US Open: ಹಾಲಿ ಚಾಂಪಿಯನ್ ಡೇನಿಯಲ್ ರನ್ನು ಮಣಿಸಿದ Nick Kyrgios
23ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಟೆನಿಸ್ ಆಟಗಾರ ನಿಕ್ ಕಿರ್ಗಿಯೋಸ್, US Open ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಮತ್ತು ವಿಶ್ವದ ಅಗ್ರಮಾನ್ಯ ಆಟಗಾರ ಡೇನಿಯಲ್ ಮೆಡ್ವೆಡೆವ್ ಅವರನ್ನು ನಾಲ್ಕು ಸೆಟ್‌ಗಳಲ್ಲಿ ಸೋಲಿಸಿದರು.
ಕಿರ್ಗಿಯೋಸ್ ಪಂದ್ಯವನ್ನು 7-6 (11), 3-6, 6-3, 6-2 ಸೆಟ್‌ಗಳಿಂದ ಗೆದ್ದು ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಇದು ಇಬ್ಬರು ಆಟಗಾರರ ನಡುವಿನ ಐದನೇ ಮುಖಾಮುಖಿಯಾಗಿದ್ದು, ನಾಲ್ಕನೇ ಬಾರಿ ನಿಕ್ ಗೆಲುವಿನ ನಗೆ ಬೀರಿದ್ದಾರೆ.
ಇಲ್ಲಿಯವರೆಗೆ ಮೆಡ್ವೆಡೆವ್ ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದರು. ಮತ್ತು ಅವರು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಂತೆ ಕಂಡು ಬಂದಿತು. ಆದರೆ ಸುಮಾರು ಮೂರು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ನಿಕ್, ಮೆಡ್ವೆಡೆವ್ ಅವರಿಗಿಂತ ಉತ್ತಮವಾಗಿ ಆಡಿದರು. ಪಂದ್ಯದ ವೇಳೆ ಮೆಡ್ವೆಡೆವ್ ಹೆಚ್ಚಿನ ತಪ್ಪುಗಳನ್ನು ಮಾಡಲಿಲ್ಲ, ಆದರೆ ನಿಕ್ ಉತ್ತಮವಾಗಿ ಆಡಿದರು. ನಿಕ್ ಅವರ ವಿಧಾನಗಳನ್ನು ನೋಡಿ ವೀಕ್ಷಕರು ಆಶ್ಚರ್ಯಚಕಿತರಾದರು ಮತ್ತು ಅವರಿಗೆ ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ನೀಡಿದರು.
ನಿಕ್ ಪಂದ್ಯದ ಉದ್ದಕ್ಕೂ ಒಟ್ಟು 21 ಎಸ್ ಗಳನ್ನು ಹೊಡೆದರು. ಈ ವರ್ಷ ನಿಕ್ ವಿಂಬಲ್ಡನ್‌ನ ಫೈನಲ್‌ಗೆ ತಲುಪಿದ್ದರು. ಮತ್ತು ಈಗ ಅವರ ಮೊದಲ ಗ್ರ್ಯಾನ್ ಸ್ಲಾಮ್ ಗೆಲ್ಲುವ ಹಸಿವು ಬಹುಶಃ ಹೆಚ್ಚಾಗಿದೆ. ಅವರು ಈಗ 27ನೇ ಶ್ರೇಯಾಂಕದ ಕರೆನ್ ಖಚಾನೊವ್ ಅವರನ್ನು ಎದುರಿಸಲಿದ್ದಾರೆ.
US Open, Australia, tennis, Nick Kyrgios, Daniil Medvedev