ICC ತಿಂಗಳ ಮಹಿಳಾ ಆಟಗಾರ್ತಿ ರೇಸ್ ನಲ್ಲಿ ಜೆಮಿಮಾ ರೊಡ್ರಿಗಸ್
ಸೋಮವಾರ, ಸೆಪ್ಟೆಂಬರ್ 5 ರಂದು, ICC ತಿಂಗಳ ಮಹಿಳಾ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಜೆಮಿಮಾ ರೊಡ್ರಿಗಸ್, ಆಸ್ಟ್ರೇಲಿಯಾದ ಬೆತ್ ಮೂನಿ ಮತ್ತು ತಹಿಲಾ ಮೆಕ್‌ಗ್ರಾತ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಇನ್ನಿಂಗ್ಸ್ ಗಳನ್ನು ಆಡಿದ್ದರು. ಈ ಇನ್ನಿಂಗ್ಸ್ ಆಧಾರದಲ್ಲಿ ಈ ಮೂವರು ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ. ಐಸಿಸಿ ಸೆಪ್ಟೆಂಬರ್ 12 ರಂದು ವಿಜೇತರನ್ನು ಘೋಷಿಸುತ್ತದೆ.
ಜುಲೈ 29 ರಂದು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯದೊಂದಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪ್ರಾರಂಭವಾಯಿತು. ಈ ಎರಡು ತಂಡಗಳ ನಡುವಿನ ಫೈನಲ್ ಕೂಡ ಆಗಸ್ಟ್ 7 ರಂದು ನಡೆಯಿತು. ಬಹುಶಃ, ಈ ಕಾರಣದಿಂದಾಗಿ, ಈ ಎರಡು ತಂಡಗಳ ಆಟಗಾರರ ಹೆಸರುಗಳು ತಿಂಗಳ ಆಟಗಾರರ ಪಟ್ಟಿಯಲ್ಲಿವೆ.

ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಆಟಗಾರ್ತಿ ಜೆಮಿಮಾ 72ರ ಸರಾಸರಿಯಲ್ಲಿ 146 ರನ್ ಗಳಿಸಿದ್ದರು. ಇದು ಬಾರ್ಬಡೋಸ್ ವಿರುದ್ಧ 56 ರನ್‌ಗಳ ಅಜೇಯ ಇನ್ನಿಂಗ್ಸ್ ಅನ್ನು ಸಹ ಒಳಗೊಂಡಿದೆ. ಈ ಪಂದ್ಯದಲ್ಲಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದ್ದಿದ್ದರು. ಕಾಮನ್ ವೆಲ್ತ್ ಗೇಮ್ಸ್‌ನ ಫೈನಲ್‌ನಲ್ಲಿ ಜೆಮಿಮಾ 33 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಆದರೆ ಈ ಇನ್ನಿಂಗ್ಸ್ ತಂಡಕ್ಕೆ ಚಿನ್ನದ ಪದಕವನ್ನು ತೊಡಿಸುವಲ್ಲಿ ವಿಫಲವಾಯಿತು. ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಜೆಮಿಮಾ 5ನೇ ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧಾನ 159 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಬೆತ್ ಮೂನಿ ಮತ್ತು ತಹಿಲಾ ಮೆಕ್‌ಗ್ರಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ನಲ್ಲಿ ಆಡಿದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಅಂತಿಮ ಪಂದ್ಯದಲ್ಲಿ ಬೆತ್ ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ಗಾಗಿ ಅವರು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಮೂನಿ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 44 ರ ಸರಾಸರಿಯಲ್ಲಿ 179 ರನ್ ಗಳಿಸಿದ್ದರು. ಕಾಮನ್ ವೆಲ್ತ್‌ನಲ್ಲಿ 70 ರನ್ ಗಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಈ ಇನ್ನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ ಫೈನಲ್‌ನಲ್ಲಿ 161 ರನ್ ಗಳಿಸಲು ಸಾಧ್ಯವಾಯಿತು.

ಆಲ್‌ರೌಂಡರ್ ತಹಿಲಾ ಮೆಕ್‌ಗ್ರಾತ್ ಆಸ್ಟ್ರೇಲಿಯಾದ ಉಪಯುಕ್ತ ಆಟಗಾರ್ತಿ ಎಂದು ಸಾಬೀತುಪಡಿಸಿದ್ದಾರೆ. ತಹಿಲಾ ಮೆಕ್‌ಗ್ರಾತ್ ಅವರ ಆಲ್‌ರೌಂಡ್ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ತಹಿಲಾ ಐದು ಕಾಮನ್‌ವೆಲ್ತ್ ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 128 ರನ್ ಗಳಿಸಿದ್ದರು. ಅಲ್ಲದೆ ಅವರ ಹೆಸರಿನಲ್ಲಿ 8 ವಿಕೆಟ್ ಪಡೆದರು. ಕಾಮನ್‌ವೆಲ್ತ್‌ನಲ್ಲಿ ವಿಕೆಟ್ ಪಡೆಯುವಲ್ಲಿ ಎರಡನೇ ಸ್ಥಾನದಲ್ಲಿದ್ದರು.