ಎಫ್ಐಎಚ್ ಪ್ರೊ ಲೀಗ್ನ ಎರಡನೇ ಪಂದ್ಯದಲ್ಲಿ ಭಾರತ ಹಾಕಿ ತಂಡ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 4-3 ಗೋಲುಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಭಾರತದ ಡ್ರಾಗ್ಫ್ಲಿಕ್ಕರ್ ಹರ್ಮನ್ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು ಗಳಿಸಿದರು. ಈ ಪಂದ್ಯದಲ್ಲಿ ಅವರು ತಮ್ಮ ಗೋಲುಗಳ ಶತಕವನ್ನೂ ಪೂರೈಸಿದರು.
ಭಾನುವಾರ ನಡೆದ ಎಫ್ಐಎಚ್ ಪ್ರೊ ಲೀಗ್ನಲ್ಲಿ ಭಾರತ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಿತು. ಇಲ್ಲಿ ಭಾರತ ತಂಡ ಸಾರ್ವಕಾಲಿಕ ಎದುರಾಳಿ ತಂಡದ ಮೇಲೆ ಹಿಡಿತ ಸಾಧಿಸಿತು. ಮತ್ತು ಅಂತಿಮವಾಗಿ ತಂಡ ಜಯದ ಮಾಲೆ ತೊಟ್ಟಿತು. ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿದರೆ, ಮನ್ಪ್ರೀತ್ ಸಿಂಗ್ ಒಂದು ಗೋಲು ಗಳಿಸಿದರು. ಈ ಎರಡು ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡವು ಪ್ರೊ ಲೀಗ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4-3 ಅಂತರದ ಜಯ ದಾಖಲಿಸಿತು.
ಏಳನೇ ನಿಮಿಷದಲ್ಲಿ ಭಾರತದ ಗೋಲ್ಪೋಸ್ಟ್ನಲ್ಲಿ ಲಿಯಾಮ್ ಸ್ಯಾನ್ಫೋರ್ಡ್ ಗೋಲು ಗಳಿಸಿದಾಗ ಪಂದ್ಯದ ಮೊದಲ ಗೋಲು ಇಂಗ್ಲೆಂಡ್ಗೆ ದಾಖಲಾಯಿತು. 1-0 ಮುನ್ನಡೆಯಲ್ಲಿದ್ದ ಇಂಗ್ಲೆಂಡ್ 15ನೇ ನಿಮಿಷದಲ್ಲಿ ಮನ್ಪ್ರೀತ್ ಗೋಲು ಬಾರಿಸಿ ಅಂತರವನ್ನು ಸಮನಾಗಿಸಿದರು. ಇದಾದ ನಂತರ ಭಾರತ ತಂಡ ಪ್ರಾಬಲ್ಯ ಸಾಧಿಸಿತು ಮತ್ತು ಹರ್ಮನ್ಪ್ರೀತ್ ಒಂದರ ನಂತರ ಒಂದರಂತೆ ಮೂರು ಗೋಲುಗಳನ್ನು ಗಳಿಸಿದರು.
ಹರ್ಮನ್ಪ್ರೀತ್ (26, 26 ಮತ್ತು 43ನೇ ನಿಮಿಷ) ಮತ್ತು 15ನೇ ನಿಮಿಷದಲ್ಲಿ ಮನ್ಪ್ರೀತ್ ಗೋಲು ಗಳಿಸುವ ಮೂಲಕ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುನ್ನಡೆ ಸಾಧಿಸಲು ನೆರವಾದರು.
ಇಂಗ್ಲೆಂಡ್ ಪರ ಲಿಯಾಮ್ ಸ್ಯಾನ್ಫೋರ್ಡ್ (7ನೇ ನಿ), ಡೇವಿಡ್ ಕಾಂಡನ್ (39ನೇ ನಿ) ಮತ್ತು ಸ್ಯಾಮ್ ವಾರ್ಡ್ (44ನೇ ನಿ) ಗೋಲು ಗಳಿಸಿದರು. ಭಾರತವು ಪಂದ್ಯದಲ್ಲಿ ಎಂಟು ಪೆನಾಲ್ಟಿ ಕಾರ್ನರ್ಗಳಲ್ಲಿ ನಾಲ್ಕರಲ್ಲಿ ಗೋಲು ಸಿಡಿಸಿತು. ಇಂಗ್ಲೆಂಡ್ ಸಿಕ್ಕ ಆರು ಅವಕಾಶದಲ್ಲಿ ಮೂರು ಗೋಲು ಗಳಿಸಿತು. ಈ ಗೆಲುವಿನೊಂದಿಗೆ ಭಾರತ 10 ಪಂದ್ಯಗಳಿಂದ 21 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಆರು ಪಂದ್ಯಗಳಿಂದ ಏಳು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.