ICC Women World cup 2022– ಅಭ್ಯಾಸ ಪಂದ್ಯದಲ್ಲಿ ಸ್ಮತಿ ಮಂದಾನ ತಲೆಗೆ ಏಟು..!

ಮಹಿಳಾ ಏಕದಿನ ವಿಶ್ವಕಪ್ ಗೆ ಮುನ್ನವೇ ಭಾರತ ಮಹಿಳಾ ತಂಡಕ್ಕೆ ಆಘಾತವಾಗಿದೆ. ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮøತಿ ಮಂದಾನ ಅವರು ಗಾಯಗೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಸ್ಮøತಿ ಮಂದಾನ ಅವರ ತಲೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ಅವರು ರಿಟೈರ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅಲ್ಲದೆ ಫೀಲ್ಡಿಂಗ್ ಕೂಡ ಮಾಡಲು ಅಂಗಣಕ್ಕೆ ಇಳಿಯಲಿಲ್ಲ.
ಐಸಿಸಿ ವೆಬ್ ಸೈಟ್ ಪ್ರಕಾರ, ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವೇಗಿ ಶಬ್ನಿಮ್ ಇಸ್ಮಾಯಿಲ್ ಅವರ ಬೌನ್ಸರ್ ಎಸೆತ ಮಂದಾನ ಅವರ ಹೆಲ್ಮೆಟ್ ಗೆ ಬಡಿದ ಕಾರಣ ತಲೆಗೆ ಏಟು ಬಿದ್ದಿದೆ. ಆದ್ರೆ ಸ್ಮøತಿ ಮಂದಾನ ಅವರಿಗೆ ಗಂಭೀರ ಗಾಯವಾಗಿಲ್ಲ. ಮುನ್ನೆಚ್ಚೆರಿಕೆಯ ಕ್ರಮದಿಂದಾಗಿ ವಿಶ್ರಾಂತಿ ಪಡೆದುಕೊಂಡಿದ್ದಾರೆ.
ಸ್ಮøತಿ ಮಂದಾನ ಅವರು ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಕೊನೆಯ ಏಕದಿನ ಪಂದ್ಯದಲ್ಲಿ ಸ್ಮøತಿ ಮಂದಾನ ಅವರು 84 ಎಸೆತಗಳಲ್ಲಿ 71 ರನ್ ದಾಖಲಿಸಿದ್ದರು. ಅಲ್ಲದೆ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ವೈಟ್ ವಾಶ್ ಅವಮಾನವನ್ನು ತಪ್ಪಿಸಿದ್ರು. ICC Women World cup 2022- India opener Smriti Mandhana hit on head in World Cup warm-up
ಅಭ್ಯಾಸ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಎರಡು ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಹರ್ಮನ್ ಪ್ರೀತ್ ಕೌರ್ ಮತ್ತು ರಾಜೇಶ್ವರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ಮಹಿಳಾ ತಂಡ 9 ವಿಕೆಟ್ ಗೆ 244 ರನ್ ದಾಖಲಿಸಿತ್ತು. ಹರ್ಮನ್ ಪ್ರಿತ್ ಕೌರ್ ಆಕರ್ಷಕ ಶತಕ (114) ದಾಖಲಿಸಿದ್ರು.
ಆದ್ರೆ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ ನಿರಾಸೆ ಅನುಭವಿಸಿತ್ತು. ರಾಜೇಶ್ವರಿ ಗಾಯಕ್ವಾಡ್ ಅವರು 46ಕ್ಕೆ 4 ವಿಕೆಟ್ ಉರುಳಿಸಿದ್ರು.