IND Vs ENG – ಜಾನಿ ಬೇರ್ ಸ್ಟೋವ್ ಗೆ ಶಟ್ ಅಪ್- ಹೋಗಿ ಬ್ಯಾಟಿಂಗ್ ಮಾಡು – ವಿರಾಟ್ ಕೊಹ್ಲಿ..!
ಕೆಲವೊಂದು ಸಲ ವಿರಾಟ್ ಕೊಹ್ಲಿ ಇಷ್ಟವಾಗೋದು ಇದೇ ಕಾರಣಕ್ಕೆ. ಎದುರಾಳಿ ತಂಡದ ಆಟಗಾರರ ಅಹಂಗೆ ತಕ್ಕ ಉತ್ತರ ನೀಡುವುದು ಅದು ವಿರಾಟ್ ಗೆ ಮಾತ್ರ ಸಾಧ್ಯ. ಅಂತರಲ್ಲ.. ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತ. ಅದೇ ರೀತಿ ವಿರಾಟ್ ಕೊಹ್ಲಿಯವರು ಕೂಡ.
ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆರಂಭದಲ್ಲೇ ವಿರಾಟ್ ಕೊಹ್ಲಿ ಮತ್ತು ಜಾನಿ ಬೇರ್ ಸ್ಟೋವ್ ನಡುವೆ ಜಟಾಪಟಿ ನಡೆಯಿತ್ತು.
https://twitter.com/i/status/1543539804347850752
ಪಂದ್ಯದ 33ನೇ ಓವರ್ ಅನ್ನು ಟೀಮ್ ಇಂಡಿಯಾದ ನಾಯಕ ಜಸ್ಪ್ರಿತ್ ಬೂಮ್ರಾ ಮಾಡುತ್ತಿದ್ದರು. ಈ ವೇಳೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ನ ಜಾನಿ ಬೇರ್ ಸ್ಟೋವ್ ನಡುವೆ ಮಾತಿನ ಜಟಾಪಟಿ ನಡೆಯಿತ್ತು. ಅಂತಿಮವಾಗಿ ವಿರಾಟ್ ಕೊಹ್ಲಿ ಅವರು ಶಟ್ ಅಪ್. ಹೋಗಿ ಬ್ಯಾಟಿಂಗ್ ಮಾಡು ಎಂದು ಹೇಳಿದ್ದಾರೆ.
ಹಾಗಂತ ವಿರಾಟ್ ಮತ್ತು ಜಾನಿ ಬೇರ್ ಸ್ಟೋವ್ ನಡುವೆ ಮಾತಿನ ಚಕಮಕಿ ನಡೆದಿರುವುದು ಇದು ಮೊದಲಲ್ಲ. ಪಂದ್ಯದ ಎರಡನೇ ದಿನ ಕೂಡ ಇವರಿಬ್ಬರ ನಡುವೆ ವಾಕ್ಸಮರ ನಡೆದಿತ್ತು. ಮಹಮ್ಮದ್ ಶಮಿ ಬೌಲಿಂಗ್ ನಲ್ಲಿ ಬೇರ್ ಸ್ಟೋವ್ ರನ್ ಗಳಿಸಲು ಒದ್ದಾಟ ನಡೆಸುತ್ತಿದ್ದರು. ಆಗ ವಿರಾಟ್ ನ್ಯೂಜಿಲೆಂಡ್ ನ ವೇಗಿ ಟಿಮ್ ಸೌಥಿ ಹೆಸರನ್ನು ಬಳಸಿಕೊಂಡು ಜಾನಿ ಬೇರ್ ಸ್ಟೋವ್ ಜೊತೆಗೆ ಸ್ಲೆಡ್ಜಿಂಗ್ ಕೂಡ ಮಾಡಿದ್ದರು.
https://twitter.com/KuchNahiUkhada/status/1543536571085115392?ref_src=twsrc%5Etfw%7Ctwcamp%5Etweetembed%7Ctwterm%5E1543536571085115392%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Fcricket
ಇನ್ನು ಕಳೆದ ವರ್ಷ ಕೂಡ ವಿರಾಟ್ ಕೊಹ್ಲಿ ಮತ್ತು ಜಾಯ್ ರೂಟ್ ನಡುವೆ ಮಾತಿನ ಸಮರ ನಡೆದಿತ್ತು.
ಇನ್ನು ಮೂರನೇ ದಿನದ ಪಂದ್ಯ ಆರಂಭವಾಗುವ ಮುನ್ನ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ನಗು ನಗುತ್ತಲೇ ಮಾತನಾಡುತ್ತಿದ್ದರು. ಆದ್ರೆ ಕೆಲವೇ ಸಮಯದಲ್ಲೇ ವಿರಾಟ್ ಮತ್ತು ಜಾನಿ ಬೇರ್ ಸ್ಟೋವ್ ನಡುವೆ ಮಾತಿನ ಸಮರ ನಡೆದಿದೆ. IND Vs ENG – Shut up. Just stand and bat’: Kohli involved in heated exchange with Bairstow
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಲಿ, ಆಟಗಾರನಾಗಲಿ, ಅಥವಾ ಹಿರಿಯ ಆಟಗಾರನೇ ಆಗಿರಲಿ. ಎದುರಾಳಿ ಆಟಗಾರರ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಚೆನ್ನಾಗಿ ಗೊತ್ತು. ಯಾಕಂದ್ರೆ ಎದುರಾಳಿ ಆಟಗಾರರು ಪರಸ್ಪರ ಮಾತಿನ ಸಮರ ನಡೆಸಿಕೊಂಡು ತಾಳ್ಮೆ ಕಳೆದುಕೊಳ್ಳುವಂತೆ ಮಾಡೋದು ಕೂಡ ಒಂದು ತಂತ್ರವಾಗಿದೆ.