ಐಸಿಸಿ ಟಿ-20 ವಿಶ್ವಕಪ್ನಲ್ಲಿ ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ಗ್ರೂಪ್ 1ನ್ನು ಗ್ರೂಪ್ ಆಫ್ ಡೆತ್ ಅಂತಲೇ ಕರೆಯಲಾಗುತ್ತಿದೆ. ಈಗಾಗಲೇ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ಆಡಿರುವ ಎರಡು ಪಂದ್ಯಗಳನ್ನು ಕಳೆದುಕೊಂಡಿದೆ. ಇಂಗ್ಲೆಂಡ್ 2 ಪಂದ್ಯವನ್ನು ಗೆದ್ದರೆ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಆಡಿದ್ದು ಒಂದೇ ಮ್ಯಾಚ್ ಆದರೂ ಅದನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ಒಂದನ್ನು ಸೋತು, ಮತ್ತೊಂದನ್ನು ಗೆದ್ದಿದೆ. ಹೀಗಾಗಿ ದುಬೈನಲ್ಲಿ ನಡೆಯುವ ಆಸ್ಟ್ರೇಲಿಯಾ- ಶ್ರೀಲಂಕಾ ಪಂದ್ಯದಲ್ಲಿ ಹಲವು ಲೆಕ್ಕಾಚಾರ ಅಡಗಿದೆ. ಈ ಪಂದ್ಯವನ್ನು ಗೆದ್ದವರು ಸೆಮಿಫೈನಲ್ಗೆ ಬಹಳ ಹತ್ತಿರವಾಗಲಿದ್ದಾರೆ.
ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವನ್ನು ತಿಣುಕಾಡಿ ಗೆದ್ದಿತ್ತು. ಬೌಲಿಂಗ್ನಲ್ಲಿ ಶಕ್ತಿ ಹೊಂದಿದ್ದರೂ ಬ್ಯಾಟಿಂಗ್ ಸ್ಥಿರತೆ ಇಲ್ಲ. ಆದರೆ ಕಾಂಗರೂ ತಂಡ ಯಾವಾಗ ಬೇಕಾದರೂ ಸಿಡಿಯಬಹುದು. ಅನುಭವದ ಲಾಭ ಪಡೆದು ಎದುರಾಳಿಯನ್ನು ಹೊಡೆದು ಹಾಕಬಲ್ಲದು. ಸ್ಪೋಟಕ ಬ್ಯಾಟಿಂಗ್ ಲೈನ್ ಅಪ್ ಮತ್ತು ಶಿಸ್ತುಬದ್ಧ ಬೌಲರ್ಗಳು ಎದುರಾಳಿಗಳಿಗೆ ಕಂಟಕವಾಗುವುದು ಗ್ಯಾರೆಂಟಿ.
ಇತ್ತ ಶ್ರೀಲಂಕಾ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯವನ್ನು ಗೆದ್ದಿದೆ. ಆದರೆ ಚರಿತ ಅಸಲಂಕಾ ಮತ್ತು ಭಾನುಕ ರಾಜಪಕ್ಸೆ ಬಿಟ್ಟರೆ ಬ್ಯಾಟಿಂಗ್ನಲ್ಲಿ ಉಳಿದವರು ಕೈಕೊಟ್ಟಿದ್ದರು. ಬೌಲಿಂಗ್ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿರಲಿಲ್ಲ. ಆದರೆ ಬಾಂಗ್ಲಾ ವಿರುದ್ಧದ ಗೆಲುವು ಶ್ರೀಲಂಕಾದ ಆತ್ಮವಿಶ್ವಾಸ ಹೆಚ್ಚಿದೆ. ಆಸ್ಟ್ರೇಲಿಯಾ ಸ್ಪಿನ್ನರ್ಗಳ ವಿರುದ್ಧ ಪರದಾಡಿದ ಉದಾಹರಣೆ ಇರುವುದರಿಂದ ಸ್ಪಿನ್ನರ್ಗಳನ್ನು ಹೆಚ್ಚಾಗಿ ಬಳಸಿಕೊಳ್ಳಬಹುದು
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದರಿಂದ ಟಾಸ್ ಮೇಲೆ ಎಲ್ಲರ ಕಣ್ಣು ಇರಲಿದೆ. ಡ್ಯೂ ಫ್ಯಾಕ್ಟರ್ ಮೇಲೆ ನಾಯಕರ ನೋಟ ಇರುವುದರಿಂದ ಟಾಸ್ ಫಲಿತಾಂಶ ನಿರ್ಧಾರ ಮಾಡಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸ್ಥಿರ ಆಟದ ಕೊರತೆ ಎದುರಿಸುತ್ತಿರುವ ಎರಡು ತಂಡಗಳು ಹೋರಾಟಕ್ಕೆ ಅಣಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಂಭಾವ್ಯ XI
ಶ್ರೀಲಂಕಾ:
- ಪತುನ್ ನಿಸ್ಸಂಕಾ, 2.ಕುಸಾಲ್ ಪೆರಾರ, 3. ಚರಿತ ಅಸಲಂಕ, 4. ಆವಿಷ್ಕಾ ಫೆರ್ನಾಂಡೊ, 5. ಭಾನುಕ ರಾಜಪಕ್ಸ, 6. ದಾಸುನ್ ಶನಕ, 7. ಚಮಿಕ ಕರುಣರತ್ನೆ, 8. ವಹಿಂದು ಹಸರಂಗ, 9. ಬಿನುರಾ ಫೆರ್ನಾಂಡೊ, 10. ಮಹೇಶ್ ತೀಕ್ಷಣ, 11.ಲಹಿರು ಕುಮಾರ
ಆಸ್ಟ್ರೇಲಿಯಾ:
- ಡೇವಿಡ್ ವಾರ್ನರ್, 2.ಆ್ಯರೋನ್ ಫಿಂಚ್, 3. ಮಿಚೆಲ್ ಮಾರ್ಷ್, 4. ಸ್ಟೀವನ್ ಸ್ಮಿತ್, 5. ಗ್ಲೆನ್ ಮ್ಯಾಕ್ಸ್ವೆಲ್, 6. ಮ್ಯಾಥ್ಯೂವೇಡ್, 7. ಮಾರ್ಕಸ್ ಸ್ಟೋಯ್ನಿಸ್, 8. ಆ್ಯಡಂ ಜಂಪಾ, 9. ಪ್ಯಾಟ್ ಕಮಿನ್ಸ್, 10. ಮಿಚೆಲ್ ಸ್ಟಾರ್ಕ್ 11.ಜೋಶ್ ಹ್ಯಾಜಲ್ವುಡ್