icc womens world cup – ಪಾಕ್ ವಿರುದ್ಧ ಗೆಲುವಿನ ನಂತ್ರ ಮಗುವಿನ ಜೊತೆ ಆಟವಾಡಿದ ಭಾರತ ಮಹಿಳಾ ಆಟಗಾರ್ತಿಯರು..!
ಪ್ರೀತಿ ಮತ್ತು ಮಾನವೀಯತೆಗೆ ಯಾವುದೇ ಗಡಿ ಬಂಧನಗಳು ಇರುವುದಿಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಇದೀಗ ಈ ಸಾಲಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸೇರ್ಪಡೆಗೊಂಡಿದ್ದಾರೆ.
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ತಂಡವನ್ನು 107 ರನ್ ಗಳಿಂದ ಪರಾಭವಗೊಳಿಸಿತ್ತು.
ಅಂದ ಹಾಗೇ ದಾಯಾದಿಗಳ ನಡುವಿನ ಕದನವನ್ನು ಸಾಮಾನ್ಯವಾಗಿ ಯುದ್ದಕ್ಕೆ ಹೋಲಿಸಲಾಗುತ್ತದೆ. ಆದ್ರೆ ಈ ಪಂದ್ಯದಲ್ಲಿ ಅಷ್ಟೇನೂ ರೋಚಕತೆ ಇರಲಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅನ್ನುವುದನ್ನು ಬಿಟ್ರೆ ಭಾರತ ಮಹಿಳಾ ತಂಡದ ಎದುರು ಪಾಕಿಸ್ತಾನ ತಂಡ ಸುಲಭವಾಗಿ ಸೋಲು ಅನುಭವಿಸಿತ್ತು.
ಇನ್ನು ಪಂದ್ಯದ ಗೆಲುವನ್ನು ಸಹಜವಾಗಿಯೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಂಭ್ರಮಿಸಿದ್ದರು. ಜೊತೆಗೆ ಭಾರತ ಮಹಿಳಾ ತಂಡದ ಆಟಗಾರ್ತಿಯರು ಪಾಕಿಸ್ತಾನÀ ಮಹಿಳಾ ತಂಡದ ಡ್ರೆಸಿಂಗ್ ರೂಮ್ ನಲ್ಲಿ ಕಾಣಿಸಿಕೊಂಡು ಅಚ್ಚರಿಗೊಳಿಸಿದ್ರು. icc womens world cup- Mandhana, Harmanpreet meet youngest ‘Pakistani fan
ಹೌದು, ಪಂದ್ಯ ಗೆದ್ದ ನಂತರ ಭಾರತ ಮಹಿಳಾ ತಂಡದ ಆಟಗಾರ್ತಿಯರು ಸೀದಾ ಹೋಗಿದ್ದು ಪಾಕ್ ಮಹಿಳಾ ತಂಡದ ಡ್ರೆಸಿಂಗ್ ರೂಮ್‍ಗೆ. ಯಾಕಂದ್ರೆ ಭಾರತೀಯ ಮಹಿಳಾ ತಂಡದ ಆಟಗಾರ್ತಿಯ ಗಮನ ಸೆಳೆದಿದ್ದು ಪುಟ್ಟ ಮಗು.
ಹೌದು, ಪಾಕ್ ಮಹಿಳಾ ತಂಡದ ನಾಯಕಿ ಬಿಸ್ಮಾಹ್ ಮಹರೂಫ್ ಅವರ ಆರು ತಿಂಗಳ ಮಗುವನ್ನು ಭಾರತ ಮಹಿಳಾ ತಂಡದ ಆಟಗಾರ್ತಿಯರು ಎತ್ತಿಕೊಂಡು ಮುದ್ದಾಡಿದ್ರು. ಅಷ್ಟೇ ಅಲ್ಲ, ಮಗುವಿನ ಜೊತೆ ಸೆಲ್ಪಿ ಕೂಡ ತೆಗೆದುಕೊಂಡ್ರು. ಈ ಫೋಟೋವನ್ನು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದೆ.
ಭಾರತದ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್, ಸ್ಮøತಿ ಮಂದಾನ ಸೇರಿದಂತೆ ತಂಡದ ಆಟಗಾರ್ತಿಯರು ಕೆಲ ಸಮಯ ಬಿಸ್ಮಾಹ್ ಮಹರೂಪ್ ಮಗುವಿನ ಜೊತೆ ಆಟವಾಡಿದ್ರು.