ಐಸಿಸಿ ಟಿ-20 ವಿಶ್ವಕಪ್ 2022 – ಅರ್ಹತೆ ಪಡೆದುಕೊಂಡ ಯುಎಇ ಮತ್ತು ಐರ್ಲೆಂಡ್

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಯುಎಇ ಮತ್ತು ಐರ್ಲೆಂಡ್ ತಂಡಗಳು ಅರ್ಹತೆ ಪಡೆದುಕೊಂಡಿವೆ.
ಈಗಾಗಲೇ 12 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿವೆ. 13 ಮತ್ತು 14ನೇ ತಂಡಗಳಾಗಿ ಯುಎಇ ಮತ್ತು ಐರ್ಲೆಂಡ್ ಆಡಲಿದೆ.
2022ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸಲಿವೆ. ಇನ್ನುಳಿದ ಎರಡು ತಂಡಗಳು ಯಾವುದು ಅನ್ನೋದು ಜುಲೈನಲ್ಲಿ ಗೊತ್ತಾಗಲಿದೆ. UAE and Ireland qualify for ICC T20 World Cup
r ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಅರ್ಹತಾ ಟೂರ್ನಿಯ ಎ ಗುಂಪಿನಲ್ಲಿ ಯುಎಇ ತಂಡ ಅಂತಿಮ ಪಂದ್ಯದಲ್ಲಿ ನೇಪಾಳ ತಂಡವನ್ನು 68 ರನ್ ಗಳಿಂದ

ಪರಾಭವಗೊಳಿಸಿತ್ತು. ಹಾಗೇ ಐರ್ಲೆಂಡ್ ತಂಡ 56 ರನ್ ಗಳಿಂದ ಒಮನ್ ತಂಡವನ್ನು ಸೋಲಿಸಿತು.
ಯುಎಇ ತಂಡ ಇದೀಗ ಎರಡನೇ ಬಾರಿ ಐಸಿಸಿ ಟೂರ್ನಿಯಲ್ಲಿ ಆಡಲಿದೆ. ಈ ಹಿಂದೆ 2014ರಲ್ಲಿ ಯುಎಇ ಅರ್ಹತೆ ಪಡೆದುಕೊಂಡಿತ್ತು.
ಐರ್ಲೆಂಡ್ ತಂಡ ಏಳನೇ ಬಾರಿ ಐಸಿಸಿ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದೆ.