ಇಂಗ್ಲೆಂಡ್ (England) ವೇಗಿ ಜೇಮ್ಸ್ ಆಂಡರ್ಸನ್ಗೆ (James Anderson) ವಯಸ್ಸೇ ಆಗುವುದಿಲ್ಲ. ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಆಂಡರ್ಸನ್ ಪ್ರದರ್ಶನ ಉತ್ತಮವಾಗುತ್ತಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಅಷ್ಟೇ ಅಲ್ಲ ಈಗ 110 ವರ್ಷಗಳ ಹಳೆಯ ಟೆಸ್ಟ್ ದಾಖಲೆಯನ್ನು ಆಂಡರ್ಸನ್ ಚಿಂದಿ ಉಡಾಯಿಸಿದ್ದಾರೆ.
ಆಂಡರ್ಸನ್ಗೆ ಈಗ 40 ವರ್ಷ ದಾಟಿದೆ. ಆದರೆ ಟೆಸ್ಟ್ ಕ್ರಿಕೆಟ್ ವಿಷಯಕ್ಕೆ ಬಂದಾಗ ಮಾತ್ರ ಅವರು ಇನ್ನೂ ಚಿರಯುವಕ. ದಕ್ಷಿಣ ಆಫ್ರಿಕಾ ವಿರುದ್ಧದ ನಡೆಯುತ್ತಿರುವ ಲಾರ್ಡ್ಸ್ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ ಒಂದು ವಿಕೆಟ್ ಕೂಡ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಟೆಸ್ಟ್ ನಾಯಕ ಡೀನ್ ಎಲ್ಗರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಆಂಡರ್ಸನ್ 40 ವರ್ಷದ (40 years) ಬಳಿಕ ಟೆಸ್ಟ್ ವಿಕೆಟ್ ಪಡೆದ ಮೊದಲ ಫಾಸ್ಟ್ ಬೌಲರ್ ಅನ್ನುವ ಖ್ಯಾತಿ ಪಡೆದುಕೊಂಡರು. ಆಂಡರ್ಸನ್ಗೆ 40 ವರ್ಷ ಮತ್ತು 19 ದಿನಗಳು.
ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಸಿಡ್ನಿ ಬರ್ನ್ಸ್ 39 ವರ್ಷ ಮತ್ತು 52 ದಿನಗಳಲ್ಲಿ ಟೆಸ್ಟ್ ವಿಕೆಟ್ ಪಡೆದಿದ್ದು ದಾಖಲೆಯಾಗಿತ್ತು.
ಸಚಿನ್ ತೆಂಡೂಲ್ಕರ್, ರಂಗನಾ ಹೆರಾತ್ 40 ವರ್ಷದ ಬಳಿಕ ಟೆಸ್ಟ್ ವಿಕೆಟ್ ಪಡೆದಿದ್ದರು. ಆದರೆ ಅವರಿಬ್ಬರೂ ಸ್ಪಿನ್ ಬೌಲರ್ಗಳಾಗಿದ್ದರು.