ಕ್ರಿಕೆಟ್ನ ದಂತಕಥೆಗಳ ಪೈಕಿ ನ್ಯೂಜಿಲೆಂಡ್ನ ರಾಸ್ ಟೇಲರ್ಗೂ ಒಂದು ಸ್ಥಾನವಿದೆ. ನ್ಯೂಜಿಲೆಂಡ್ನ ಹಲವು ಗೆಲುವುಗಳಲ್ಲಿ ಕೊಡುಗೆ ನೀಡಿದ್ದ ಟೇಲರ್ ತನ್ನ ಕಟ್ಟಕಡೆಯ ಅಂತರಾಷ್ಟ್ರೀಯ ಪಂದ್ಯ ಆಡಿ ಮುಗಿಸಿದ್ದಾರೆ. ಕೊನೆಯ ಅಂತರಾಷ್ಟ್ರೀಯ ಪಂದ್ಯದಲ್ಲಿ ಟೇಲರ್ಗೆ ನ್ಯೂಜಿಲೆಂಡ್ ತಂಡ ಗೆಲುವಿನ ಉಡುಗೊರೆ ನೀಡಿದೆ. ನೆದರ್ಲೆಂಡ್ ತಂಡವನ್ನು 3ನೇ ಏಕದಿನ ಪಂದ್ಯದಲ್ಲಿ 116 ರನ್ಗಳಿಂದ ಸೋಲಿಸುವ ಮೂಲಕ ರಾಸ್ ಟೇಲರ್ ಎಂಬ ಅತ್ಯದ್ಭುತ ಬ್ಯಾಟ್ಸ್ಮನ್ಗೆ ಕಿವೀಸ್ ಶುಭಾಶಯ ಹೇಳಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 333 ರನ್ಗಳಿಸಿತ್ತು. ಗಪ್ಟಿಲ್ 106 ರನ್ಗಳಿಸಿದರೆ ವಿಲ್ ಯಂಗ್ 120 ರನ್ಗಳಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊನೆಯ ಇನ್ನಿಂಗ್ಸ್ ಆಡಿದ ರಾಸ್ ಟೇಲರ್ 14 ರನ್ಗಳಿಸಿ ಔಟಾದರು. ಉಳಿದ ಬ್ಯಾಟ್ಸ್ಮನ್ಗಳಿಂದ ಹೆಚ್ಚಿನ ಕೊಡುಗೆ ಬರಲಿಲ್ಲ.
ಟಫ್ ಚೇಸಿಂಗ್ನಲ್ಲ ನೆದರ್ಲೆಂಡ್ ಹೋರಾಟ ಪ್ರದರ್ಶಿಸಿತು. ಸ್ಟೀಫನ್ ಮೈ ಬರ್ಗ್್ 43 ಎಸೆತಗಳಲ್ಲಿ 64 ರನ್ ಸಿಡಿಸಿದರು. ಲೊಗನ್ ವಾನ್ ಬೀಕ್ 32 ರನ್ಗಳಿಸಿ ಮಿಂಚಿದರು. ವಿಕ್ರಮಜಿತ್ ಸಿಂಗ್ (25) , ಬಾಸ್ ದಿ ಲೀಡ್ (21) ಮತ್ತು ಮೈಕಲ್ ರಿಪ್ಪನ್ 24 ರನ್ಗಳಿಸಿದರು. ನೆದರ್ಲೆಂಡ್ 42.3 ಓವರುಗಳಲ್ಲಿ 218 ರನ್ಗಳಿಸಿ ಆಲೌ್ಟ್ ಆಯಿತು. ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ 4 ವಿಕೆಟ್ ಪಡೆದು ಮಿಂಚಿದರು. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 3-0ಯ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.