ಓಲ್ಡ್ ಡ್ಯಾಡಿಸ್ ಆರ್ಮಿ. ಹೀಗಂತ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಕರೆಯುವುದು ಮಾಮೂಲಿ. ಆದರೆ ಈ ಓಲ್ಡ್ ಡ್ಯಾಡಿಗಳು ಆಟಕ್ಕೆ ನಿಂತರೆ ಯುವಕರನ್ನು ಕಿರು ಬೆರಳಿನಲ್ಲಿ ತಿರುಗಿಸುತ್ತಾರೆ. ತಂತ್ರ-ಪ್ರತಿತಂತ್ರಗಳಲ್ಲಿ ಈ ಡ್ಯಾಡಿಸ್ ಆರ್ಮಿಗೆ ಸವಾಲು ಹಾಕುವವರೇ ಇಲ್ಲ.
ಸಮಸ್ಯೆಗಳು ಸಾಮಾನ್ಯ. ಆದರೆ ಸಮಸ್ಯೆಗಳನ್ನು ಮರೆಮಾಚಿ ಆಡುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಿಗ್ಗೆಸ್ಟ್ ಅಡ್ವಾಂಟೇಜ್. ಮೈದಾನದಲ್ಲಿ ಫೀಲ್ಡಿಂಗ್ ಸ್ಲೋ ಆಗಿರಬಹುದು, ಆದರೆ ಅಟಿಟ್ಯುಡ್ ಮಾತ್ರ ಎಂದಿಗೂ ನಿಧಾನವಾಗುವುದಿಲ್ಲ. ಕೆಲ ಹೊಸ ಆಟಗಾರರು 4 ಬಾರಿಯ ಚಾಂಪಿಯನ್ ತಂಡ ಶಕ್ತಿ ಹೆಚ್ಚಿಸಿದ್ದಾರೆ.
ಚೆನ್ನೈ ಸಂಭಾವ್ಯ XI
ರುತುರಾಜ್ ಗಾಯಕ್ವಾಡ್
ಮೊಯಿನ್ ಅಲಿ
ರಾಬಿನ್ ಉತ್ತಪ್ಪ
ಅಂಬಟಿ ರಾಯುಡು
ಎಂ.ಎಸ್.ಧೋನಿ
ರವೀಂದ್ರ ಜಡೇಜಾ
ಡ್ವೈನ್ ಬ್ರಾವೋ
ದೀಪಕ್ ಚಹರ್
ರಾಜ್ವರ್ಧನ್ ಹಂಗರ್ಗೇಕರ್
ಡ್ವೈನ್ ಪ್ರಿಟೋರಿಯಸ್/ ಆ್ಯಡಂ ಮಿಲ್ನೆ
ಕ್ರಿಸ್ ಜೋರ್ಡಾನ್/ ಮಿಚೆಲ್ ಸ್ಯಾಂಟ್ನರ್
ಚೆನ್ನೈ ತಂಡಕ್ಕೆ ರೆಡಿಮೇಡ್ ಆಟಗಾರರಿದ್ದಾರೆ. ರುತುರಾಜ್ ಗಾಯಕ್ವಾಡ್ ಸರ್ವ ಋತು ಪ್ರದರ್ಶನ ನೀಡುವ ಆಟಗಾರ. ಫಾಫ್ ಡು ಪ್ಲೆಸಿಸ್ ಇಲ್ಲದ ಕಾರಣ ಮೊಯಿನ್ ಅಲಿಗೆ ಓಪನರ್ ಆಗಿ ಪ್ರೊಮೋಷನ್ ಸಿಗಲಿದೆ. ಮೊಯಿನ್ ಕ್ಲಿಕ್ ಆಗಿಲ್ಲವಾದರೆ ಡೆವೊನ್ ಕಾನ್ವೆ ಅನ್ನುವ ಟಿ20 ಕ್ರಿಕೆಟ್ನ ರನ್ ಬೇಟೆಗಾರನಿದ್ದಾನೆ. ಸಿಎಸ್ಕೆ ಲೆಫ್ಟ್-ರೈಟ್ ಕಾಂಬಿನೇಷನ್ ಕೂಡ ಸಿಗಲಿದೆ. ರಾಬಿನ್ ಉತ್ತಪ್ಪ ವನ್ ಡೌನ್ನಲ್ಲಿ ಪ್ಯಾಡ್ ಕಟ್ಟಲಿದ್ದಾರೆ. ಒಂದು ವೇಳೆ ಉತ್ತಪ್ಪ ವೈಫಲ್ಯ ಕಂಡರೆ ಸಿಮರ್ ಜಿತ್ ಸಿಂಗ್ ಅನ್ನುವ ಯುವ ಆಟಗಾರ ರೆಡಿಯಾಗಿದ್ದಾನೆ. ಶಿವಂ ದುಬೆ ಕೂಡ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಅಂಬಟಿ ರಾಯುಡು, ನಾಯಕ ಧೋನಿ ಮತ್ತು ರವೀಂದ್ರ ಜಡೇಜಾ ಪ್ರೂವ್ ಮಾಡಲು ಏನೂ ಉಳಿದಿಲ್ಲ. ಕ್ರಿಕೆಟ್ನಿಂದ ದೂರ ಇದ್ದರೂ ರಾಯುಡು ಮತ್ತು ಧೋನಿ ಕಸುವು ಕಡಿಮೆ ಆಗಿಲ್ಲ. ಜಡೇಜಾ ಈಗ ರಾಕ್ ಸ್ಟಾರ್ ಜಡೇಜಾ ಆಗಿದ್ದಾರೆ. ಚಹರ್, ಬ್ರಾವೋ ಮತ್ತು ಅಂಡರ್ 19 ಕಿಂಗ್ ರಾಜ್ವರ್ಧನ್ ಹಂಗರ್ಗೇಕರ್ ಕೆಳ ಸರದಿಯಲ್ಲಿ ಇನ್ನಿಂಗ್ಸ್ ಫಿನಿಷ್ ಮಾಡಬಲ್ಲರು. ಡ್ವೈನ್ ಪ್ರಿಟೋರಿಯಸ್ , ಆ್ಯಡಂ ಮಿಲ್ನೆ, ಕ್ರಿಸ್ ಜೋರ್ಡಾನ್ ಮತ್ತು ಮಿಚೆಲ್ ಸ್ಯಾಂಟ್ನರ್ ಸ್ಥಾನ ಕೆಲ ಪಂದ್ಯಗಳಲ್ಲಿ ಬದಲಾಗಬಹುದು.
ಬೌಲಿಂಗ್ ಕೂಡ ಸಿಎಸ್ಕೆ ಸಮಸ್ಯೆ ಇಲ್ಲ. ಚಹರ್ ಮತ್ತು ರಾಜ್ ವರ್ಧನ್ ಹೊಸ ಚೆಂಡು ಹಂಚಿಕೊಳ್ಳಬಲ್ಲರು. ಜಡೇಜಾ ಮತ್ತು ಮೊಯಿನ್ ಸ್ಪಿನ್ ಲಾಭ ತಂಡಕ್ಕೆ ಸಿಗಲಿದೆ. ಬ್ರಾವೋ ಡೆತ್ ಓವರ್ ಸ್ಪೆಷಲಿಸ್ಟ್. ಇವರಿಗೆ ಸಾಥ್ ನಿಡಲು ಮಿಲ್ನೆ, ಪ್ರಿಟೋರಿಯಸ್ ಅಥವಾ ಜೋರ್ಡಾನ್ ಸಜ್ಜಾಗುತ್ತಿದ್ದಾರೆ.
ಡ್ಯಾಡಿಸ್ ಆರ್ಮಿಯಲ್ಲಿ ಫೀಲ್ಡಿಂಗ್ ನಲ್ಲಿ ವೇಗವಿಲ್ಲ. ಆದರೆ ಕ್ಯಾಚ್ ಬಿಟ್ಟು ಮ್ಯಾಚ್ ಬಿಡುವವರೂ ಅಲ್ಲ. ಅವಕಾಶಕ್ಕಾಗಿ ಕಾಯದೆ, ಅವಕಾಶ ಮಾಡಿಕೊಂಡು ಆಡುವುದೇ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಗುಟ್ಟು.