತಾರೋ ಅನ್ನೋದೇ ದೊಡ್ಡ ಆತಂಕ
ಕಳೆದ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಬೇಕಿತ್ತು. ಆದ್ರೆ ಗಾಯ ಅದಕ್ಕೆ ಅಡ್ಡಿಪಡಿಸಿದೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಭಾರತ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ.
Challenge for Rohit Sharma is to stay fit and play everything till World Cup
ಅಂದ ಹಾಗೇ, ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸತತವಾಗಿ ಆಡಲೇಬೇಕು. ಟಿ-20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಅನ್ನು ರೋಹಿತ್ ಮುನ್ನಡೆಸಬೇಕಿರುವುದರಿಂದ ಫಿಟ್ ನೆಸ್ ಕಡೆಗೆ ಹೆಚ್ಚಿನ ಆದ್ಯತೆ ನೀಡಲೇಬೇಕು.
ಪ್ರತಿ ಪಂದ್ಯ, ಪ್ರತಿ ಸರಣಿಯಲ್ಲೂ ರೋಹಿತ್ ತಂಡದಲ್ಲಿದ್ರೆ ಮಾತ್ರ ಹೊಂದಾಣಿಕೆಯ ಹಾಗೂ ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯ.. ಮತ್ತೊಂದೆಡೆ, ರೋಹಿತ್ ಗೆ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಯಾವುದೇ ಸಮಸ್ಯೆ ಇಲ್ಲ. ತಂಡದ ಆಟಗಾರರ ಸಮಸ್ಯೆನೂ ಇಲ್ಲ. ಯುವ ಹಾಗೂ ಅನುಭವಿ ಆಟಗಾರರ ದಂಡೇ ಇದೆ. ಆದ್ರೆ ಅದಕ್ಕಿಂತ ಹೆಚ್ಚಾಗಿ ರೋಹಿತ್ ಶರ್ಮಾ ಗಾಯದಿಂದ ಹೊರಬರಬೇಕು. ಫಿಟ್ ನೆಸ್ ಕಾಯ್ದುಕೊಳ್ಳಲೇಬೇಕು. ಇಲ್ಲದೆ ಇದ್ರೆ ಟೀಮ್ ಇಂಡಿಯಾಗೆ ಅಪಾಯ ತಪ್ಪಿದ್ದಲ್ಲ. ನಾಯಕತ್ವ ಸಮಸ್ಯೆಯೇ ದೊಡ್ಡ ತಲೆನೋವಾಗಲಿದೆ.