ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾದ ವನಿಯತೆಯರು 107 ರನ್ ಗಳ ಜಯ ಸಾಧಿಸಿದರೂ, ಮಂಗಳವಾರ ಬಿಡುಗಡೆಯಾದ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಟೀಮ್ ಇಂಡಿಯಾದ ನಾಯಕಿ ಮಿಥಾಲಿ ಹಾಗೂ ಭರವಸೆಯ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ತಲಾ ಎರಡು ಸ್ಥಾನ ಕುಸಿತ ಕಂಡಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೂಜಾ ಹಾಗೂ ಸ್ನೇಹಾ ಚೇತರಿಕೆ ಕಂಡಿದ್ದಾರೆ.
↗️ Lanning, Haynes move up in batters list
💪 Ayabonga Khaka soars in bowling chart
🚀 Hayley Matthews makes all-round gainsA lot of movements in the latest @MRFWorldwide ICC Women’s ODI Player Rankings update.
📝 https://t.co/MaJswVOBIS pic.twitter.com/ho8J1g652X
— ICC (@ICC) March 8, 2022
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ ಒಂಬತ್ತು ರನ್ ಗಳಿಸಲಷ್ಟೇ ಶಕ್ತರಾಗಿದ್ದರೆ, ಮಂಧಾನ 75 ಎಸೆತಗಳಲ್ಲಿ 52 ರನ್ ಗಳಿಸಿದರು. ಮಿಥಾಲಿ 718 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಎರಡು ಸ್ಥಾನವನ್ನು ಕುಸಿತ ಕಂಡಿರುವ ಸ್ಮೃತಿ 670 ಅಂಕಗಳೊಂದಿಗೆ 10ನೇ ಸ್ಥಾನ ತಲುಪಿದ್ದಾರೆ. ಭಾರತದ ಪರ ಸ್ನೇಹ್ ರಾಣಾ ಅಜೇಯ 53 ರನ್ ಗಳಿಸಿದರೆ, ಪೂಜಾ ವಸ್ತ್ರಕರ್ 67 ರನ್ ಗಳಿಸಿದರು. ಭಾರತವು ಪಾಕಿಸ್ತಾನದ ವಿರುದ್ಧ 107 ರನ್ಗಳ ಜಯ ಸಾಧಿಸಿತು. ವಸ್ತ್ರಾಕರ್ 64ನೇ ಸ್ಥಾನದಲ್ಲಿದ್ದರೆ, ರಾಣಾ ಟಾಪ್ 100ರಲ್ಲಿಲ್ಲ. ಬೌಲರ್ಗಳ ಪೈಕಿ ಜೂಲನ್ ಗೋಸ್ವಾಮಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದರೆ, ಆಲ್ರೌಂಡರ್ ದೀಪ್ತಿ ಶರ್ಮಾ ಆಲ್ರೌಂಡರ್ಗಳ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ 2022 ರ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಲ್ಯಾನಿಂಗ್ 727 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ. 742 ಅಂಕ ಹೊಂದಿರುವ ಅಲಿಸ್ಸಾ ಹೀಲಿ ಅಗ್ರ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ರಾಚೆಲ್ ಹೇನ್ಸ್ ಕೂಡ ಅಗ್ರ 10 ಬ್ಯಾಟ್ಸ್ಮನ್ಗಳೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ 130 ಎಸೆತಗಳಲ್ಲಿ 131 ರನ್ಗಳ ಅದ್ಭುತ ಇನ್ನಿಂಗ್ಸ್ನಿಂದ ಅವರು ಶ್ರೇಯಾಂಕದಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್ ನ ನಟಾಲಿ ಸ್ಕೈವರ್ ಕೂಡ ಇದರ ಲಾಭ ಪಡೆದಿದ್ದು, ಐದು ಸ್ಥಾನ ಮೇಲೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ.
ಇದಲ್ಲದೇ ವೆಸ್ಟ್ ಇಂಡೀಸ್ ನ ಹೇಲಿ ಮ್ಯಾಥ್ಯೂಸ್ ಆಲ್ ರೌಂಡ್ ಪ್ರದರ್ಶನದಿಂದ ಬ್ಯಾಟಿಂಗ್ ಹಾಗೂ ಬೌಲಿಂಗ್ ಜೊತೆಗೆ ಆಲ್ ರೌಂಡರ್ ರ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದಾರೆ.