ICC Women World Cup 2022- ಮಿಥಾಲಿ ಬಳಗದ ಸೋಲನ್ನು ಸಂಭ್ರಮಿಸಿದ ವೆಸ್ಟ್ ಇಂಡೀಸ್ ಆಟಗಾರ್ತಿಯರು..!

ಆಟದಲ್ಲಿ ಗೆಲುವನ್ನು ಸಂಭ್ರಮಿಸುವುದು ಸಹಜ. ಆದ್ರೆ ಇನ್ನೊಂದು ತಂಡದ ಸೋಲನ್ನು ಮತ್ತೊಂದು ತಂಡ ಸಂಭ್ರಮಿಸುವುದು ಸರಿನಾ ?
ಹೌದು, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೆಮಿಫೈನಲ್ ಆಸೆ ಕಮರಿ ಹೋಗಿದೆ. ಕೊನೆಯ ಎಸೆತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಮಿಥಾಲಿ ಬಳಗ ಟೂರ್ನಿಯಿಂದಲೇ ಹೊರನಡೆಯಿತ್ತು.
ಭಾರತ ಮಹಿಳಾ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ರೂ ಅಷ್ಟೊಂದು ಸಂಭ್ರಮಪಡಲಿಲ್ಲ. ಕಾರಣ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶ ಖಚಿತವಾಗಿತ್ತು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಆದ್ರೆ ವೆಸ್ಟ್ ಇಂಡೀಸ್ ಮಹಿಳಾ ತಂಡ ಭಾರತದ ಸೋಲನ್ನೇ ಎದುರು ನೋಡುತ್ತಿತ್ತು. ಇದಕ್ಕೂ ಕಾರಣ ಇದೆ. ಒಂದು ವೇಳೆ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸುತ್ತಿದ್ರೆ ವೆಸ್ಟ್ ಇಂಡೀಸ್ ತಂಡ ಮನೆ ದಾರಿ ಹಿಡಿಯಬೇಕಾಗಿತ್ತು. ಆದ್ರೆ ಮಿಥಾಲಿ ಬಳಗ ಮಾಡಿರುವ ಎಡವಟ್ಟು ವೆಸ್ಟ್ ಇಂಡೀಸ್ ತಂಡಕ್ಕೆ ವರದಾನವಾಯ್ತು.
ವೆಸ್ಟ್ ಇಂಡೀಸ್ ಆಡಿರುವ ಏಳು ಪಂದ್ಯಗಳಲ್ಲಿ ಏಳು ಅಂಕ ಪಡೆದುಕೊಂಡಿತ್ತು. ಭಾರತ ಆರು ಪಂದ್ಯಗಳಲ್ಲಿ ಆರು ಅಂಕ ಪಡೆದಿತ್ತು. ಹೀಗಾಗಿ ಸೆಮಿಫೈನಲ್ ಪ್ರವೇಶಿಸಬೇಕಾದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲೇಬೇಕಾಗಿತ್ತು. ಆದ್ರೆ ಮಿಥಾಲಿ ಬಳಗ ಸೋತು ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿತ್ತು.
ಇದೀಗ ವೆಸ್ಟ್ ಇಂಡೀಸ್ ಆಟಗಾರ್ತಿಯರು ಭಾರತದ ಸೋಲನ್ನು ಸಂಭ್ರಮಿಸಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
To the semi-finals WI go!!!!! #CWC22 #TeamWestIndies pic.twitter.com/OHRr7vPpcT
— Windies Cricket (@windiescricket) March 27, 2022