ಮೊದಲ ಏಕದಿನ ಪಂದ್ಯದಲ್ಲಿ (ODI) ಟೀಮ್ ಇಂಡಿಯಾ (Team India) ಆತಿಥೇಯ ಜಿಂಬಾಬ್ವೆ (Zimabwe) ತಂಡವನ್ನು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಕಟ್ಟಿಹಾಕಿತ್ತು. ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ (Ind) ಆತಿಥೇಯ ತಂಡಕ್ಕೆ ಚೇತರಿಸಿಕೊಳ್ಳಲು ಕೂಡ ಅವಕಾಶ ನೀಡಲಿಲ್ಲ. ಈಗ ಎರಡನೇ ಪಂದ್ಯದ ಮೇಲೆ ಕೆ.ಎಲ್. ರಾಹುಲ್ ಬಳಗದ ಕಣ್ಣಿದೆ. 3 ಪಂದ್ಯಗಳ ಸರಣಿಯಲ್ಲಿ 2ನೇ ಪಂದ್ಯವನ್ನೇ ಗೆದ್ದು ಸರಣಿ ಲೆಕ್ಕಾಚಾರ ಮುಗಿಸುವುದು ಟೀಮ್ ಇಂಡಿಯಾದ ಲೆಕ್ಕಾಚಾರವಾಗಿದೆ. ಜಿಂಬಾಬ್ವೆ (Zim) ಹೋರಾಟ ಮಾಡಿ ಮಾನ ಉಳಿಸಿಕೊಳ್ಳುವ ಯೋಚನೆಯಲ್ಲಿದೆ (Ind VS Zim).
2ನೇ ಪಂದ್ಯಕ್ಕೆ ಟೀಮ್ ಇಂಡಿಯಾ ಹೆಚ್ಚು ಬದಲಾವಣೆ ಆಗುವುದು ಅನುಮಾನ. ಶಿಖರ್ ಧವನ್ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಇಶನ್ ಕಿಶನ್ ಕೂಡ ಆರಂಭಿಕರ ಸ್ಥಾನಕ್ಕೆ ಪ್ಯಾಡ್ ಕಟ್ಟಿಕೊಂಡು ರೆಡಿ ಇದ್ದಾರೆ. ದೀಪಕ್ ಹೂಡ, ಸಂಜು ಸ್ಯಾಮ್ಸನ್ ಕೂಡ ಆಟಕ್ಕೆ ಸಜ್ಜಾಗಿದ್ದಾರೆ. ದೀಪಕ್ ಚಹರ್ ಮತ್ತು ಅಕ್ಸರ್ ಪಟೇಲ್ ಆಲ್‌ರೌಂಡ್ ಆಟ ಆಡಬಲ್ಲರು.
ಬೌಲಿಂಗ್‌ನಲ್ಲಿ ದೀಪಕ್ ಚಹರ್ ಕಂ ಬ್ಯಾಕ್ ಮಾಡಿದ್ದಾರೆ. ಸಿರಾಜ್ ಮತ್ತು ಪ್ರಸಿಧ್ ಕೃಷ್ಣ ವಿಕೆಟ್ ಕಬಳಿಸಿದ್ದಾರೆ. ಕುಲ್‌ದೀಪ್ ಮತ್ತು ಅಕ್ಸರ್ ಸ್ಪಿನ್ ಬಲವಿದೆ. ಹೀಗಾಗಿ ಎರಡನೇ ಪಂದ್ಯದಕ್ಕೆ ಟೀಮ್ ಇಂಡಿಯಾ ಹೆಚ್ಚು ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿಲ್ಲ. ಬೆಂಚ್ ಸ್ಟ್ರೆಂಗ್ತ್ ಆಟಗಾರರಿಗೆ ಸ್ಥಿರವಾದ ಅವಕಾಶ ನೀಡಲು ನಿರ್ಧಾರ ಮಾಡಿದೆ.
ಜಿಂಬಾಬ್ವೆ ತಂಡ ಅಂದುಕೊಂಡ ಹಾಗೇ ಆಡುತ್ತಿಲ್ಲ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತೋರಿದ ಸಾಹಸವನ್ನು ಪ್ರದರ್ಶಿಸುತ್ತಿಲ್ಲ. ಇನೊಸೆಂಟ್ ಕಯಯ, ಮುರುಮಾನಿ, ಮದವಿರೆ, ಸೀನ್ ವಿಲಿಯಮ್ಸ್ ಮತ್ತು ರೆಗಿಸ್ ಚಕಬ್ವಾ ಬ್ಯಾಟಿಂಗ್‌ನಲ್ಲಿ ಮಿಂಚಬೇಕಿದೆ. ವಿಕ್ಟನ್ ನ್ಯೂಚಿ, ಲ್ಯೂಕ್ ಜಾಂಗ್ವೆ ಮತ್ತು ರಿಚರ್ಡ್ ಬೌಲಿಂಗ್‌ನಲ್ಲಿ ಮಿಂಚಬೇಕಿದೆ.
ಹರಾರೆ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ನೆರವು ನೀಡುತ್ತದೆ. ಪಂದ್ಯ ಬೆಳಗ್ಗಿನ ಹೊತ್ತಿನಲ್ಲಿ ಆರಂಭವಾಗುವುದರಿಂದ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆರಿಸಿಕೊಳ್ಳುವುದು ಬಹುತೇಕ ಖಚಿತ.